ಯೆಮನ್: ಯಾವ ಭಾರತೀಯರು ಸಾವನ್ನಪ್ಪಿಲ್ಲ
ನವದೆಹಲಿ, ಸೆಪ್ಟೆಂಬರ್, 09: ಯೆಮನ್ ನಲ್ಲಿ ಭಾರತದ 20 ಜನರು ಹತರಾಗಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು. 13 ಜನರು ಬದುಕುಳಿದಿದ್ದು ಉಳಿದ 7 ಜನರಿಗಾಗಿ ಶೋಧ ಮುಂದುವರಿದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಬಾಂಬ್ ದಾಳಿಯಲ್ಲಿಮ 20 ಜನ ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಎಲ್ಲರೂ ಬದುಕುಳಿದಿದ್ದು ಕಾಣೆಯಾದವರ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಭಾರತೀಯರು ಸಾವನ್ನಪ್ಪಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಅಲ್ಲದೇ ನಿರ್ದಿಷ್ಟವಾಗಿ ಯಾರನ್ನು ಗುರುತಿಸಲಾಗಿಲ್ಲ. ಭಾರತೀಯರ ಹಿತ ಕಾಯಲು ಸರ್ಕಾರ ಸದಾ ಬದ್ಧವಾಗಿದೆ ಎಂದು ವಿದೇಶಾಂಗ ಕಾರ್ಯಾಲಯ ತಿಳಿಸಿದೆ. [ಸೌದಿ ವೈಮಾನಿಕ ದಾಳಿ: ಇಪ್ಪತ್ತು ಭಾರತೀಯರ ಸಾವು]
ಯೆಮೆನ್ ನಲ್ಲಿ ಮತ್ತೆ ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದು ಸಕಲ ಮಾಹಿತಿ ಕಲೆಹಾಕುವುದು ಕಷ್ಟಸಾಧ್ಯವಾಗುತ್ತಿದೆ. ಭಾರತೀಯರನ್ನು ಕಳ್ಳ ಸಾಗಣೆ ಕೆಲಸಕ್ಕೂ ಬಳಸಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.[ಯೆಮನ್: ಭಾರತಕ್ಕೆ ಹಿಂದಿರುಗಿದ 349 ಜನ ಸಂತ್ರಸ್ತರು]
ಸೌದಿ ಅರೇಬಿಯಾ ನಡೆಸಿದ ವೈಮಾನಿಕ ದಾಳಿಯಲ್ಲಿ ಇಪ್ಪತ್ತು ಭಾರತೀಯರು ಮೃತ ಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ಸೋಮವಾರ ವರದಿ ಮಾಡಿತ್ತು. ಹೌಥೀಯಲ್ಲಿ ಶುಕ್ರವಾರ (ಸೆಪ್ಟೆಂಬರ್ 4) ನಡೆದ ಕ್ಷಿಪಣಿ ದಾಳಿಯಲ್ಲಿ ಅರವತ್ತಕ್ಕೂ ಹೆಚ್ಚು ಸೌದೀ, ಬಹ್ರೇನ್ ಮತ್ತು ಗಲ್ಫಿನ ಸೈನಿಕರು ಮೃತ ಪಟ್ಟಿದ್ದರು. ಈ ಘಟನೆಯ ನಂತರ ಸೌದೀ ಅರೇಬಿಯಾ ತನ್ನ ಕಾರ್ಯಾಚರಣೆಯನ್ನು ತೀವ್ರ ಗೊಳಿಸಿತ್ತು.












Click it and Unblock the Notifications