ರಾಜಸ್ಥಾನ ಲೋಕ ಸಮೀಕ್ಷೆ: ಅಸೆಂಬ್ಲಿ ಆಘಾತದ ನಂತರ ಬಿಜೆಪಿ ಚೇತರಿಕೆ

ಜೈಪುರ, ಮಾರ್ಚ್ 19: ಮಧ್ಯಪ್ರದೇಶದಂತೆ ರಾಜಸ್ಥಾನದಲ್ಲೂ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತೀವ್ರ ಆಘಾತ ಅನುಭವಿಸಿದ ಬಿಜೆಪಿಗೆ ನ್ಯೂಸ್ ನೇಷನ್ ಸಮೀಕ್ಷೆ ಹಿತಕರವಾಗಿ ಕಾಣಿಸುತ್ತಿದೆ.

ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಪತನಗೊಂಡ ಬಳಿಕವೂ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲಿದೆ. 2014ಕ್ಕಿಂತ ಹೆಚ್ಚಿನ ಸ್ಥಾನಗಳು ಹಾಗೂ ಹೆಚ್ಚಿನ ಶೇಕಡಾವಾರು ಮತಗಳನ್ನು ಗಳಿಸಲಿದೆ ಎಂದು ನ್ಯೂಸ್ ನೇಷನ್ ಸಮೀಕ್ಷೆ ತಿಳಿಸಿತ್ತು. ಇದೇ ರೀತಿ ರಾಜಸ್ಥಾನದಲ್ಲೂ ಮೋದಿ ಪ್ರಭಾವದಿಂದ ಮಾತ್ರ ಮತಗಳಿಕೆ ಸಾಧ್ಯವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ನ್ಯೂಸ್ ನೇಷನ್ ಸಮೀಕ್ಷೆಯಂತೆ 2019ರ ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 16 ಸ್ಥಾನಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆಯಿದೆ. ಜೊತೆಗೆ ಬಿಜೆಪಿ ಶೇ40 ರಷ್ಟು ಮತಗಳನ್ನು ಪಡೆಯಲಿದೆ. ಕಾಂಗ್ರೆಸ್ 9 ಸ್ಥಾನ ಹಾಗೂ ಶೇ 35ರಷ್ಟು ಮತಗಳನ್ನು ಗಳಿಸಲಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಹಾಗೂ ಕಾಂಗ್ರೆಸ್ 0 ಸ್ಥಾನ ಗಳಿಸಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಸೋಲು ಕಂಡಿತ್ತು. ಕಾಂಗ್ರೆಸ್ 100 ಸ್ಥಾನ ಗಳಿಸಿ ಬಹುಮತ ಗಳಿಸಿತು. ಆದರೆ, ಸರ್ಕಾರ ಸ್ಥಾಪನೆಗೆ ಬಿಎಸ್ಪಿ, ಪಕ್ಷೇತರರ ನೆರವು ಪಡೆಯಬೇಕಾಯಿತು.

ಮೋದಿ ಪ್ರಧಾನಿಯಾಗಲಿ ಎಂದ ರಾಜಸ್ಥಾನಿಗಳು

ಮೋದಿ ಪ್ರಧಾನಿಯಾಗಲಿ ಎಂದ ರಾಜಸ್ಥಾನಿಗಳು

ರಾಜಸ್ಥಾನದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂದು ಶೇ 47ರಷ್ಟು ಮಂದಿ ಮತ ಹಾಕಿದ್ದಾರೆ. ಶೇ 31 ರಷ್ಟು ಮಂದಿ ರಾಹುಲ್ ಗಾಂಧಿ ಪರ ನಿಂತಿದ್ದಾರೆ.

ನ್ಯೂಸ್ ನೇಷನ್ ನಡೆಸಿದ ದೇಶವ್ಯಾಪಿ ಸಮೀಕ್ಷೆಯ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಶೇ.47ರಷ್ಟು ಮತಗಳನ್ನು ಪಡೆದು, ಈಗಲೂ ಬಹುಜನರ ಆಯ್ಕೆಯ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಶೇ.30ರಷ್ಟು ಮಾತ್ರ ಮತ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಿಂದೆ ಉಳಿದಿದ್ದಾರೆ.

ಪ್ರಧಾನಿ ಪಟ್ಟಕ್ಕೆ ಯಾರು ಅರ್ಹರು ಎಂಬ ಪ್ರಶ್ನೆಗೆ ಉತ್ತರಿಸಿದ ದೇಶದ ಜನತೆ ಮೋದಿ ಪರ ಮತ ಹಾಕಿದ್ದಾರೆ. ಆದರೆ, ಬಿಜೆಪಿ ನೇತೃತ್ವದ ಎನ್ಡಿಎ ಜನಪ್ರಿಯತೆ ಕುಸಿದಿದೆ ಎಂದು ನ್ಯೂಸ್ ನೇಷನ್ ಹೇಳಿದೆ.

ಚುನಾವಣೆ ಸಂದರ್ಭದಲ್ಲಿ ಮುಖ್ಯ ವಿಷಯ

ಚುನಾವಣೆ ಸಂದರ್ಭದಲ್ಲಿ ಮುಖ್ಯ ವಿಷಯ

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಯಾವ ವಿಷಯ ಪ್ರಮುಖವಾಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಸ್ಥಾನದ ಜನತೆ, ಶೇ 16ರಷ್ಟು ಮಂದಿ ನಿರುದ್ಯೋಗ ಎಂದಿದ್ದಾರೆ. ಮಿಕ್ಕಂತೆ ಹಣದುಬ್ಬರ (ಶೇ 15), ಭ್ರಷ್ಟಾಚಾರ ಶೇ12, ಪ್ರಧಾನಿ ಅಭ್ಯರ್ಥಿ ಆಯ್ಕೆ ಗೊಂದಲ ಶೇ 12, ಅಪನಗದೀಕಾರಣ- ಜಿಎಸ್ಟಿ ಶೇ 8, ಮೂಲ ಸೌಕರ್ಯ ಕೊರತೆ ಶೇ 7, ಎಸ್ ಸಿ ಎಸ್ಟಿ ಕಾಯ್ದೆ ಶೇ 6, ಭಯೋತ್ಪಾದನೆ, ಭದ್ರತೆ ಇನ್ನಿತರ ವಿಷಯಗಳು ಶೇ5 ಕ್ಕಿಂತ ಕಡಿಮೆ ಮತಗಳನ್ನು ಪಡೆದಿವೆ.

ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಕಾರ್ಯ ವೈಖರಿ

ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಕಾರ್ಯ ವೈಖರಿ

ಕೇಂದ್ರ ಹಾಗೂ ರಾಜ್ಯಸರ್ಕಾರಗಳ ಕಾರ್ಯ ವೈಖರಿ ನಿಮಗೆ ತೃಪ್ತಿ ತಂದಿದೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲಾಗಿದೆ.

ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಪರ ಶೇ 52ರಷ್ಟು ಮತ ಬಂದಿದ್ದರೆ, ಶೇ 42ರಷ್ಟು ಮಂದಿ ಸರ್ಕಾರದ ವಿರುದ್ಧ ಮತ ಹಾಕಿದ್ದಾರೆ. ಶೇ 6ರಷ್ಟು ಮಂದಿ ಅಭಿಪ್ರಾಯ ತಿಳಿಸಿಲ್ಲ.

ಕೇಂದ್ರದ ಎನ್ಡಿಎ ಸರ್ಕಾರದ ಪರ ಶೇ 49ರಷ್ಟು ಮತ ಬಂದಿದ್ದರೆ, ಸರ್ಕಾರದ ವಿರುದ್ಧವಾಗಿ ಶೇ 37ರಷ್ಟು ಮತ ಬಂದಿದೆ, ಶೇ 14ರಷ್ಟು ಮಂದಿ ಯಾವುದೇ ಅಭಿಪ್ರಾಯ ನೀಡಿಲ್ಲ

ರಫೇಲ್ ಬಗ್ಗೆ ರಾಹುಲ್ ಗಾಂಧಿ ದಾಳಿ

ರಫೇಲ್ ಬಗ್ಗೆ ರಾಹುಲ್ ಗಾಂಧಿ ದಾಳಿ

ರಫೆಲ್ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ನಡೆಸಿರುವ ದಾಳಿ ಬಗ್ಗೆ ಪ್ರಶ್ನಿಸಲಾಗಿದ್ದು, ಶೇ42ರಷ್ಟು ಮಂದಿ ರಾಹುಲ್ ವಾದದಲ್ಲಿ ಹುರುಳಿದೆ ಎಂದಿದ್ದಾರೆ. ಶೇ 40ರಷ್ಟು ಮಂದಿ ಇದು ಸುಳ್ಳು ಆರೋಪ ಎಂದಿದ್ದಾರೆ. ಶೇ 18ರಷ್ಟು ಮಂದಿ ಅಭಿಪ್ರಾಯ ನೀಡಿಲ್ಲ.

ಮೇಲ್ವರ್ಗಕ್ಕೆ ಶೇ 10ರಷ್ಟು ಮೀಸಲಾತಿ: ಬಿಜೆಪಿಗೆ ವರದಾನ
ಹೌದು : ಶೇ 51, ಇಲ್ಲ : ಶೇ 35, ಅಭಿಪ್ರಾಯವಿಲ್ಲ : ಶೇ 14

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+