• search
  • Live TV
ಜೈಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಂಡತಿ ಆಸೆ ಈಡೇರಿಸಲು ನಿವೃತ್ತಿಯಾದ ದಿನ ಹೆಲಿಕಾಪ್ಟರ್ ಬುಕ್ ಮಾಡಿದ ಶಿಕ್ಷಕ

|

ಜೈಪುರ್ (ರಾಜಸ್ಥಾನ), ಸೆಪ್ಟೆಂಬರ್ 1: ರಾಜಸ್ಥಾನದ ಈ ಶಿಕ್ಷಕರು ತಮ್ಮ ಪತ್ನಿಯ ಆಸೆ ಈಡೇರಿಸುವ ಸಲುವಾಗಿ ನಿವೃತ್ತಿ ಆದ ದಿನ ಅತಿ ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದಾರೆ. ಹೆಲಿಕಾಪ್ಟರ್ ನ ಬಾಡಿಗೆಗೆ ಪಡೆಯುವುದಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ಈ ಶಿಕ್ಷಕರ ಪತ್ನಿ ಅವರ ಬಳಿ ಕೇಳಿದ್ದರಂತೆ. ಆಳ್ವಾರ್ ಜಿಲ್ಲೆಯ ಶಿಕ್ಷಕ ರಮೇಶ್ ಚಾಂದ್ ಮೀನಾ ತಮ್ಮ ಪತ್ನಿಯ ಆಸೆಯನ್ನು ಅಂತೂ ಈಡೇರಿಸಿದ್ದಾರೆ.

ಈ ಸಂತೋಷಕರವಾದ ಕ್ಷಣಕ್ಕೆ ಹಳ್ಳಿಗರು ಸಾಕ್ಷಿಯಾಗಿದ್ದಾರೆ. ಸಾಂಪ್ರದಾಯಿಕ ದಿರಿಸು, ಸನ್ ಗ್ಲಾಸ್ ಧರಿಸಿ ತಮ್ಮ ಪತ್ನಿ ಹಾಗೂ ಮೊಮ್ಮಗನ ಜತೆಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದಾರೆ ರಮೇಶ್. ಅಂದ ಹಾಗೆ ರಮೇಶ್ ಅವರ ಶಾಲೆಯ ಬಳಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಜೈಪುರ್ ನಿಂದ ನೂರೈವತ್ತು ಕಿಲೋಮೀಟರ್ ದೂರದ ತಮ್ಮ ಹಳ್ಳಿ ಮಲವಾಲಿಯಲ್ಲಿನ ಮನೆಗೆ ಹೆಲಿಕಾಪ್ಟರ್ ನಲ್ಲಿ ಈ ದಂಪತಿ ತೆರಳಿದ್ದಾರೆ.

ನವದೆಹಲಿಯಲ್ಲಿ ಇರುವ ಹೆಲಿಕಾಪ್ಟರ್ ಸೇವೆ ಒದಗಿಸುವ ಕಂಪೆನಿ ಬಳಿ ಹೆಲಿಕಾಪ್ಟರ್ ಅನ್ನು 3.70 ಲಕ್ಷ ರುಪಾಯಿಗೆ ಬುಕ್ ಮಾಡಿದ್ದಾರೆ ರಮೇಶ್. ಹದಿನೆಂಟು ನಿಮಿಷ ಆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ್ದಾರೆ. "ಇದು ಅವಿಸ್ಮರಣೀಯ ಪ್ರಯಾಣ" ಎಂದು ರಮೇಶ್ ಹೇಳಿದ್ದಾರೆ.

"ನಾವೊಂದು ದಿನ ಮನೆಯ ಮಹಡಿಯ ಮೇಲೆ ಕೂತಿದ್ದಾಗ, ಹೆಲಿಕಾಪ್ಟರ್ ವೊಂದನ್ನು ನೋಡಿ, ಅದಕ್ಕೆ ಬಾಡಿಗೆ ಎಷ್ಟಾಗುತ್ತದೆ ಅಂತ ನನ್ನ ಹೆಂಡತಿ ಕೇಳಿದ್ದಳು. ಆಕೆಯ ಆಸೆಯನ್ನು ಸಾಕಾರಗೊಳಿಸುವುದಕ್ಕೆ ನನ್ನ ನಿವೃತ್ತಿಯ ದಿನ ಹೆಲಿಕಾಪ್ಟರ್ ಬುಕ್ ಮಾಡಲು ನಿರ್ಧರಿಸಿದೆ. ಇದು ನಮ್ಮ ಮೊದಲ ಅನುಭವ. ನಮಗೆ ತುಂಬ ಅಂದರೆ ತುಂಬ ಸಂತೋಷ ಆಗಿದೆ" ಎಂದು ಪಿಟಿಐ ಸುದ್ದಿ ಸಂಸ್ಥೆ ಬಳಿ ಅವರು ಹೇಳಿಕೊಂಡಿದ್ದಾರೆ.

"ಜಿಲ್ಲಾಡಳಿತ ಮತ್ತು ಇತರ ಎಲ್ಲ ಇಲಾಖೆಗಳಿಂದ ಅಗತ್ಯ ಅನುಮತಿ ಪಡೆದುಕೊಂಡಿದ್ದೆ. ಈ ಇಡೀ ಪ್ರಕ್ರಿಯೆಯನ್ನು ಸುಲಭ ಮಾಡಿದ್ದಕ್ಕೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಧನ್ಯವಾದ ಹೇಳ್ತೀನಿ" ಎಂದು ರಮೇಶ್ ಚಾಂದ್ ಮೀನಾ ಹೇಳಿದ್ದಾರೆ.

English summary
Ramesh Chand Meena, teacher booked chopper on retirement day in Alwar district, Rajasthan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X