• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಅಚ್ಚರಿಯ ಫಲಿತಾಂಶ: ಬದುಕುಳಿದ ವುಹಾನ್ ನ ಮೊದಲ ಸೋಂಕಿತೆ.!

|

ಬೀಜಿಂಗ್/ಲಂಡನ್, ಮಾರ್ಚ್ 30: ವಿಶ್ವದಾದ್ಯಂತ 33 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿರುವ ಮಾರಣಾಂತಿಕ ಕೊರೊನಾ ವೈರಸ್ ಗೆ ಮೊದಲು ತುತ್ತಾಗಿದ್ದು ಯಾರು ಗೊತ್ತಾ.?

   ಒಂದು ವಾರದಿಂದ ಒಬ್ಬರೂ ದೇವರ ದರ್ಶನಕ್ಕೆ ಬಂದಿಲ್ಲ | Veerendra Hedge | Dharmastala

   ವರದಿಗಳ ಪ್ರಕಾರ, ಕೋವಿಡ್-19 ರೋಗದ ಪೇಷೆಂಟ್ ಝೀರೋ.. ವುಹಾನ್ ನಗರದಲ್ಲಿ ಸೀಗಡಿ ಮಾರಾಟ ಮಾಡುತ್ತಿದ್ದ ಮಹಿಳೆ Wei Guixian.!

   ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣಗಳು 'ಸೊನ್ನೆ': ಹಿಂದಿದೆ ಕರಾಳ ಸತ್ಯ!

   ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಸೀಗಡಿ ಮಾರುತ್ತಿದ್ದ 57 ವರ್ಷದ ಮಹಿಳೆ Wei Guixian ಗೆ ಕಳೆದ ವರ್ಷದ ಡಿಸೆಂಬರ್ 10 ರಂದು ಶೀತ ಕಾಣಿಸಿಕೊಂಡಿತ್ತು. ಕೊರೊನಾ ವೈರಸ್ ಸೋಂಕು ತಗುಲಿದ ಮೊಟ್ಟ ಮೊದಲಿಗರಲ್ಲಿ Wei Guixian ಕೂಡ ಒಬ್ಬರು. ಹೀಗಾಗಿ, ಆಕೆಯನ್ನು ಪೇಷೆಂಟ್ ಝೀರೋ ಎಂದು ಗುರುತಿಸಿ 'ದಿ ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿದೆ.

   ಮೊದಲು ಸೋಂಕು ಪೀಡಿತರು

   ಮೊದಲು ಸೋಂಕು ಪೀಡಿತರು

   ವುಹಾನ್ ನಲ್ಲಿ 'ಕೋವಿಡ್-19 ಪಾಸಿಟೀವ್' ಕಂಡುಬಂದ ಮೊದಲ 27 ಮಂದಿಯಲ್ಲಿ Wei Guixian ಕೂಡ ಒಬ್ಬರು. ವುಹಾನ್ ನಲ್ಲಿನ ಸಮುದ್ರಾಹಾರ ಮಾರುಕಟ್ಟೆಯಲ್ಲಿ 24 ಜನರಿಗೆ ಮೊದಲು ಕೊರೊನಾ ವೈರಸ್ ಸೋಂಕು ತಗುಲಿತ್ತು. ಆ ಪೈಕಿ Wei Guixian ಕೂಡ ಒಬ್ಬರು ಎಂದು ವುಹಾನ್ ಮುನಿಸಿಪಾಲ್ ಹೆಲ್ತ್ ಕಮಿಶನ್ ಖಚಿತ ಪಡಿಸಿದೆ.

   ಚರ್ಚಾಸ್ಪದ ವಿಷಯ

   ಚರ್ಚಾಸ್ಪದ ವಿಷಯ

   ಸದ್ಯಕ್ಕೆ Wei Guixian ರನ್ನ ಪೇಷೆಂಟ್ ಝೀರೋ ಅಂತ ಕರೆಯಲಾಗುತ್ತಿದ್ದರೂ, ಆಕೆಗೇ ಮೊದಲು ಕೊರೊನಾ ಸೋಂಕು ತಗುಲಿತ್ತಾ ಎಂಬುದಿನ್ನೂ ಚರ್ಚಾಸ್ಪದ ವಿಷಯ. ಯಾಕಂದ್ರೆ, ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ ಪ್ರಕಾರ ಕೋವಿಡ್-19 ಪಾಸಿಟಿವ್ ಪ್ರಕರಣ ಮೊಟ್ಟ ಮೊದಲು ಪತ್ತೆಯಾಗಿದ್ದು ಡಿಸೆಂಬರ್ 1 ರಂದು.

   ಕೋವಿಡ್-19 ರೋಗ ಲಕ್ಷಣ

   ಕೋವಿಡ್-19 ರೋಗ ಲಕ್ಷಣ

   ಡಿಸೆಂಬರ್ 10 ರಂದು ಸೀಗಡಿ ಮಾರಾಟಗಾರ್ತಿ Wei Guixian ಗೆ ನೆಗಡಿ ಶುರುವಾಗಿತ್ತು. ಸಾಮಾನ್ಯ ನೆಗಡಿ ಇರಬಹುದು ಅಂತ್ಹೇಳಿ, ಆಕೆ ಹತ್ತಿರದ ಕ್ಲಿನಿಕ್ ಗೆ ಹೋಗಿ ಇಂಜೆಕ್ಷನ್ ಪಡೆದಿದ್ದರು. ಮಾರನೇ ದಿನ ನಿಶ್ಯಕ್ತಿ ಜಾಸ್ತಿಯಾಗಿದ್ರಿಂದ ವುಹಾನ್ ನ ಆಸ್ಪತ್ರೆಯೊಂದಕ್ಕೆ ಆಕೆ ಭೇಟಿ ಕೊಟ್ಟಿದ್ದರು. ಆದರೆ, ಆಕೆಗೆ ಸುಸ್ತು ಕಡಿಮೆ ಆಗಲೇ ಇಲ್ಲ. ಹೀಗಾಗಿ ಡಿಸೆಂಬರ್ 16 ರಂದು ಆಕೆ ವುಹಾನ್ ಯೂನಿಯನ್ ಆಸ್ಪತ್ರೆಗೆ ದಾಖಲಾದರು.

   ನೀವೆಲ್ಲ ಕಣ್ಣರಳಿಸುವ ಸುದ್ದಿಯೊಂದು ಕೊರೊನಾ ತವರು ವುಹಾನ್ ನಿಂದ ಬಂದಿದೆ!

   ಕ್ವಾರಂಟೈನ್ ನಲ್ಲಿದ್ದ ಸೀಗಡಿ ವ್ಯಾಪಾರಿ

   ಕ್ವಾರಂಟೈನ್ ನಲ್ಲಿದ್ದ ಸೀಗಡಿ ವ್ಯಾಪಾರಿ

   ಹುವಾನಾನ್ ಸಮುದ್ರಾಹಾರ ಮಾರುಕಟ್ಟೆಯ ಹಲವು ವ್ಯಾಪಾರಿಗಳು ಇದೇ ರೋಗದ ಲಕ್ಷಣಗಳನ್ನು ಹೊತ್ತು ಬರುತ್ತಿರುವುದು ಸಂಗತಿ ಬೆಳಕಿಗೆ ಬಂತು. ಆಗ (ಡಿಸೆಂಬರ್ ಕೊನೆಯ ವಾರ) ಇತರೆ ವ್ಯಾಪಾರಿಗಳೂ ಸೇರಿದಂತೆ Wei Guixian ರನ್ನ ಕ್ವಾರಂಟೈನ್ ನಲ್ಲಿ ವೈದ್ಯರು ಇರಿಸಿದ್ದರು.

   ಒಂದು ತಿಂಗಳ ಚಿಕಿತ್ಸೆ

   ಒಂದು ತಿಂಗಳ ಚಿಕಿತ್ಸೆ

   ಸತತ ಒಂದು ತಿಂಗಳ ಚಿಕಿತ್ಸೆ ಬಳಿಕ ಜನವರಿಯಲ್ಲಿ Wei Guixian ಆರೋಗ್ಯದಲ್ಲಿ ಚೇತರಿಕೆ ಕಂಡು ಬಂತು. ಮಾರುಕಟ್ಟೆಯಲ್ಲಿ 'ಕಾಮನ್ ಟಾಯ್ಲೆಟ್' ಬಳಸಿದ್ದರಿಂದ ಸೋಂಕು ತಗುಲಿರಬಹುದು ಎನ್ನುತ್ತಾರೆ ಪೇಷೆಂಟ್ ಝೀರೋ Wei Guixian.

   ಚಿಕಿತ್ಸೆ ಪಡೆಯಲು ಹೆಣಗಾಡಿದ್ದ ಮಹಿಳೆ

   ಚಿಕಿತ್ಸೆ ಪಡೆಯಲು ಹೆಣಗಾಡಿದ್ದ ಮಹಿಳೆ

   ''ಸರ್ಕಾರ ಬಹುಬೇಗ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೆ, ಸಾವಿನ ಪ್ರಮಾಣ ಇಷ್ಟೊಂದು ಆಗುತ್ತಿರಲಿಲ್ಲ'' ಎನ್ನುತ್ತಾರೆ Wei Guixian. ವಯಸ್ಸು 57 ಆಗಿದ್ದರೂ, ಕೊರೊನಾ ವೈರಸ್ ಸೋಂಕಿಗೆ ಮೊದಮೊದಲು ತುತ್ತಾಗಿದ್ದರೂ, ಚಿಕಿತ್ಸೆ ಪಡೆಯಲು ಒದ್ದಾಡಿದ್ದ ಸೀಗಡಿ ಮಾರಾಟಗಾರ್ತಿ Wei Guixian ಬದುಕುಳಿದಿದ್ದೇ ಅಚ್ಚರಿ.

   ನಿಟ್ಟುಸಿರು ಬಿಡಿ: ಇದೇ ಮೊದಲ ಬಾರಿಗೆ ವುಹಾನ್ ನಲ್ಲಿ ಹೊಸ ಸೋಂಕಿತ ಪ್ರಕರಣ ಇಲ್ಲ!

   English summary
   Wuhan Shrimp Sellar identified as Coronavirus Patient Zero.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X