Maui wildfires: ಹವಾಯಿಯ ಮಾಯಿ ದ್ವೀಪದಲ್ಲಿ ಹಬ್ಬಿದ ಕಾಡ್ಗಿಚ್ಚು: ಲಹೈನಾ ಪಟ್ಟಣ ಸುಟ್ಟು ಕರಕಲು, ಸಾವಿನ ಸಂಖ್ಯೆ 53 ಕ್ಕೆ ಏರಿಕೆ

ಐತಿಹಾಸಿಕ ಪ್ರವಾಸಿ ದ್ವೀಪ ಪಟ್ಟಣವಾದ ಮಾಯಿಯದಲ್ಲಿ ಕಾಣಿಸಿಕೊಂಡ ಅರಣ್ಯಕಾಡ್ಗಿಚ್ಚು ಸದ್ಯಕ್ಕೆ ಆರುವಂತೆ ಕಾಣಿಸುತ್ತಿಲ್ಲ. ಬೆಂಕಿಯ ಕೆನ್ನಾಲಿಗೆ ನಿತ್ಯಾ ಅರಣ್ಯವನ್ನು ಆವರಿಸಿ ಸುಟ್ಟು ಕರಕಲಾಗಿಸುತ್ತಿದೆ. ಆಗಸ್ಟ್‌ 9ರಿಂದ ಹವಾಯಿಯ ಮಾಯಿಯಲ್ಲಿ ಭಾರಿ ಕಾಡ್ಗಿಚ್ಚು ಆವರಿಸಿದೆ.

ಹವಾಯಿಯ ಮಾಯಿ ದ್ವೀಪದಲ್ಲಿರುವ ಐತಿಹಾಸಿಕ ಪಟ್ಟಣವಾದ ಲಹೈನಾವನ್ನು ಕಾಡ್ಗಿಚ್ಚು ನೆಲಸಮಗೊಳಿಸಿದೆ. ಈವರೆಗೆ ಈ ಕಾಡ್ಗಿಚ್ಚಿನಿಂದಾಗಿ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಕಾಡ್ಗಿಚ್ಚಿನೊಂದಿಗೆ ವೇಗವಾಗಿ ಬೀಸಿದ ಗಾಳಿಯಿಂದ ಅನೇಕ ನೆರೆಹೊರೆಯ ವನ್ಯಜೀವಿಗಳು ಸುಟ್ಟುಭಸ್ಮವಾಗಿವೆ.

Wildfires spread on the island of Maui, Hawaii: Lahaina town burned, death toll rises to 53!

ಹವಾಯಿ ಗವರ್ನರ್ ಜೋಶ್ ಗ್ರೀನ್ ಅವರು ಈ ಬಗ್ಗೆ ಗುರುವಾರ ಸಿಎನ್‌ಎನ್‌ಗೆ ಮಾತನಾಡಿ, 'ಕಾಡ್ಗಿಚ್ಚಿಗೆ ಈವರೆಗೆ 1,700ಕ್ಕೂ ಹೆಚ್ಚು ಕಟ್ಟಡಗಳು ಮತ್ತು ಶತಕೋಟಿ ಡಾಲರ್ ಆಸ್ತಿ ನಾಶವಾಗಿದೆ. ಇನ್ನೂ ಲಹೈನಾದಲ್ಲಿ ಕಾಡ್ಗಿಚ್ಚಿನ ಅಪಾಯವನ್ನು ವಿವರಿಸಿದ ಸ್ಥಳೀಯ ನಿವಾಸಿ ಮೇಸನ್ ಜಾರ್ವಿ, "ನಾನು ನೋಡಿರದ ಅತ್ಯಂತ ಕೆಟ್ಟ ದುರಂತ ಇದಾಗಿದೆ. ಲಹೈನಾ ಎಲ್ಲವೂ ಸುಟ್ಟು ಕರಕಲಾಗಿದೆ" ಎಂದು ಹೇಳಿದ್ದಾರೆ.

ಲಹೈನಾವನ್ನು ಸುಟ್ಟುಹಾಕಿದ ಬೆಂಕಿಯು ಗುರುವಾರ ಬೆಳಗಿನ ವೇಳೆಗೆ 80 ಪ್ರತಿಶತದಷ್ಟು ಆವರಿಸಿದೆ ಎಂದು ಹೇಳಲಾಗುತ್ತಿದೆ. ಲಹೈನಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ವ್ಯಾಪಕವಾದ ವಿನಾಶವನ್ನು ಅಧಿಕಾರಿಗಳು ಗಮನಿಸಿ ಬುಧವಾರದ ವೇಳೆಗೆ 14,000 ಕ್ಕೂ ಹೆಚ್ಚು ಜನರನ್ನು ಮಾಯಿಯಿಂದ ಸ್ಥಳಾಂತರಿಸಿದ್ದಾರೆ.

ಲಹೈನಾನಲ್ಲಿ ರಾತ್ರೋರಾತ್ರಿಬೆಂಕಿ ಬಿದ್ದಿದ್ದು ಬಾರಿ ಗಾಳಿಯಿಂದ ಪಟ್ಟಣದ ಸುಮಾರು ಭಾಗ ಉರಿದುಹೋಗಿದೆ, ಪ್ರವಾಸಿಗರು ಈ ದ್ವೀಪಕ್ಕೆ ಹೋಗಬೇಡಿ ಎಂದು ಪೊಲೀಸರು ಟ್ಟೀಟ್‍ಮೂಲಕ ಸಂದೇಶ ರವಾನಿಸಿದ್ದಾರೆ. ಪಶ್ಚಿಮ ಮಾಯಿಯಲ್ಲಿ ಅತಿದೊಡ್ಡ ಜನ ಸಮುದಾಯ ವಾಸಿಸುತ್ತಿದ್ದು ಈಗ ಅಲ್ಲಿನ ಎಲ್ಲಾ ರಸ್ತೆಗಳನ್ನು ತುರ್ತು ಸಿಬ್ಬಂದಿ ಹೊರತುಪಡಿಸಿ ಎಲ್ಲರಿಗೂ ಬಂದ್ ಮಾಡಲಾಗಿದೆ.

ಮಾನವ ಚಟುವಟಿಕೆಯಿಂದ ಉಂಟಾದ ಬೆಂಕಿಯು ಶುಷ್ಕ ಗಾಳಿಯ ಕಾರಣ ಬೇಗನೆ ಪಸರಿಸಿದ್ದು, ಪಟ್ಟಣದಲ್ಲಿ ವ್ಯಾಪಿಸಿದೆ. ಬೆಂಕಿ ಮತ್ತು ಹೊಗೆಯ ವಾತಾವರಣದಿಂದ ತಪ್ಪಿಸಿಕೊಳ್ಳಲು ಸಾಗರಕ್ಕೆ ದುಮುಕಿದ್ದ ಇಬ್ಬರು ಮಕ್ಕಳು ಸೇರಿದಂತೆ 14 ಜನರನ್ನು ಅಮೆರಿಕ ಕೋಸ್ಟ್ ಗಾರ್ಡ್ ರಕ್ಷಿಸಿದ್ದಾರೆ. ಇಲ್ಲಿದ್ದ ಅಗ್ನಿಶಾಮಕ ಠಾಣೆ ಕೂಡ ಹಾನಿಯಾಗಿದ್ದು , ಅಗ್ನಿಶಾಮಕ ಹೆಲಿಕಾಪ್ಟರ್ ಕೂಡ ಬೆಂಕಿಯಿಂದ ಬೂದಿಯಾಗಿದೆ. ಪ್ರಸ್ತುತ ಪರಿಸ್ಥತಿ ಹತೋಟಿಗೆ ಬಂದಿದ್ದು ದ್ವೀಪದ ಒಂದು ಭಾಗ ಸಂಪೂರ್ಣ ನಾಶವಾಗಿದೆ.

ಮನೋಹರವಾದ ದ್ವೀಪ ಮಾಯಿಯಲ್ಲಿನ ವಿನಾಶಕಾರಿ ಬೆಂಕಿಯ ಸರಣಿಯು ಅಲ್ಲಿನ ಜನ ಸಮುದಾಯವನ್ನು ತತ್ತರಿಸುವಂತೆ ಮಾಡಿದೆ. ಈ ಭಾರಿ ಕಾಡ್ಗಿಚ್ಚು ದುರಂತಕ್ಕೆ ಮಾನವ ಚಟುವಟಿಕೆಯ ಪಾತ್ರದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸುವಂತೆ ಮಾಡಿದೆ. ಬಲವಾದ ಗಾಳಿ ಮತ್ತು ಶುಷ್ಕ ಪರಿಸ್ಥಿತಿಗಳಿಂದಾಗಿ ಮಾಯಿಯನ್ನು ಆವರಿಸಿರುವ ಬೆಂಕಿಯ ಮೂಲ ಯಾವುದು ಎಂದು ಗುರುತಿಸಲು ಅಧಿಕಾರಿಗಳು ಪರದಾಡುತ್ತಿದ್ಧಾರೆ. ಕಾರಣ ಅನಿಶ್ಚಿತವಾಗಿದ್ದರೂ, ಶುಷ್ಕ ಹವಾಮಾನದ ಕಾರಣ ಹೆಚ್ಚಿನ ಅಪಾಯ ಉಂಟಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+