ಪುರುಷರಿಗಿಂತ ಮಹಿಳೆಯರೇ ಹೆಚ್ಚು ಆಯುಷಿಗಳು ಏಕೆ?
ಲಾಸ್ ಏಂಜಲಿಸ್, ಜುಲೈ, 08 : ಪ್ರಪಂಚದಲ್ಲಿ ಪುರುಷರಿಗಿಂತ ಮಹಿಳೆಯರು ಅಧಿಕ ಆಯುಷಿಗಳಾಗಿದ್ದು, ಪುರುಷರು ಹೆಚ್ಚು ಹೃದಯ ಸಂಬಂಧಿತ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ದಕ್ಷಿಣ ಕ್ಯಾಲಿಫೋರ್ನಿಯಾ ಡೇವಿಸ್ ಸ್ಕೂಲ್ ಆಫ್ ಜರೊನ್ ಟಾಲಜಿ (ಮುಪ್ಪುಶಾಸ್ತ್ರ) ಸಂಶೋಧಕರು ಕೈಗೊಂಡ ಅಧ್ಯಯನದಿಂದ ಈ ಅಂಶ ತಿಳಿದು ಬಂದಿದೆ. ಸುಮಾರು 1800 ರಿಂದ 1900 ರ ಸಮಯದಲ್ಲಿ ಜನಿಸಿದ ವ್ಯಕ್ತಿಗಳು ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯುವ ಸೂತ್ರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದರು. ಇದರಿಂದ ಮರಣಪ್ರಮಾಣ ತೀರಾ ಕಡಿಮೆಯಿತ್ತು ಎಂದು ಸಂಶೋಧನಾಕಾರರು ಹೇಳಿದ್ದಾರೆ[ಮದುವೆಯಾದವರ ದೇಹದ ತೂಕ ಏಕೆ ಹೆಚ್ಚಾಗುತ್ತದೆ?]

ಅಭಿವೃದ್ದಿ ಹೊಂದಿದ 13 ರಾಷ್ಟ್ರಗಳಲ್ಲಿ ಸುಮಾರು 1800 ರಿಂದ 1935 ರಲ್ಲಿ ಹುಟ್ಟಿದ ಜನರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಈ ಅಂಶ ದೃಢಪಟ್ಟಿದೆ. 40 ವರ್ಷದವರ ಮರಣ ಪ್ರಮಾಣವನ್ನು ಪರಿಶೀಲಿಸಿದ ಬಳಿಕ ವೈಯಕ್ತಿಕವಾಗಿ 1880 ರ ನಂತರದ ವ್ಯಕ್ತಿಗಳ ಕುರಿತಾಗಿ ಅಧ್ಯಯನ ಕೈಗೊಂಡಾಗ ಪುರುಷರಿಗಿಂತ ಮಹಿಳೆಯರ ಮರಣಪ್ರಮಾಣ 70% ನಷ್ಟು ಇಳಿಕೆಯಾಗಿರುವುದು ಬೆಳಕಿಗೆ ಬಂದಿದೆ.
ಅಧ್ಯಯನ ಕೈಗೊಂಡ ಸಂಶೋಧಕರು ಧೂಮಪಾನ ಹಾಗೂ ಹೃದಯ ಸಂಬಂಧಿಸಿದ ಖಾಯಿಲೆಗಳೇ 40 ವರ್ಷ ಮೇಲ್ಪಟ್ಟ ಪುರುಷರ ಸಾವು ಹೆಚ್ಚಾಗುವುದಕ್ಕೆ ಪ್ರಮುಖ ಕಾರಣ. ಹೆಚ್ಚಾಗಿ ಮಧ್ಯ ವಯಸ್ಕ ಮತ್ತು ಯುವಕರಲ್ಲಿ ಹೃದಯ ಸಂಬಂಧಿತ ಖಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ[ಹುಡುಗಿರೇ ಹುಷಾರ್! ನೀವು ಟೈಟ್ ಜೀನ್ಸ್ ಹಾಕ್ತೀರಾ?]
ಮರಣಪ್ರಮಾಣದ ವ್ಯತ್ಯಾಸದ ಕುರಿತಾಗಿ ಸಂಶೋಧನೆ ನಡೆಸಿದಾಗ ಹೃದಯ ಸಂಬಂಧಿ ಮತ್ತು ಆಂತರಿಕ ತೊಂದರೆಗಳು, ದೈಹಿಕ ರಕ್ಷಣಾತ್ಮಕ ಅಂಶಗಳು ಪುರುಷ ಮತ್ತು ಮಹಿಳೆಯರಲ್ಲಿ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಇವುಗಳೇ ಮಹಿಳೆಯರ ಜೀವಿತಾವಧಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಯುಎಸ್‌ಸಿ ವಿಶ್ವವಿದ್ಯಾನಿಲಯ ಪ್ರೊ ಕ್ಯಾಲೆಬ್ ಫಿಂಚ್ ತಿಳಿಸಿದ್ದಾರೆ.












Click it and Unblock the Notifications