ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲಿಷು ಬಂದರೆ ಮಾತ್ರ ಅಮೆರಿಕದೊಳಗೆ ಪ್ರವೇಶ!

By Prasad
|
Google Oneindia Kannada News

ವಾಷಿಂಗ್ಟನ್ ಡಿಸಿ, ಜನವರಿ 17 : ನಿಮಗೆ ಉದ್ಯೋಗವಿದ್ದು, ಸಾಕಷ್ಟು ನೈಪುಣ್ಯತೆ ಇದ್ದು, ನಿರರ್ಗಳವಾಗಿ ಅಥವಾ ಅಧಿಕಾರಿಗಳಿಗೆ ಅರ್ಥವಾಗುವ ಹಾಗೆ ಇಂಗ್ಲಿಷ್ ನಲ್ಲಿ ಮಾತನಾಡಲು ಬರುತ್ತಿದ್ದರೆ ಸರಿ, ಇಲ್ಲದಿದ್ದರೆ ವಲಸಿಗರಿಗೆ ಅಮೆರಿಕ ಬಾಗಿಲು ಬಂದ್!

ಇದರ ಅರ್ಥ, ಅರ್ಹತೆ ಇದ್ದವರಿಗೆ ಮಾತ್ರ ಅಮೆರಿಕ ಪ್ರವೇಶಿಸಲು ಸಾಧ್ಯ. ವಲಸಿಗರು ಜಗತ್ತಿನ ಯಾವ ಮೂಲೆಯವರೇ ಆಗಿರಬಹುದು, ಆದರೆ, ಅಮೆರಿಕದ ಅಧ್ಯಕ್ಷ ಜಾರಿ ಮಾಡಲಿರುವ ಅಗತ್ಯಗಳ ಪೂರೈಸಿದವರಿಗೆ ಮಾತ್ರ ವೀಸಾ ನೀಡಲು ನಿರ್ಧರಿಸಿದೆ.

H-1B ವೀಸಾ ನಿಯಮದಲ್ಲಿ ಬದಲಾವಣೆಯಿಲ್ಲ! ಭಾರತ ನಿರಾಳ!H-1B ವೀಸಾ ನಿಯಮದಲ್ಲಿ ಬದಲಾವಣೆಯಿಲ್ಲ! ಭಾರತ ನಿರಾಳ!

ಈ ನೀತಿಯನ್ನು ಡೊನಾಲ್ಡ್ ಟ್ರಂಪ್ ಒಂದು ವೇಳೆ ಜಾರಿಗೆ ತಂದರೆ ಭಾರತೀಯರಿಗೇನೂ ತೊಂದರೆಯಾಗಲಾರದು. ಏಕೆಂದರೆ, ಆಂಗ್ಲ ಭಾಷೆ ಮಾತಾಡುವುದರಲ್ಲಿ ಭಾರತೀಯರು ಒಂದು ಹೆಜ್ಜೆ ಮುಂದೆ. ಹಾಗೆಯೆ, ಇಲ್ಲಿ ಪ್ರತಿಭೆಗಳಿಗೂ ಕೊರತೆಯಿಲ್ಲ.

You should love US and speak in English to get into America

ಅಮೆರಿಕದ ಭವಿಷ್ಯ ಮತ್ತು ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಂಥ ನೀತಿ ಜಾರಿ ಮಾಡಲು ಟ್ರಂಪ್ ಸರಕಾರ ಮುಂದಾಗಿದೆ. ಇದು ಆಂಗ್ಲ ಭಾಷೆ ಮಾತನಾಡಲು ತಡಬಡಾಯಿಸುವ ಇತರ ದೇಶದ ನಾಗರಿಕರಿಗೆ ಅಮೆರಿಕ ಪ್ರವೇಶ ಕನಸಾಗಿ ಉಳಿಯಲಿದೆ.

ನಮ್ಮ ಅಮೆರಿಕವನ್ನು ಪ್ರೀತಿಸುವವರು, ಇಲ್ಲಿನ ಜನರನ್ನು ಪ್ರೀತಿಸುವವರು, ತಮ್ಮ ಉದ್ಯೋಗ ಮತ್ತು ನೈಪುಣ್ಯತೆಯನ್ನು ಪ್ರೀತಿಸುವವರು, ಪ್ರತಿಭೆಯನ್ನು ಬೆಳೆಸಿಕೊಂಡಿರುವವರು, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲಿಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡುವವರು, ದೇಶದ ಜನಜೀವನದ ಮೌಲ್ಯವನ್ನು ಎತ್ತಿಹಿಡಿಯುವವರು, ಯಾವುದೇ ದೇಶದವರಾಗಿರಲಿ ಅವರಿಗೆ ಸ್ವಾಗತ ಎಂದು ಹಿರಿಯ ಆಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಮೆರಿಕವನ್ನು ಉದ್ಧಾರ ಮಾಡುವುದು ಮಾತ್ರವಲ್ಲ, ಇಲ್ಲಿಗೆ ಬರುವವರು ಕೂಡ ವೈಯಕ್ತಿಕವಾಗಿ ಯಶಸ್ವಿಯಾಗಬೇಕು. ಪ್ರಸ್ತುತ ಇರುವ ನೀತಿಗಳಲ್ಲಿ ಈ ಅಗತ್ಯತೆಗಳ ಕೊರತೆಯಿದೆ. ಅಲ್ಲದೆ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರು ಮತ್ತು ಉಗ್ರ ಕೃತ್ಯದಲ್ಲಿ ತೊಡಗುವವರಿಗೆ ಇಲ್ಲಿ ಪ್ರವೇಶವಿಲ್ಲ ಎಂದು ಅವರು ಖಡಾಖಂಡಿತವಾಗಿ ಹೇಳಿದ್ದಾರೆ.

English summary
You should love US, love work, love for the people, upload the values of USA and speak good English to get into America or get h1b visa. Donald Trump government is contemplating of bringing this policy in place and implement strictly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X