ಲಂಡನ್ ನ ಮೈಸೂರು ರಸ್ತೆಯಲ್ಲಿ ನಡೆದಾಡಿದ ಯದುವೀರ್-ತ್ರಿಷಿಕಾ
ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರದಂದು ಲಂಡನ್ ನಲ್ಲಿ ಇರುವ ಬಸವೇಶ್ವರ ವಿಗ್ರಹಕ್ಕೆ ಗೌರವ ಸಲ್ಲಿಸಿದರು.
ಲಂಡನ್ ನಲ್ಲಿ ಇರುವ ಮೈಸೂರ ರಸ್ತೆಯಲ್ಲಿ ಇಬ್ಬರೂ ನಡೆದಾಡಿದರು. ಹದಿನೆಂಟನೇ ಶತಮಾನದಲ್ಲಿ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಬ್ರಿಟಿಷ್ ಮೈಸೂರು ರೆಜಿಮೆಂಟ್ ನ ನೇಮಕಾತಿ ಕೇಂದ್ರ ಇದೇ ಸ್ಥಳದಲ್ಲಿತ್ತು. ಆದ್ದರಿಂದ ಮೈಸೂರು ರಸ್ತೆ ಎಂದೇ ಹೆಸರಾಗಿದೆ.
ಯದುವೀರ್ ಅವರ ಜತೆಗೆ ಪತ್ನಿ ತ್ರಿಷಿಕಾ ಒಡೆಯರ್ ಕೂಡ ಇದ್ದರು. ಲಂಡನ್ ನ ಬರೋ ಆಫ್ ಲಾಂಬೆತ್ ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು. ಬ್ರಿಟಿಷ್ ಭಾರತೀಯ/ಕನ್ನಡ ಸಮುದಾಯ ಹಾಗೂ ಯುನೈಟೆಡ್ ಕಿಂಗ್ ಡಮ್ ಬಸವ ಸಮಿತಿ ಅಧ್ಯಕ್ಷ ಅಭಿಜಿತ್ ಸಾಲಿಮಠ್ ಭಾಗವಹಿಸಿದ್ದರು.

ಯದುವೀರ್ ಮಾತನಾಡಿ, ಥೇಮ್ಸ್ ನದಿಗೆ ಮುಖ ಮಾಡಿ ನಿಂತಿರುವ, ಬ್ರಿಟಿಷ್ ಸಂಸತ್ ಮುಂಭಾಗ ಇರುವ ಭಾರತದ ತತ್ವಜ್ಞಾನಿ ಹಾಗೂ ಪ್ರಜಾಪ್ರಭುತ್ವದ ಪ್ರವರ್ತಕ ಬಸವಣ್ಣ ಅವರ ಪುತ್ಥಳಿ ನೋಡುತ್ತಿರುವುದು ಮನಸಿಗೆ ಖುಷಿ ಆಗುತ್ತಿದೆ ಎಂದು ಹೇಳಿದ್ದಾರೆ. ನವೆಂಬರ್ 14, 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಪುತ್ಥಳಿಯನ್ನು ಉದ್ಘಾಟನೆ ಮಾಡಿದ್ದರು.












Click it and Unblock the Notifications