ಪ್ರಪಂಚದಾದ್ಯಂತ ಎಲ್ಲರಿಗೂ ಶನಿವಾರ-ಭಾನುವಾರ ವೀಕೆಂಡ್ ರಜೆ ಇರುವುದಿಲ್ಲ: ಯಾವ ದೇಶಗಳಲ್ಲಿ ಯಾವ ದಿನ ರಜೆ ಇರುತ್ತೆ ಗೊತ್ತಾ?

ಸಾಮಾನ್ಯವಾಗಿ ನಮ್ಮ ಭಾರತದವರಿಗೆ ವಾರಾಂತ್ಯ ಅಥವಾ ವೀಕೆಂಡ್ ಎಂದರೆ ನಮಗೆ ಥಟ್ಟನೆ ನೆನಪಾಗುವುದು ಶನಿವಾರ ಮತ್ತು ಭಾನುವಾರ. ಸೋಮವಾರದಿಂದ ಶುಕ್ರವಾರದವರೆಗೆ ಆಫೀಸ್‌ಗಳಲ್ಲಿ ಕಷ್ಟಪಟ್ಟು ಕೆಲಸ ಮಾಡಿ, ಶನಿವಾರ ಮತ್ತು ಭಾನುವಾರ ವಿಶ್ರಾಂತಿ ಪಡೆಯುವುದು ಬಹುತೇಕರ ದಿನಚರಿ.

ಆದರೆ, ಪ್ರಪಂಚದಾದ್ಯಂತ ಇದೇ ನಿಯಮ ಜಾರಿಯಲ್ಲಿದೆ ಎಂದು ನೀವು ಅಂದುಕೊಂಡಿದ್ದರೆ ಅದು ತಪ್ಪು. ವಿಶ್ವದ ಹಲವು ದೇಶಗಳಲ್ಲಿ ಭಾನುವಾರ ಸಾಮಾನ್ಯ ಕೆಲಸದ ದಿನವಾಗಿದೆ. ಕೆಲವು ದೇಶಗಳಲ್ಲಿ ಶುಕ್ರವಾರವನ್ನ ವಾರಾಂತ್ಯದ ರಜೆಯನ್ನಾಗಿ ಆಚರಿಸಿದರೆ, ಇನ್ನು ಕೆಲವು ದೇಶಗಳಲ್ಲಿ ಸತತವಲ್ಲದ ಎರಡು ದಿನಗಳ ರಜೆ ನೀಡಲಾಗುತ್ತದೆ.

Why Weekends Aren t Saturday amp amp Sunday Everywhere Countries With Unusual Working Weeks Explained

ಧಾರ್ಮಿಕ ಸಂಪ್ರದಾಯಗಳು, ಆರ್ಥಿಕ ಆದ್ಯತೆಗಳು ಮತ್ತು ಸರ್ಕಾರಿ ನೀತಿಗಳಿಂದಾಗಿ ಇಂತಹ ವಿಭಿನ್ನ ವಾರಾಂತ್ಯದ ರಜೆಗಳು ಕಂಡುಬರುತ್ತವೆ. ಜಗತ್ತಿನಾದ್ಯಂತ ಇರುವ ಇಂತಹ ಕೆಲಸದ ವೇಳಾಪಟ್ಟಿ ಮತ್ತು ಯಾವ ದೇಶದಲ್ಲಿ ಯಾವ ದಿನ ರಜೆ ನೀಡಲಾಗುತ್ತದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೌದಿ ಅರೇಬಿಯಾ: ಶುಕ್ರವಾರ ಮತ್ತು ಶನಿವಾರ ರಜೆ

ಸೌದಿ ಅರೇಬಿಯಾದಲ್ಲಿ ಶುಕ್ರವಾರ ಮತ್ತು ಶನಿವಾರವನ್ನ ಅಧಿಕೃತ ವೀಕೆಂಡ್ ರಜೆಯಾಗಿ ಆಚರಿಸಲಾಗುತ್ತದೆ. ಇಲ್ಲಿನ ಸರ್ಕಾರಿ ಕಚೇರಿಗಳು ಭಾನುವಾರದಿಂದ ಗುರುವಾರದವರೆಗೆ ಕಾರ್ಯನಿರ್ವಹಿಸುತ್ತವೆ. 2013ರ ಜೂನ್‌ ತಿಂಗಳಿಗಿಂತ ಮೊದಲು ಇಲ್ಲಿ ಗುರುವಾರ ಮತ್ತು ಶುಕ್ರವಾರ ರಜೆ ನೀಡಲಾಗುತ್ತಿತ್ತು.

ಆದರೆ ಅಂತರಾಷ್ಟ್ರೀಯ ಮಾರುಕಟ್ಟೆಗಳು ಮತ್ತು ಪ್ರಾದೇಶಿಕ ವ್ಯಾಪಾರ ಪಾಲುದಾರರೊಂದಿಗೆ ಉತ್ತಮ ಸಮನ್ವಯ ಸಾಧಿಸುವ ಉದ್ದೇಶದಿಂದ ಈ ಬದಲಾವಣೆ ಮಾಡಲಾಗಿದೆ.

ಭಾನುವಾರವೂ ಕೆಲಸ ಮಾಡುವ ದೇಶಗಳು: ಬಾಂಗ್ಲಾದೇಶ ಮತ್ತು ಕತಾರ್

ಬಾಂಗ್ಲಾದೇಶ ಮತ್ತು ಕತಾರ್ ದೇಶಗಳಲ್ಲಿ ಭಾನುವಾರ ಸರ್ಕಾರಿ ಮತ್ತು ಖಾಸಗಿ ವಲಯದ ಸಾಮಾನ್ಯ ಕೆಲಸದ ದಿನವಾಗಿದೆ. ಬಾಂಗ್ಲಾದೇಶದಲ್ಲಿ ಶುಕ್ರವಾರ ಮತ್ತು ಶನಿವಾರವನ್ನ ವಾರಾಂತ್ಯದ ರಜೆಯಾಗಿ ಪರಿಗಣಿಸಲಾಗುತ್ತದೆ.

ಸರ್ಕಾರಿ ಅಧಿಸೂಚನೆಗಳ ಪ್ರಕಾರ ಭಾನುವಾರದಿಂದ ಗುರುವಾರದವರೆಗೆ ಇಲ್ಲಿನ ಕಚೇರಿಗಳು ಕಾರ್ಯನಿರ್ವಹಿಸುತ್ತವೆ. ಕತಾರ್‌ನಲ್ಲಿ ಕೂಡ ಇದೇ ನಿಯಮವಿದ್ದು, ಭಾನುವಾರದಿಂದ ಗುರುವಾರದವರೆಗೆ ಅಧಿಕೃತ ಕೆಲಸದ ದಿನಗಳಾಗಿವೆ.

ಬ್ರೂನಿ: ಸತತವಲ್ಲದ ಎರಡು ದಿನಗಳ ರಜೆ

ಬ್ರೂನಿ ದೇಶವು ಜಗತ್ತಿನ ಅತ್ಯಂತ ವಿಶಿಷ್ಟ ಕೆಲಸದ ವೇಳಾಪಟ್ಟಿಯನ್ನ ಹೊಂದಿದೆ. ಇಲ್ಲಿನ ಸರ್ಕಾರಿ ನೌಕರರು ಸೋಮವಾರದಿಂದ ಗುರುವಾರದವರೆಗೆ ಕೆಲಸ ಮಾಡುತ್ತಾರೆ. ಶುಕ್ರವಾರ ರಜೆ ಇರುತ್ತದೆ, ಆದರೆ ಶನಿವಾರ ಮತ್ತೆ ಕಚೇರಿಗೆ ಹಾಜರಾಗಬೇಕು. ನಂತರ ಭಾನುವಾರ ರಜೆ ನೀಡಲಾಗುತ್ತದೆ. ಅಂದರೆ, ಇಲ್ಲಿನ ನೌಕರರಿಗೆ ವಾರದಲ್ಲಿ ಎರಡು ದಿನ ರಜೆ ಸಿಕ್ಕರೂ, ಆ ರಜೆಗಳು ಸತತವಾಗಿ ಬರುವುದಿಲ್ಲ.

ಯುಎಇ ಶಾರ್ಜಾ: ಮೂರು ದಿನಗಳ ವಾರಾಂತ್ಯದ ರಜೆ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಜನವರಿ 2022ರಲ್ಲಿ ತನ್ನ ಫೆಡರಲ್ ಸರ್ಕಾರಿ ನೌಕರರಿಗೆ ಶನಿವಾರ ಮತ್ತು ಭಾನುವಾರದ ವಾರಾಂತ್ಯವನ್ನ ಪರಿಚಯಿಸಿತು. ಆದರೆ, ಶಾರ್ಜಾ ಪ್ರಾಂತ್ಯವು ವಿಭಿನ್ನವಾದ ವ್ಯವಸ್ಥೆಯನ್ನು ಅನುಸರಿಸುತ್ತದೆ.

ಶಾರ್ಜಾ ಸರ್ಕಾರಿ ನೌಕರರು ಸೋಮವಾರದಿಂದ ಗುರುವಾರದವರೆಗೆ ಮಾತ್ರ ಕೆಲಸ ಮಾಡುತ್ತಾರೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ಸೇರಿದಂತೆ ಒಟ್ಟು ಮೂರು ದಿನಗಳ ಸುದೀರ್ಘ ವಾರಾಂತ್ಯದ ರಜೆಯನ್ನ ಅವರು ಆನಂದಿಸುತ್ತಾರೆ.

ನೇಪಾಳ: ಇತ್ತೀಚಿನ ವಾರಾಂತ್ಯದ ಬದಲಾವಣೆಗಳು

ನೇಪಾಳ ಈ ಹಿಂದೆ ಶನಿವಾರವನ್ನ ಮಾತ್ರ ತನ್ನ ಏಕೈಕ ವೀಕೆಂಡ್ ಸರ್ಕಾರಿ ರಜೆಯಾಗಿ ಆಚರಿಸುತ್ತಿತ್ತು. ಆದರೆ, ಇಂಧನ ಬಳಕೆಯನ್ನ ಕಡಿಮೆ ಮಾಡುವ ಮತ್ತು ಪೂರೈಕೆ ವ್ಯತ್ಯಯಗಳನ್ನ ನಿಭಾಯಿಸುವ ಉದ್ದೇಶದಿಂದ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶನಿವಾರ ಮತ್ತು ಭಾನುವಾರ ಎರಡು ದಿನಗಳ ರಜೆಯನ್ನ ಘೋಷಿಸುವ ಮೂಲಕ ಹೊಸ ವ್ಯವಸ್ಥೆಯನ್ನ ಪರಿಚಯಿಸಿದೆ.

ಒಟ್ಟಿನಲ್ಲಿ, ವಾರಾಂತ್ಯದ ರಜೆಗಳು ಆಯಾ ದೇಶದ ಸ್ಥಳೀಯ ಸಂಪ್ರದಾಯಗಳು, ಆರ್ಥಿಕ ಸ್ಥಿತಿಗತಿಗಳು ಮತ್ತು ಬದಲಾಗುತ್ತಿರುವ ಆದ್ಯತೆಗಳಿಗೆ ಅನುಗುಣವಾಗಿ ರೂಪುಗೊಂಡಿವೆ. ಈ ಮೇಲಿನ ಮಾಹಿತಿಯು ಸರ್ಕಾರಿ ಕಚೇರಿಗಳ ರಜೆಗಳ ಬಗ್ಗೆ ಇದ್ದು, ಖಾಸಗಿ ವಲಯದ ರಜೆಗಳ ನಿಯಮಗಳು ಭಿನ್ನವಾಗಿರಬಹುದು.

ಏನೇ ಆಗಲಿ, ಜಗತ್ತಿನ ಎಲ್ಲೆಡೆ ಭಾನುವಾರ ಎಂದರೆ ರಜೆ ಎಂಬ ನಮ್ಮ ಸಾಮಾನ್ಯ ನಂಬಿಕೆ ಮಾತ್ರ ಈ ದೇಶಗಳ ಮಟ್ಟಿಗೆ ಅನ್ವಯಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+