• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಜನ್ಮಭೂಮಿ ವುಹಾನ್ ನಿಂದ ಬಂತು ನೀವೆಲ್ಲ ಬೆಕ್ಕಸ ಬೆರಗಾಗುವ ಸುದ್ದಿ!

|

ಬೀಜಿಂಗ್, ಜೂನ್ 4: ಇಡೀ ವಿಶ್ವವನ್ನೇ ಜರ್ಜರಿತಗೊಳಿಸಿರುವ ಮಾರಣಾಂತಿಕ ನೋವೆಲ್ ಕೊರೊನಾ ವೈರಸ್ ನ ಜನ್ಮಭೂಮಿ ವುಹಾನ್.! ಇಂದು ಜಗತ್ತಿನಾದ್ಯಂತ 387,913 ಮಂದಿಯ ಪ್ರಾಣವನ್ನು ನುಂಗಿರುವ ಮಹಾಮಾರಿ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್ ನಗರದಲ್ಲಿ.!

ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲೇ ವುಹಾನ್ ನಗರದಲ್ಲಿ ಕೊರೊನಾ ವೈರಸ್ ಆರ್ಭಟ ಆರಂಭವಾಗಿತ್ತು. ಡೆಡ್ಲಿ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ವುಹಾನ್ ನಗರ ಸತತ 76 ದಿನಗಳ ಕಾಲ ಕಠಿಣ ಲಾಕ್ ಡೌನ್ ಗೆ ಒಳಗಾಯ್ತು.

ಕೊರೊನಾ ತವರು ವುಹಾನ್ ನಿಂದ ಬಂದ ಹೊಸ ಆಘಾತಕಾರಿ ಸುದ್ದಿ ಇದು.!

ಲಾಕ್ ಡೌನ್ ನ ಕಠಿಣ ನಿಯಮಗಳಿಂದಾಗಿ, ಏಪ್ರಿಲ್ ತಿಂಗಳಿನಲ್ಲಿ ವುಹಾನ್ ನಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಯ್ತು. ಪರಿಣಾಮ, ಎಲ್ಲಾ ಕೊರೊನಾ ವೈರಸ್ ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಏಪ್ರಿಲ್ 27 ರಂದು ನ್ಯಾಷನಲ್ ಹೆಲ್ತ್ ಕಮಿಷನ್ ಘೋಷಿಸಿತ್ತು.

ಆದರೆ, ಮೇ ತಿಂಗಳಲ್ಲಿ ವುಹಾನ್ ನಲ್ಲಿ ರೋಗ ಲಕ್ಷಣ ಇಲ್ಲದವರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು. ಈ ಹಿನ್ನಲೆಯಲ್ಲಿ ವುಹಾನ್ ನಗರದಲ್ಲಿ ವಾಸ ಮಾಡುವ ಪ್ರತಿಯೊಬ್ಬರಿಗೂ ಕೋವಿಡ್-19 ಪರೀಕ್ಷೆ ನಡೆಸುವ ಮಹತ್ವದ ನಿರ್ಣಯವನ್ನು ಸರ್ಕಾರ ಕೈಗೊಂಡಿತ್ತು.

ವುಹಾನ್ ನಲ್ಲಿ ಮತ್ತೆ ಕೊರೊನಾ ಆರ್ಭಟ: ಮಹತ್ವದ ನಿರ್ಧಾರ ಕೈಗೊಂಡ ಚೀನಾ!

ಇದೀಗ, ವುಹಾನ್ ನಿಂದ ಬಂದಿರುವ ಬೆಕ್ಕಸ ಬೆರಗಾಗುವ ಸುದ್ದಿ ಏನಪ್ಪಾ ಅಂದ್ರೆ... ವುಹಾನ್ ನಲ್ಲಿ 10 ಮಿಲಿಯನ್ ಜನರ ಕೋವಿಡ್-19 ಪರೀಕ್ಷೆ ಮುಕ್ತಾಯಗೊಂಡಿದ್ದು, ಸೋಂಕಿತರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ. ''ವುಹಾನ್ ಸಿಟಿ ಈಸ್ ಸೇಫ್'' ಎಂದು ಘೋಷಿಸಲಾಗಿದೆ.

10 ಮಿಲಿಯನ್ ಜನರಿಗೆ ಕೋವಿಡ್-19 ಪರೀಕ್ಷೆ

10 ಮಿಲಿಯನ್ ಜನರಿಗೆ ಕೋವಿಡ್-19 ಪರೀಕ್ಷೆ

ನೋವೆಲ್ ಕೊರೊನಾ ವೈರಸ್ ಜನ್ಮಸ್ಥಳ ವುಹಾನ್ ನಲ್ಲಿ.. ಕೇವಲ 19 ದಿನಗಳಲ್ಲಿ 10 ಮಿಲಿಯನ್ ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ.

ಎಷ್ಟು ಜನರಿಗೆ ಕೋವಿಡ್-19 ಪಾಸಿಟಿವ್.?

ಎಷ್ಟು ಜನರಿಗೆ ಕೋವಿಡ್-19 ಪಾಸಿಟಿವ್.?

10 ಮಿಲಿಯನ್ ಜನರಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಕೇವಲ 300 ಜನರಲ್ಲಿ ಮಾತ್ರ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ.

ಆ ಎಲ್ಲಾ 300 ಜನರಲ್ಲಿ ಕೊರೊನಾ ವೈರಸ್ ಸೋಂಕಿನ ಯಾವುದೇ ಲಕ್ಷಣಗಳೂ ಕಂಡುಬಂದಿಲ್ಲ.

ವುಹಾನ್ ನಲ್ಲಿ ಸಾವಿನ ಪ್ರಮಾಣ: ಚೀನಾ ಸರ್ಕಾರ ಕೊಟ್ಟಿದೆ 'ಹೊಸ' ಲೆಕ್ಕ.!

300 ಜನರ ಕ್ಲೋಸ್ ಕಾಂಟ್ಯಾಕ್ಟ್ ನಲ್ಲಿದ್ದ 1,174 ಜನರ ಮೇಲೆ ನಿಗಾ ವಹಿಸಲಾಗಿದ್ದು, ಆ ಪೈಕಿ ಯಾರಿಗೂ ಸೋಂಕು ತಗುಲಿಲ್ಲ.

ಬೆಕ್ಕಸ ಬೆರಗಾಗುವ ಸುದ್ದಿ.!

ಬೆಕ್ಕಸ ಬೆರಗಾಗುವ ಸುದ್ದಿ.!

ರೋಗ ಲಕ್ಷಣ ಹೊಂದಿಲ್ಲದವರಿಂದ (Asymptomatic) ನೋವೆಲ್ ಕೊರೊನಾ ವೈರಸ್ ಸೋಂಕು ಸುಲಭವಾಗಿ ಹರಡಬಹುದು ಎಂದೇ ಭಾವಿಸಲಾಗಿತ್ತು. ಆದ್ರೆ, ವುಹಾನ್ ನಲ್ಲಿನ ಈ ಹೊಸ ಬೆಳವಣಿಗೆಯಿಂದ Asymptomatic ಸೋಂಕಿತರಿಂದ ಕೋವಿಡ್-19 ರೋಗ ಸುಲಭವಾಗಿ ಹರಡುವುದಿಲ್ಲ ಎಂಬ ಬೆಕ್ಕಸ ಬೆರಗಾಗುವ ಅಂಶ ಬಯಲಾಗಿದೆ.

ಆದರೂ Asymptomatic ಸೋಂಕಿತರಿಂದ ಉಂಟಾಗಬಹುದಾದ ರಿಸ್ಕ್ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ.

ವುಹಾನ್ ನಲ್ಲಿರುವವರು ನಿರಾಳ

ವುಹಾನ್ ನಲ್ಲಿರುವವರು ನಿರಾಳ

''10 ಮಿಲಿಯನ್ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ರಿಪೋರ್ಟ್ ಸಿಕ್ಕಿದೆ. ಇದರಿಂದ ವುಹಾನ್ ನಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಇದೀಗ ನಿರಾಳರಾಗಿದ್ದಾರೆ. ಚೀನೀಯರಲ್ಲಿ ಭರವಸೆ ಮೂಡಿದೆ'' ಎಂದು ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಫೆಂಗ್ ಝೀಜಿಯಾನ್ ಹೇಳಿದ್ದಾರೆ.

ವುಹಾನ್ ಸಿಟಿ ಸೇಫ್.!

ವುಹಾನ್ ಸಿಟಿ ಸೇಫ್.!

''ಮೇ 14 ರಿಂದ ಜೂನ್ 1 ರವರೆಗೆ 9.9 ಮಿಲಿಯನ್ ಟೆಸ್ಟ್ ಮಾಡಲಾಗಿದೆ. ಐದು ವರ್ಷ ಮೇಲ್ಪಟ್ಟ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ. ವುಹಾನ್ ಸಿಟಿ ಇದೀಗ ಸೇಫ್ ಆಗಿದೆ'' ಎಂದು ನ್ಯಾಷನಲ್ ಹೆಲ್ತ್ ಲೀ ಲ್ಯಾನ್ ಜುಯಾನ್ ಹೇಳಿದ್ದಾರೆ.

ಹೊಸ ಸೋಂಕಿತರು ಕಂಡುಬಂದಿದ್ದರು.!

ಹೊಸ ಸೋಂಕಿತರು ಕಂಡುಬಂದಿದ್ದರು.!

ಮೇ ತಿಂಗಳಿನಲ್ಲಿ ವುಹಾನ್ ನಲ್ಲಿನ ಒಂದೇ ರೆಸಿಡೆನ್ಷಿಯಲ್ ಕಾಂಪೌಂಡ್ ನಲ್ಲಿ ವಾಸಿಸುವ ಐವರಿಗೆ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿತ್ತು. ಅವರೆಲ್ಲರೂ Asymptomatic ಆಗಿದ್ದು, ರೋಗದ ಲಕ್ಷಣ ಹೊಂದಿರಲಿಲ್ಲ. ಹಾಗ್ನೋಡಿದ್ರೆ, ವುಹಾನ್ ನಗರದಲ್ಲಿ ರೋಗ ಲಕ್ಷಣ ಹೊಂದಿಲ್ಲದ Asymptomatic ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಊಹಿಸಲಾಗಿತ್ತು. ಹೀಗಾಗಿ, ವುಹಾನ್ ನಲ್ಲಿ ವಾಸಿಸುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಸರ್ಕಾರ ಮುಂದಾಯಿತು.

ವುಹಾನ್ ನಲ್ಲಿ ಕೋವಿಡ್-19 ಗೆ ಬಲಿಯಾದವರೆಷ್ಟು.?

ವುಹಾನ್ ನಲ್ಲಿ ಕೋವಿಡ್-19 ಗೆ ಬಲಿಯಾದವರೆಷ್ಟು.?

ಚೀನಾ ತೋರಿಸಿರುವ ಅಂಕಿ-ಅಂಶಗಳ ಪ್ರಕಾರ, ವುಹಾನ್ ನಲ್ಲಿ ಇಲ್ಲಿಯವರೆಗೂ ಕೋವಿಡ್-19 ನಿಂದ 3,869 ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ, ಕೊರೊನಾ ವೈರಸ್ ನಿಂದ ವುಹಾನ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 'ಅಧಿಕೃತ' ಲೆಕ್ಕಕ್ಕಿಂತ ಜಾಸ್ತಿ ಇದೆ ಅಂತಾರೆ ಅಲ್ಲಿನ ನಿವಾಸಿಗಳು.

English summary
Wuhan Tests 10 million people, finds only 300 Covid 19 Positive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X