ಶಸ್ತ್ರಚಿಕಿತ್ಸೆ ಇಲ್ಲದೆ ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯ ಹೊರತೆಗೆದ ವೈದ್ಯರು

ಜೈಪುರ, ಆಗಸ್ಟ್ 1: ಅಪರೂಪದ ಘಟನೆಯೊಂದರಲ್ಲಿ, ರಾಜಸ್ಥಾನದ ಜೋಧ್‌ಪುರದ ವೈದ್ಯರು ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ ವ್ಯಕ್ತಿಯ ಹೊಟ್ಟೆಯಿಂದ 63 ನಾಣ್ಯಗಳನ್ನು ಹೊರತೆಗೆದಿದ್ದಾರೆ. ಶುಕ್ರವಾರ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಕುಟುಂಬದವರು ಮಥುರಾದಾಸ್ ಮಾಥುರ್ ಆಸ್ಪತ್ರೆಗೆ ಕರೆತಂದಿದ್ದರು. ವ್ಯಕ್ತಿಯ ದೇಹದೊಳಗೆ ಹಲವು ಲೋಹದ ವಸ್ತುಗಳನ್ನು ಕಂಡು ವೈದ್ಯರು ಬೆಚ್ಚಿಬಿದ್ದರು. ನಾಣ್ಯಗಳನ್ನು ಹೊರತೆಗೆಯಲು ವೈದ್ಯರು ಎರಡು ದಿನಗಳ ಕಾಲ ತೆಗೆದುಕೊಂಡರು.

40 ವರ್ಷದ ವ್ಯಕ್ತಿಯನ್ನು ಹೊಟ್ಟೆಯನ್ನು ಪರೀಕ್ಷಿಸಲು ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗಕ್ಕೆ ಕರೆತರಲಾಯಿತು. ಎಂಡೋಸ್ಕೋಪಿ ಸಮಯದಲ್ಲಿ, ವೈದ್ಯರು ಅವರ ಹೊಟ್ಟೆಯಲ್ಲಿ ಲೋಹದ ಉಂಡೆಯಂತಿರುವ ವಸ್ತುವನ್ನು ಕಂಡುಕೊಂಡರು.

"ನಾವು ಹೊಟ್ಟೆಯ ಮೇಲ್ಭಾಗದ ಗುಮ್ಮಟಾಕಾರದ ಭಾಗದಲ್ಲಿ ನಾಣ್ಯಗಳನ್ನು ಕಂಡುಕೊಂಡೆವು. ಅಲ್ಲಿ ತುಂಬಾ ನಾಣ್ಯಗಳಿದ್ದವು, ಆದ್ದರಿಂದ ಯಾವುದೇ ಶಸ್ತ್ರಚಿಕಿತ್ಸಾ ವಿಧಾನವಿಲ್ಲದೆ ಅವುಗಳನ್ನು ಹೊರತೆಗೆಯಲು ನಾವು ನಿರ್ಧರಿಸಿದ್ದೆವು. ಇದು ನಮಗೆ ಸವಾಲಿನ ಕೆಲಸವಾಗಿತ್ತು. ಮನುಷ್ಯನ ಅನ್ನನಾಳದ ಮೂಲಕ ಒಂದು ಬಾರಿಗೆ ಒಂದು ಅಥವಾ ಎರಡು ನಾಣ್ಯಗಳನ್ನು ಮಾತ್ರ ತೆಗೆಯಲು ಸಾಧ್ಯವಾಯಿತು. ಅದಕ್ಕಾಗಿಯೇ ಎಲ್ಲಾ ನಾಣ್ಯಗಳನ್ನು ಹೊರತೆಗೆಯಲು ಬಹಳ ಸಮಯ ತೆಗೆದುಕೊಂಡಿತು," ಎಂದು ಗ್ಯಾಸ್ಟ್ರೋ ವಿಭಾಗದ ಹಿರಿಯ ವೈದ್ಯ ಸುನಿಲ್ ದಾಧಿಚ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+