ಹೆರಿಗೆ ಸಮಯದಲ್ಲಿ ಗರ್ಭದಲ್ಲೇ ಉಳಿದ ಶಿಶುವಿನ ತಲೆ: ನರ್ಸ್ ಅಚಾತುರ್ಯ!

ರಾಮಗರ್(ರಾಜಸ್ಥಾನ), ಜನವರಿ 11: ನರ್ಸ್ ವೊಬ್ಬರ ಅಚಾತುರ್ಯದಿಂದ ಹೆರಿಗೆಯ ಸಮಯದಲ್ಲಿ ಮಗಿವಿನ ದೇಹ ತುಂಡಾಗಿ, ತಲೆ ತಾಯಿಯ ಗರ್ಭದಲ್ಲೇ ಉಳಿದ ಹೃದಯವಿದ್ರಾವಕ, ಆಘಾತಕಾರಿ ಘಟನೆ ರಾಜಸ್ಥಾನದ ರಾಮಗರ್ ನಲ್ಲಿ ನಡೆದಿದೆ.

ಜನವರಿ 6 ರಂದೇ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗರ್ಭಿಣಿಯೊಬ್ಬರು ಹೆರಿಗೆಗೆಂದು ರಾಮಗರದ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಜನವರಿ 6 ರಂದು ಹೆರಿಗೆಯ ಸಮಯದಲ್ಲಿ ಮಗುವನ್ನು ತಾಯಿಯ ಗರ್ಭದಿಂದ ಹೊರತೆಗೆಯುವಾಗ ಪುರುಷ ನರ್ಸ್ ವೊಬ್ಬರು ತೀರಾ ಒರಟಾಗಿ ಮಗುವಿನ ದೇಹವನ್ನು ಎಳೆದ ಪರಿಣಾಮ ಮಗುವಿನ ತಲೆ ಮತ್ತು ಕತ್ತಿನ ಕೆಳಭಾಗಗಳು ಬೇರೆ ಬೇರೆಯಾಗಿ, ತಲೆ ತಾಯಿಯ ಗರ್ಭದಲ್ಲೇ ಉಳಿದುಕೊಂಡಿತ್ತು.

ನರ್ಸ್ ಮಾಡಿದ ಈ ಅಚಾತುರ್ಯ ಮತ್ತು ನಿರ್ಲಕ್ಷ್ಯದಿಂದಾಗಿ ಆಸ್ಪತ್ರೆ ವಿರುದ್ಧ ರಾಜ್ಯ ಮಾನವ ಹಕ್ಕು ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.

Rajasthan: Male nurse splits baby in half in delivery time

ಘಟನೆಯ ನಂತರ ಮಹಿಳೆ ಮತ್ತು ಆಕೆಯ ಕುಟುಂಬಸ್ಥರ ಬಳಿ ಬಂದು ಹೆಚ್ಚಿನ ಚಿಕಿತ್ಸೆಗೆಂದು ಜೈಶಲ್ಮೇರ್ ಗೆ ತೆರಳುವಂತೆ ಈ ನರ್ಸ್ ಹೇಳಿದ್ದಾರೆ. ಹೆರಿಗೆ ತಜ್ಞರ ಬಳಿ ಹೋಗಿ ಹೆರಿಗೆಯನ್ನು ಮುಗಿಸಿದ್ದೇವೆ ಎಂದು ಸಹ ಹೇಳಿಕೊಂಡಿದ್ದಾರೆ.

ಈ ಹೇಯಕೃತ್ಯಕ್ಕೆ ನರ್ಸ್ ಗೆ ಕಠಿಣ ಶಿಕ್ಷೆಯಾಗಬೇಕೆಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+