ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಪುರ: ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ 9 ಮಂದಿಗೆ ಓಮಿಕ್ರಾನ್‌!

|
Google Oneindia Kannada News

ನವದೆಹಲಿ, ಡಿಸೆಂಬರ್‌ 06: ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು ಏರಿಕೆ ಕಾಣುತ್ತಲಿದೆ. ಭಾನುವಾರ ಮಹಾರಾಷ್ಟ್ರದಲ್ಲಿ ಏಳು ಮಂದಿಯಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡ ಬೆನ್ನಲ್ಲೇ ರಾಜಸ್ಥಾನದ ಜೈಪುರದಲ್ಲಿ ಒಟ್ಟು ಒಂಬತ್ತು ಮಂದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಈ ಒಂಬತ್ತು ಮಂದಿಯೂ ಕೂಡಾ ಇತ್ತೀಚೆಗೆ ನಗರದಲ್ಲಿ ನಡೆದ ಮದುವೆ ಸಮಾರಂಭ ಒಂದರಲ್ಲಿ ಭಾಗಿಯಾಗಿದ್ದರು ಎಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ವೈಭವ್ ಗಲ್ರಿಯಾ, "ನವೆಂಬರ್‌ 28 ನಡೆದ ವಿವಾಹ ಸಮಾರಂಭದಲ್ಲಿ ಭಾಗಿಯಾದ ಒಂಬತ್ತು ಮಂದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. ಈ ಪೈಕಿ ನಾಲ್ವರು ನವೆಂಬರ್‌ 25 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ನವೆಂಬರ್‌ ನವೆಂಬರ್‌ 28 ನಡೆದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ," ಎಂದು ತಿಳಿಸಿದ್ದಾರೆ.

"ಈ ಒಂಬತ್ತು ಮಂದಿಯ ಪೈಕಿ ನಾಲ್ವರು ಕೆಲ ದಿನಗಳ ಹಿಂದೆ ದಕ್ಷಿಣ ಆಫ್ರಿಕಾದಿಂದ ಬಂದವರು. ನಾಲ್ವರನ್ನು ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಯುಎಚ್‌ಎಸ್‌) ಗೆ ದಾಖಲು ಮಾಡಲಾಗಿದೆ. ಇನ್ನುಳಿದ ಐದು ಮಂದಿಯು ಹೋಮ್‌ ಐಸೋಲೇಶನ್‌ನಲ್ಲಿ ಇದ್ದಾರೆ," ಎಂದು ಹೇಳಿದರು. ಇನ್ನು ಜೈಪುರ ಸಿಎಂಎಚ್‌ಒ ನರೋತ್ತಮ್ ಶರ್ಮಾ ಮಾತನಾಡಿ, "ಈ ಐವರನ್ನು ಕೂಡಾ ರಾಜಸ್ಥಾನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಸ್ಥಳಾಂತರ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಯುತ್ತಿದೆ," ಎಂದು ಭಾನುವಾರ ಮಾಹಿತಿ ನೀಡಿದರು.

ಪಾಸಿಟಿವ್‌ ಹಿನ್ನೆಲೆ ಮನೆಗೆ ತೆರಳಿ ಮಾದರಿ ಸಂಗ್ರಹ

ಪಾಸಿಟಿವ್‌ ಹಿನ್ನೆಲೆ ಮನೆಗೆ ತೆರಳಿ ಮಾದರಿ ಸಂಗ್ರಹ

"ಆರ್‌ಯುಎಚ್‌ಎಸ್‌ನ ಐದನೇ ಮಹಡಿಯಲ್ಲಿ ಒಮಿಕ್ರಾನ್ ಸೋಂಕಿತರಿಗೆ ಕ್ವಾರಂಟೈನ್‌ ಆಗಲು ಮೀಸಲಿಡಲಾಗಿದೆ. ಈ ಪೈಕಿ ನಾಲ್ವರು ನವೆಂಬರ್‌ 25 ರಂದು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ನವೆಂಬರ್‌ ನವೆಂಬರ್‌ 28 ನಡೆದ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಬಳಿಕ ಜನತಾ ಕಾಲೋನಿಯಲ್ಲಿರುವ ಅವರ ಸಂಬಂಧಿಕರೊಬ್ಬರಿಗೆ ಡಿಸೆಂಬರ್ 1 ರಂದು ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಕೋವಿಡ್‌ ಪಾಸಿಟಿವ್‌ ಕಾಣಿಸಿಕೊಂಡಿದೆ. ಈ ಕಾರಣದಿಂದಾಗಿ ನಮ್ಮ ತಂಡವು ಮನೆಗೆ ತೆರಳಿ ಹಲವು ಮಂದಿಯ ಮಾದರಿಯನ್ನು ಸಂಗ್ರಹ ಮಾಡಿದ್ದೇವೆ. ಡಿಸೆಂಬರ್ 2 ರಂದು ಇನ್ನೂ ನಾಲ್ವರು ಕೋವಿಡ್ ಪಾಸಿಟಿವ್ ಆಗಿದೆ," ಎಂದು ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ವೈಭವ್ ಗಲ್ರಿಯಾ ಹೇಳಿದರು.

ಟ್ರಾವೆಲ್‌ ಹಿಸ್ಟರಿ ಆತಂಕ ಮೂಡಿಸಿದೆ

ಟ್ರಾವೆಲ್‌ ಹಿಸ್ಟರಿ ಆತಂಕ ಮೂಡಿಸಿದೆ

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಯುಎಚ್‌ಎಸ್‌ನ ಅಧೀಕ್ಷಕ ಡಾ ಅಜೀತ್ ಸಿಂಗ್, "ನಾಲ್ವರೂ ಆರೋಗ್ಯವಾಗಿದ್ದಾರೆ, ಯಾವುದೇ ಕೋವಿಡ್‌ ಲಕ್ಷಣಗಳು ಇಲ್ಲ. ಕೆಮ್ಮು ಅಥವಾ ಜ್ವರ ಇಲ್ಲ. ನಾವು ಅಗತ್ಯವಿರುವ ಪರೀಕ್ಷೆಗಳು, ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಗಳು ಇತ್ಯಾದಿಗಳನ್ನು ನಡೆಸುತ್ತಿದ್ದೇವೆ. ಅವರ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದೆ. ನಾಲ್ವರಿಗೆ ಈ ಹಿಂದಿನಿಂದಲೂ ಯಾವುದೇ ಕೋವಿಡ್‌ ಲಕ್ಷಣಗಳು ಒಮ್ಮೆಯೂ ಕಾಣಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಆದರೆ ಅವರ ಪ್ರಯಾಣ ಮಾಡಿರುವ ಬಗ್ಗೆಗಿನ ಮಾಹಿತಿ ಆತಂಕ ಮೂಡಿಸುವಂತಿದೆ. ಹಲವಾರು ಮಂದಿಗೆ ಕೋವಿಡ್‌ ಪಾಸಿಟಿವ್‌ ಬಂದಿರುವಾಗ ನಾವು ಜಾಗರೂಕರಾಗಿರಬೇಕಾಗಿದೆ. ಹೋಮ್‌ ಕ್ವಾರಂಟೈನ್‌ನಲ್ಲಿರುವವರ ಆರೋಗ್ಯ ಕೂಡಾ ಉತ್ತಮವಾಗಿದೆ," ಎಂದು ತಿಳಿಸಿದರು.

ಮದುವೆಯಲ್ಲಿ ಎಷ್ಟು ಮಂದಿ ಭಾಗಿ?

ಮದುವೆಯಲ್ಲಿ ಎಷ್ಟು ಮಂದಿ ಭಾಗಿ?

"ನವೆಂಬರ್ 28 ರಂದು ನಡೆದ ವಿವಾಹ ಸಮಾರಂಭದಲ್ಲಿ ಕನಿಷ್ಠ 100 ಜನರು ಭಾಗವಹಿಸಿದ್ದರು. ಆದರೆ ಆರೋಗ್ಯ ಅಧಿಕಾರಿಗಳು ದಕ್ಷಿಣ ಆಫ್ರಿಕಾದಿಂದ ಆಗಮಿಸಿದವರು ಸೇರಿದಂತೆ ಇದುವರೆಗೆ ಕೇವಲ 34 ಮಾದರಿಗಳನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಿದ್ದಾರೆ. ಈ 34 ಮಂದಿಯ ಪೈಕಿ ಒಂಬತ್ತು ಮಂದಿಯಲ್ಲಿ ಓಮಿಕ್ರಾನ್‌ ದೃಢಪಟ್ಟಿದೆ. 25 ಮಂದಿಗೆ ಕೋವಿಡ್‌ ಸೋಂಕು ಕಾಣಿಸಿಕೊಂಡಿಲ್ಲ," ಎಂದು ವೈದ್ಯಕೀಯ ಶಿಕ್ಷಣ ಕಾರ್ಯದರ್ಶಿ ವೈಭವ್ ಗಲ್ರಿಯಾ ಮಾಹಿತಿ ನೀಡಿದರು. ಈ ವಿವಾಹದಲ್ಲಿ ವಧು ನವದೆಹಲಿಯಿಂದ ಆಗಮಿಸಿದ್ದು, ವರ ರಾಜಸ್ಥಾನದ ಸಿಕರ್ ಜಿಲ್ಲೆಯ ಅಜಿತ್‌ಗಢದಿಂದ ಆಗಮಿಸಿದ್ದಾರೆ. ಉಳಿದ ಸಂಬಂಧಿಕರು ಜೈಪುರದಲ್ಲಿದ್ದರು. "ನಾವು ಎಂಟು ಮಂದಿಯ ಮಾದರಿಯನ್ನು ಸಂಗ್ರಹ ಮಾಡಿದ್ದೇವೆ. ನೆಗೆಟಿವ್‌ ಬಂದಿದೆ," ಎಂದು ವೈಭವ್ ಗಲ್ರಿಯಾ ಹೇಳಿದರು. "ಆರೋಗ್ಯ ಅಧಿಕಾರಿಗಳು ವಧುವಿನ ಕುಟುಂಬದ ಸಂಪರ್ಕ ಪತ್ತೆಹಚ್ಚಲು ವಿಳಾಸ ಮತ್ತು ಇತರ ವಿವರಗಳೊಂದಿಗೆ ನವದೆಹಲಿಯ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ," ಎಂದು ಜೈಪುರ ಸಿಎಂಎಚ್‌ಒ ನರೋತ್ತಮ್ ಶರ್ಮಾ ಹೇಳಿದರು.

ದೇಶದಲ್ಲಿ ಎಷ್ಟು ಮಂದಿಯಲ್ಲಿ ಓಮಿಕ್ರಾನ್‌

ದೇಶದಲ್ಲಿ ಎಷ್ಟು ಮಂದಿಯಲ್ಲಿ ಓಮಿಕ್ರಾನ್‌

ಭಾರತದಲ್ಲಿ ಮೊದಲ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ಪ್ರಕರಣವು ಕರ್ನಾಟಕ ರಾಜ್ಯದಲ್ಲಿ ಪತ್ತೆಯಾಗಿದೆ. ಕರ್ನಾಟಕದಲ್ಲಿ ಇಬ್ಬರಲ್ಲಿ ಓಮಿಕ್ರಾನ್‌ ಕಾಣಿಸಿಕೊಂಡಿದೆ. ಬಳಿಕ ಗುಜರಾತ್‌ನಲ್ಲಿ ಒಂದು ಪ್ರಕರಣವು ವರದಿ ಆಗಿದೆ. ಜಿಂಬಾಬ್ವೆಯಿಂದ ಜಾಮ್‌ನಗರಕ್ಕೆ ವಾಪಸ್‌ ಆಗಿದ್ದ 72 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಗುಜರಾತ್ ಆರೋಗ್ಯ ಇಲಾಖೆ ಹೇಳಿದೆ. ಆ ಬಳಿಕ ನಾಲ್ಕನೇ ಪ್ರಕರಣವು ಮಹಾರಾಷ್ಟ್ರದಲ್ಲಿ ದಾಖಲು ಆಗಿದೆ. ಆ ನಂತರ ಭಾರತದ ರಾಜಧಾನಿ ನವದೆಹಲಿಯಲ್ಲಿ ಕೊರೊನಾ ವೈರಸ್‌ನ ಹೊಸ ಓಮಿಕ್ರಾನ್‌ನ ಒಂದು ಪ್ರಕರಣ ಕಾಣಿಸಿಕೊಂಡಿದ್ದು, ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿಕೆ ಕಂಡಿತ್ತು. ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ತಾಂಜಾನಿಯಾದಿಂದ ಆಗಮಿಸಿದ ಒಬ್ಬ ವ್ಯಕ್ತಿ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು ಜಿನೋಮ್ ಸಿಕ್ವೆಂನ್ಸಿಗ್‌ನಲ್ಲಿ ಓಮಿಕ್ರಾನ್‌ ರೂಪಾಂತರ ಇರುವುದು ಕಂಡು ಬಂದಿದೆ," ಎಂದು ತಿಳಿಸಿದ್ದರು. ಇನ್ನು ಮಹಾರಾಷ್ಟ್ರದಲ್ಲಿ ಒಟ್ಟು ಏಳು ಓಮಿಕ್ರಾನ್‌ ಪ್ರಕರಣಗಳು ಕಾಣಿಸಿಕೊಂಡಿದೆ. ಈಗ ಜೈಪುರದಲ್ಲಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಒಂಬತ್ತು ಮಂದಿಯಲ್ಲಿ ಓಮಿಕ್ರಾನ್‌ ಕಂಡು ಬಂದಿದೆ. ಈ ಮೂಲಕ ದೇಶದಲ್ಲಿ ಓಮಿಕ್ರಾನ್‌ ಪ್ರಕರಣಗಳ ಸಂಖ್ಯೆಯು 21 ಕ್ಕೆ ಏರಿಕೆ ಆಗಿದೆ.

Recommended Video

Omicron Alert : ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದ ಸೌತ್ ಆಫ್ರಿಕಾದ‌ 10 ಮಂದಿ | Oneindia Kannada

English summary
Omicron variant reported in 9 people in Jaipur, all had attended wedding in city
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X