146ರ ವಿಶ್ವದ ಹಿರಿಯಜ್ಜ ಘೋಟೋ ಇನ್ಮುಂದೆ ಗೋಡೆ ಮೇಲಿನ 'ಫೋಟೋ'
ಘೋಟೋ ಅವರ ಬಳಿ ಇಂಡೋನೇಷ್ಯಾದ ಒಂದು ಐಡಿ ಕಾರ್ಡ್ ಇದ್ದು, ಇದರಲ್ಲಿ ಅವರ ಜನ್ಮದಿನಾಂಕ ಡಿಸೆಂಬರ್ 31, 1870 ಎಂದು ನಮೂದಿಸಲಾಗಿದೆ.
ಜಕಾರ್ತಾ, ಮೇ 02 : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಇಂಡೋನೇಷ್ಯಾದ 146 ವರ್ಷದ ಹಿರಿಯಜ್ಜ ಎಮ್ಬಾ ಘೋಟೋ ಅವರು ಸೋಮವಾರ ವಯೋ ಸಹಜ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
ವಯೋ ಸಹಜದ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಹಲವು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಇದರಿಂದ ಅಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದ ಘೋಟೋ ಮೇ 01ರಂದು ಇಂಡೋನೇಷ್ಯಾದ ಜಾವಾ ಎನ್ನುವ ಗ್ರಾಮದಲ್ಲಿ ಕೊನೆಯುಸಿರೆಳೆದಿದ್ದಾರೆ.

ಘೋಟೋ ಅವರ ಬಳಿ ಇಂಡೋನೇಷ್ಯಾದ ಒಂದು ಐಡಿ ಕಾರ್ಡ್ ಇದ್ದು, ಇದರಲ್ಲಿ ಅವರ ಜನ್ಮದಿನಾಂಕ ಡಿಸೆಂಬರ್ 31, 1870 ಎಂದು ನಮೂದಿಸಲಾಗಿದೆ.
ಘೋಟೋ ಅವರ ಸುದೀರ್ಘ ಜೀವನದ ಬಗ್ಗೆ ಕಳೆದ ವರ್ಷ ಪತ್ರಿಕೆಯೊಂದ ಸಂದರ್ಶನದಲ್ಲಿ, ತಾಳ್ಮೆ ನನ್ನನ್ನು ಇಷ್ಟು ವರ್ಷ ಬದುಕುವಂತೆ ಮಾಡಿದೆ. ನನ್ನನ್ನು ಪ್ರೀತಿಸುವ ಜನರು ನನ್ನನ್ನು ನೋಡಿಕೊಳ್ಳುತ್ತಿರುವುದರಿಂದ ಸುದೀರ್ಘ ಜೀವನ ನಡೆಸುತ್ತಿದ್ದೇನೆ ಎಂದಿದ್ದರು.
ಘೋಟೋ ಅವರಿಗಿಂತ ಹಿರಿಯರಾದ ವ್ಯಕ್ತಿಗಳೂ ಇದ್ದಾರೆ. ನೈಜೀರಿಯಾದ ಜೇಮ್ಸ್ ಒಲೊಫಿಂಟುಯಿ ಅವರಿಗೆ 171ವರ್ಷ ಹಾಗೂ ಇಥಿಯೋಪಿಯಾದ ದಖಾಬೂ ಎಬ್ಬಾ ಅವರಿಗೆ 163 ವರ್ಷ ವಯಸ್ಸು ಎಂದು ವರದಿಯಾಗಿದೆ. ಆದರೆ, ಅಧಿಕೃತವಾಗಿ ಇವರ ಜನ್ಮ ದಿನಾಂಕದ ಬಗ್ಗೆ ಪರಿಶೀಲನೆಯಾಗಿಲ್ಲ.












Click it and Unblock the Notifications