Get Updates
Get notified of breaking news, exclusive insights, and must-see stories!

Kalaburagi North Elections: ಕಾಂಗ್ರೆಸ್‌ ಪ್ರಾಬಲ್ಯದ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳುವುದೇ ಕೇಸರಿ ಪಡೆ

ಕಲಬುರಗಿ, ಮಾರ್ಚ್‌ 24: ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರವು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿ ಬರುತ್ತದೆ. ಇದು ಕಲಬುರಗಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. ಈ ಕ್ಷೇತ್ರವು 2008 ರಿಂದ ಅಸ್ತಿತ್ವಕ್ಕೆ ಬಂದಿದೆ.

ಇದು ಸಾಮಾನ್ಯ ವರ್ಗದ ವಿಧಾನಸಭಾ ಕ್ಷೇತ್ರವಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದೆ. ಕಲಬುರಗಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಕಲಬುಗರಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ SC ಮತದಾರರು ಸರಿ ಸುಮಾರು 20,646 ರಷ್ಟಿದ್ದು, ಜನಗಣತಿಯ ಪ್ರಕಾರ 7.48 ರಷ್ಟಿದ್ದಾರೆ.

ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ST ಮತದಾರರು ಸರಿ ಸುಮಾರು 3,919 ರಷ್ಟಿದ್ದು, ಜನಗಣತಿಯ ಪ್ರಕಾರ ಶೇ 1.42 ರಷ್ಟಿದ್ದಾರೆ. ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸರಿ ಸುಮಾರು 1,44,080, ಇದು ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ 52.2 ರಷ್ಟಿದ್ದಾರೆ.

kalaburagi north constituency map

ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮೀಣ ಮತದಾರರು ಸರಿಸುಮಾರು 1,187 ಆಗಿದ್ದು, ಜನಗಣತಿಯ ಪ್ರಕಾರ ಶೇ 0.43 ರಷ್ಟಿದೆ. ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರದಲ್ಲಿ ನಗರ ಮತದಾರರು ಸರಿಸುಮಾರು 2,74,856 ಆಗಿದ್ದು, ಜನಗಣತಿಯ ಪ್ರಕಾರ ಶೇ 99.58 ರಷ್ಟಿದೆ.

2019 ರ ಲೋಕಸಭೆ ಚುನಾವಣೆಯಂತೆ ಕಲಬುರಗಿ ಉತ್ತರ ವಿಧಾನಸಭೆಯ ಒಟ್ಟು ಮತದಾರರು 276015 ರಷ್ಟಿದ್ದಾರೆ. 2019 ರ ಲೋಕಸಭಾ ಚುನಾವಣೆಯಂತೆ ಕಲಬುರಗಿ ಉತ್ತರ ವಿಧಾನಸಭೆಯ ಮತಗಟ್ಟೆಗಳ ಸಂಖ್ಯೆ 274 ರಷ್ಟಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ವಿಧಾನಸಭೆಯ ಮತದಾರರ ಮತದಾನ ಶೇ 56.9 ರಷ್ಟಾಗಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಲಬುರಗಿ ಉತ್ತರ ವಿಧಾನಸಭೆಯ ಮತದಾರರ ಮತದಾನ ಶೇ 54.27 ರಷ್ಟಾಗಿದೆ.

ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾಯಿತ ಶಾಸಕರು

2018 ರ ಅಸೆಂಬ್ಲಿ ಚುನಾವಣೆ: ಕಾಂಗ್ರೆಸ್‌ನಿಂದ ಕನೀಜ್ ಫಾತಿಮಾ
2013 ರ ಅಸೆಂಬ್ಲಿ ಚುನಾವಣೆ: ಕಾಂಗ್ರೆಸ್‌ನಿಂದ ಖಮರುಲ್ ಇಸ್ಲಾಮ್
2008 ರ ಅಸೆಂಬ್ಲಿ ಚುನಾವಣೆ: ಕಾಂಗ್ರೆಸ್‌ನಿಂದ ಖಮರುಲ್ ಇಸ್ಲಾಮ್

ಕಳೆದ ಬಾರಿಯ ಚುನಾವಣೆಯಲ್ಲಿ ಖಮರುಲ್‌ ಇಸ್ಲಾಂ ಅವರ ಪತ್ನಿ ಕನೀಜ್‌ ಫಾತಿಮಾ ಅವರು ಕನೀಜ್ ಫಾತಿಮಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 64, 311 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿಯ ಚಂದ್ರಕಾಂತ ಬಿ ಪಾಟೀಲ್ (ಚಂದು ಪಾಟೀಲ್) 58,371 ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಜೆಡಿಎಸ್‌ನ ನಾಸಿರ್ ಹುಸೇನ್ ಉಸ್ತಾದ್ ಅವರು 14,422 ಮತಗಳನ್ನು ತೆಗೆದುಕೊಂಡಿದ್ದಾರೆ.


Kalaburagi North Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಕೆ ಫಾತಿಮಾ (ಕಾಂಗ್ರೆಸ್‌) 64,311 ಚಂದ್ರಕಾಂತ್ ಬಿ ಪಾಟೀಲ (ಬಿಜೆಪಿ) 58,371
2013 ಖಮರುಲ್ ಇಸ್ಲಾಂ (ಕಾಂಗ್ರೆಸ್‌) 50,498 ನಾಸೀರ್ ಹುಸೇನ್ ಉಸ್ತಾದ್ (ಕೆಜೆಪಿ) 30,377
2008 ಖಮರುಲ್ ಇಸ್ಲಾಂ (ಕಾಂಗ್ರೆಸ್‌) 54,123 ಬಿ ಆರ್ ಪಾಟೀಲ್ (ಬಿಜೆಪಿ) 39,168

2018 ರ ಅಸೆಂಬ್ಲಿ ಚುನಾವಣಾ ಫಲಿತಾಂಶಗಳು ಪ್ರಕಾರ, ಶೇ 47.1ರಷ್ಟು ಮತಗಟ್ಟೆಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಶೇ 51.4 ಮತಗಟ್ಟೆಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದೆ. ಶೂನ್ಯ ಮತಗಟ್ಟೆಗಳಲ್ಲಿ ಜೆಡಿಎಸ್‌ ಮುನ್ನಡೆ ಸಾಧಿಸಿದೆ.

ಕಲಬುರಗಿ ಉತ್ತರ ವಿಧಾನಸಭಾ ಮತಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯವಿದೆ. ಕಲಬುರಗಿ ಉತ್ತರ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವಲ್ಲಿ ಬಿಜೆಪಿ ಸತತ ಪ್ರಯತ್ನ ನಡೆಸಿದೆ. ಖಮರುಲ್‌ ಇಸ್ಲಾಂ ಅವರ ಧರ್ಮಪತ್ನಿ ಹಾಗೂ ಹಾಲಿ ಶಾಸಕಿಯಾಗಿರುವ ಕನೀಜಾ ಫಾತಿಮಾ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ನಿಚ್ಚಳವಾಗಿದೆ. ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ಕ್ರೆಡಲ್‌ ಅಧ್ಯಕ್ಷ ಚಂದು ಪಾಟೀಲ್‌ ಅವರು ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ. ಪ್ರಥಮ ದರ್ಜೆ ಗುತ್ತಿಗೆದಾರ ಶಿವಕಾಂತ್‌ ಮಹಾಜನ್‌ ಅವರು ಸಹ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+