ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಡಿಲೀಟ್ ಆಗಿದ್ದು ಯಾಕೆ..?!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಡಿಲೀಟ್ ಆಗ್ಬಿಟ್ಟಿತ್ತಂತೆ ಹೌದಾ?! ಇಂಥದೊಂದು ಸುದ್ದಿ ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿತ್ತು. ವಿಶ್ವದ ದೊಡ್ಡಣ್ಣನ ಅಧ್ಯಕ್ಷರ ಅಧಿಕೃತ ಟ್ವಿಟ್ಟರ್ ಖಾತೆಯೇ ಡಿಲೀಟ್ ಆಗೋದಂದ್ರೆ ಸುಮ್ನೇನಾ? ಅಷ್ಟಕ್ಕೂ ಟ್ರಂಪ್ ಖಾತೆ ಟ್ವಿಟ್ಟರ್ ಲೋಕದಿಂದ ಬರೋಬ್ಬರಿ 11 ನಿಮಿಷಗಳ ಕಾಲ ಮರೆಯಾಗಿದ್ದು ಯಾಕೆ? ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡುವ ಮಟ್ಟಿನ ಅಪರಾಧವನ್ನು ಟ್ರಂಪ್ ಮಾಡಿದ್ದರಾ...?
Has the personal Donald Trump Twitter account been deleted? pic.twitter.com/JARH9ILsPG
— Jen Chaney (@chaneyj) November 2, 2017
ಅಂಥ ಮನೆಬಿದ್ದುಹೋಗುವ ಕಾರಣ ಎಂಥದ್ದೂ ಇಲ್ಲ! ಟ್ವಿಟ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ಟ್ವಿಟ್ಟರ್ ಕಂಪೆನಿಯನ್ನು ತೊರೆದಿದ್ದ. ಟ್ವಿಟ್ಟರ್ ಕಚೇರಿಯಲ್ಲಿ ತನ್ನ ವೃತ್ತಿ ಬದುಕಿನ ಕೊನೇ ದಿನವಾಗಿದ್ದರಿಂದ ನ.2 ರಂದು ಬೇಕೆಂದೇ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿಬಿಟ್ಟಿದ್ದ!
Through our investigation we have learned that this was done by a Twitter customer support employee who did this on the employee’s last day. We are conducting a full internal review. https://t.co/mlarOgiaRF
— Twitter Government (@TwitterGov) November 3, 2017
ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ಡಿಲೀಟ್ ಆಗಿದ್ದು ಕೆಲ ಕಾಲ ವಿಶ್ವದಾದ್ಯಂತ ತಲ್ಲಣವನ್ನುಂಟು ಮಾಡಿತ್ತು. ಟ್ವಿಟ್ಟರ್ ಕಂಪೆನಿಯೂ ಇದರಿಂದ ಇರಿಸುಮುರಿಸನ್ನು ಅನುಭವಿಸುವಂತಾಯಿತು. ಆದರೆ ತಕ್ಷಣವೇ ಈ ಕುರಿತು ಎಚ್ಚೆತ್ತುಕೊಂಡ ಟ್ವಿಟ್ಟರ್ ವ್ಯವಸ್ಥಾಪಕರು, ಟ್ವೀಟ್ ಮಾಡುವ ಮೂಲಕ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.

"ಸಿಬ್ಬಂದಿಯೊಬ್ಬರು ಮಾಡಿದ ಪ್ರಮಾದದಿಂದ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆ ನಿಷ್ಕ್ರಿಯಗೊಂಡಿತ್ತು. 11 ನಿಮಿಷಗಳ ಕಾಲಗಳ ನಂತರ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇನೆ. ಇಂಥ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇವೆ" ಎಂದು ಟ್ವಿಟ್ಟರ್ ಗವರ್ನಮೆಂಟ್ ಖಾತೆಯಿಂದ ಕ್ಷಮೆ ಕೇಳಲಾಗಿದೆ.












Click it and Unblock the Notifications