ಕಲಬುರಗಿ: ಟ್ಯಾಂಕರ್ ಡಿಕ್ಕಿಯಾಗಿ ಕ್ರೂಷರ್ ನುಚ್ಚುನೂರು, 5 ಸಾವು

Posted By:
Subscribe to Oneindia Kannada

ಕಲಬುರಗಿ, ನವೆಂಬರ್ 21: ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು (ನ.21) ಬೆಳಗ್ಗೆ ಟ್ಯಾಂಕರ್ ಹಾಗೂ ಕ್ರೂಷರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ.

ಬೀದರ್- ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಕಲಬುರಗಿಯ ಅವರಾದ (ಬಿ) ಗ್ರಾಮದ ಬಳಿ ಈ ದರ್ಘಟನೆ ಸಂಭವಿಸಿದ್ದು, ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಕ್ರೂಷರ್ ನೋಡದ ಸ್ಥಿತಿಯಲ್ಲಿ ನುಚ್ಚುನೂರಾಗಿದೆ.

3 people dead and 6 injured in collision between a jeep and a tanker near Kalaburagi

ಮೃತರನ್ನು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಬಾರ್ಸಿ ಗ್ರಾಮದ ಗಂಗಾಧರ(60), ಭೀಮಾಶಂಕರ(42), ಉಜ್ವಲ್ ಕುಮಾರ್(13), ಆನಂದ್(26) ಎಂದು ಗುರುತಿಸಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.ಈ ಬಗ್ಗೆ ಕಲಬುರಗಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Five people dead in collision between a jeep and a tanker on the Bidar -Srirangapatna national highway near Kalaburagi on November 21. Case registered.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ