ವಿಶ್ವಸುಂದರಿ ಆಕಾಂಕ್ಷಿ ರೂಪದರ್ಶಿ ದುರಂತ ಸಾವು

ಸಂತ ಬಾರ್ಬರಾ(ಹೊಂಡುರಾಸ್), ನ.20: ದುಷ್ಕರ್ಮಿಯ ಗುಂಡಿನ ದಾಳಿ ತಪ್ಪಿಸಿಕೊಳ್ಳಲು ಯತ್ನಿಸುವ ಸಂದರ್ಭದಲ್ಲಿ ಗುಂಡು ತಗುಲಿ ಸಾವನ್ನಪ್ಪಿದ ಘಟನೆ ನಡೆದಿದೆ. ಮಿಸ್ ಹೊಂಡುರಾಸ್ ಮರಿಯಾ ಜೋಸ್ ಅಲ್ವರಾಡೊ ಮೃತಪಟ್ಟಿರುವ ದುರ್ದೈವಿ. ಮರಿಯಾ ಕೊಲೆ ಮಾಡಿದವನು ಆಕೆ ಸೋದರಿಯ ಮಾಜಿ ಪ್ರಿಯಕರ.

ಮಿಸ್ ಹೊಂಡುರಾಸ್ ಕಿರೀಟ ಧರಿಸಿದ 19ರ ಹರೆಯದ ಸುಂದರಿ ಮರಿಯಾ ಜೋಸ್ ಅಲ್ವರಾಡೊ ಲಂಡನ್ನಿನಲ್ಲಿ ನಡೆಯಲಿರುವ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು. ಈ ನಡುವೆ ತನ್ನ ಸೋದರಿ ಸೋಫಿಯಾ ಟ್ರಿನಿಡಾಡ್(23) ಜೊತೆ ಸಂತ ಬಾರ್ಬರಾದಲ್ಲಿನ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಸೋಫಿಯಾಳ ಮಾಜಿ ಪ್ರಿಯಕರ ಲೂಟ್ರಾಕೋ ರಿಯೂಜ್ ಆಗಮನವಾಗುತ್ತದೆ.

Miss World contestant shot dead by sister's boyfriend

ಪಾರ್ಟಿಯಲ್ಲಿ ಸೋಫಿಯಾ ಪರ ಪುರುಷನ ಜೊತೆ ಕುಣಿದಾಡುವುದನ್ನು ಕಂಡ ಲೂಟ್ರಾಕೋ ಸಿಟ್ಟಿಗೆದ್ದು ಗುಂಡು ಹಾರಿಸಿದ್ದಾನೆ. ಎರಡು ಸುತ್ತು ಗುಂಡು ಹಾರಿಸಿದಾಗ ತಪ್ಪಿಸಿಕೊಂಡ ಅಕ್ಕ ತಂಗಿಯರು ಪಾರ್ಟಿಯಿಂದ ಹೊರಬಿದ್ದಿದ್ದಾರೆ. ನಂತರ ಇಬ್ಬರ ಸುಳಿವು ಕೆಲವು ದಿನಗಳವರೆಗೂ ಸಿಕ್ಕಿರಲಿಲ್ಲ.

ಸ್ಥಳೀಯ ಡಿಟೆಕ್ಟಿವ್ ಲಿಯಾನಾಡ್ರೋ ಓಸೊರಿಯೋ ಅವರು ತನಿಖೆ ನಡೆಸಿದ ಮೇಲೆ ಅರಾಡಾ ಪಟ್ಟಣದ ಬಳಿಯ ಅಗುವಾಗುವಲ್ ನದಿ ದಡದಲ್ಲಿ ಸುಂದರಿ ಅಲ್ವಾರಾಡೊ ಮತ್ತು ಸೋದರಿ ಸೋಫಿಯಾ ಮೃತದೇಹಗಳು ಪತ್ತೆಯಾಗಿದೆ. ಇಬ್ಬರ ಕೊಲೆಯಾಗಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿ, ಲಿಯಾಂಡ್ರಾ ಒಸೋರಿಯೋ ಸ್ಪಷ್ಟಪಡಿಸಿದ್ದಾರೆ.

ವಿಶ್ವಸುಂದರಿ ಸ್ಪರ್ಧಿಯನ್ನು ಕಳೆದುಕೊಂಡ ದುಃಖ ವಿಶ್ವಸುಂದರಿ ಸ್ಪರ್ಧೆ ಆಯೋಜಕರನ್ನು ತಟ್ಟಿದೆ. ಇಬ್ಬರು ಯುವತಿಯರ ದುರಂತ ಸಾವಿನ ಸೂತಕ ನಮ್ಮನ್ನು ಆವರಿಸಿದೆ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕಲ್ಪಿಸಲಿ ಎಂದು ಆಯೋಜಕಿ ಜೂಲಿಯಾ ಮೊರ್ಲೆ ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+