ಕಲಬುರಗಿ: ಜಾತ್ರೆಗೆಂದು ಹೊರಟವರು ಮಸಣ ಸೇರಿದರು

Posted By:
Subscribe to Oneindia Kannada

ಕಲಬುರಗಿ, ನವೆಂಬರ್ 25 : ಜಿಲ್ಲೆಯ ಅಫ್ಜಲಪುರ ತಾಲ್ಲೂಕು ಚೌಡಾಪುರ ಗ್ರಾಮದ ಬಳಿ ಕಾರು ಮತ್ತು ಆಟೋ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿವೆ.

ಆಟೋದಲ್ಲಿದ್ದ ಕಲಬುರಗಿ ನಿವಾಸಿ ಬೋರಮ್ಮ ಶಿರೂರಮಠ(30), ಗಾಣಗಾಪುರ ನಿವಾಸಿ ಮಹೇಶ ಶೆಟ್ಟಿ(25) ಮೃತಪಟ್ಟವರೆಂದು ಗುರುತಿಸಲಾಗಿದೆ. ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

2 dead, 4 injured in a collision between a car and auto near Chowdapur village in Kalaburagi

ಆಟೋದಲ್ಲಿ ನಾಲ್ವರು ಚಿನ್ಮಯಗಿರಿ ಜಾತ್ರೆಗೆ ಹೊರಟಿದ್ದರು. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2 dead, 4 injured in a collision between a car and auto near Chowdapur village in Kalaburagi district on November 25. Injured admitted at hospital

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ