ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್‌ನಲ್ಲಿ 118 ಮಿಲಿಯನ್ ಫಾಲೋವರ್ಸ್ ಕಳೆದುಕೊಂಡ ಜುಕರ್‌ಬರ್ಗ್

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಜಗತ್ತಿನಲ್ಲಿ ಬಳಕೆದಾರರ ಮೇಲೆ ಪರಿಣಾಮ ಬೀರಿದ ತಾಂತ್ರಿಕ ದೋಷದಿಂದ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ 118 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ.

ಫೇಸ್‌ಬುಕ್‌ನಲ್ಲಿ ಜುಕರ್‌ಬರ್ಗ್ 119 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರು. ಆದರೆ ಈ ಸಂಖ್ಯೆಯು ದಿಢೀರನೇ 10,000ಕ್ಕೆ ಕುಸಿದಿರುವುದು ಬೆಳಕಿಗೆ ಬಂದಿದೆ. ಯಾವುದೇ ಮುನ್ನೆಚ್ಚರಿಕೆ ನೀಡದೇ ಬುಧವಾರ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ಫೇಸ್‌ಬುಕ್‌ ಅನ್ನು ಬಳಸುವ ಹಲವರು ಇಂಥದ್ದೇ ಸಮಸ್ಯೆ ಅನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.

ಶಾಕಿಂಗ್ ಸುದ್ದಿ: 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಾ ಫೇಸ್‌ಬುಕ್?ಶಾಕಿಂಗ್ ಸುದ್ದಿ: 12,000 ಉದ್ಯೋಗಿಗಳನ್ನು ವಜಾಗೊಳಿಸುತ್ತಾ ಫೇಸ್‌ಬುಕ್?

ಈ ತಾಂತ್ರಿಕ ದೋಷದ ಕುರಿತು ಸಾಲು ಸಾಲು ದೂರುಗಳು ವರದಿಯಾಗುತ್ತಿದ್ದಂತೆ ಕಂಪನಿಯು ಅಲರ್ಟ್ ಆಯಿತು. ತದನಂತರದಲ್ಲಿ ಮೆಟಾ ದೋಷವನ್ನು ಪರಿಹರಿಸುವ ನಿಟ್ಟಿನಲ್ಲಿ ತ್ವರಿತ ಮತ್ತು ಪರಿಸ್ಥಿತಿಯನ್ನು ಸರಿಪಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು. ಆದರೆ, ಯಾವಾಗ ದೋಷ ಸಂಭವಿಸಿದೆ ಎಂಬುದರ ಕುರಿತು ಯಾವುದೇ ವಿವರಣೆಯನ್ನು ನೀಡಿಲ್ಲ.

ಫೇಸ್‌ಬುಕ್ ವಕ್ತಾರರ ಸ್ಪಷ್ಟನೆಯಲ್ಲಿ ಏನಿದೆ?

ಫೇಸ್‌ಬುಕ್ ವಕ್ತಾರರ ಸ್ಪಷ್ಟನೆಯಲ್ಲಿ ಏನಿದೆ?

''ಫೇಸ್‌ಬುಕ್ ಪ್ರೊಫೈಲ್‌ಗಳಲ್ಲಿ ಕೆಲವು ಬಳಕೆದಾರರ ಫಾಲೋವರ್ಸ್ ಸಂಖ್ಯೆಯು ಅಸಮಂಜಸವಾಗಿ ತೋರಿಸುತ್ತಿದೆ ಎಂಬ ದೂರುಗಳು ಕೇಳಿ ಬಂದಿದೆ. ಈ ಹಿನ್ನೆಲೆ ನಾವು ದೋಷದ ಕಾರಣವನ್ನು ಪರಿಶೋಧಿಸುತ್ತಿದ್ದೇವೆ. ಸಾಧ್ಯವಾದಷ್ಟು ಬೇಗ ಅದನ್ನು ಪರಿಹರಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತೆಗೆದುಕೊಂಡು ಬರಲಾಗುತ್ತದೆ. ಈ ಅನನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ," ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ.

ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನೂ ಕಾಡಿದ ಸಮಸ್ಯೆ

ಲೇಖಕಿ ತಸ್ಲೀಮಾ ನಸ್ರೀನ್ ಅವರನ್ನೂ ಕಾಡಿದ ಸಮಸ್ಯೆ

ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ಕೂಡ ಈ ದೋಷದಿಂದಾಗಿ ಸಮಸ್ಯೆ ಅನ್ನು ಎದುರಿಸಿದ್ದಾರೆ. ಲೇಖಕಿಯು ಫೇಸ್‌ಬುಕ್‌ನಲ್ಲಿ ಸಾವಿರಾರು ಫಾಲೋವರ್ಸ್ ಅನ್ನು ಕಳೆದುಕೊಂಡಿದ್ದಾರೆ. "ಫೇಸ್‌ಬುಕ್ ಸುನಾಮಿಯನ್ನು ಸೃಷ್ಟಿಸಿತು, ಅದು ನನ್ನ ಸುಮಾರು 9,00,000 ಅನುಯಾಯಿಗಳನ್ನು ಅಳಿಸಿಹಾಕಿದ್ದು, ಫಾಲೋವರ್ಸ್ ಸಂಖ್ಯೆಯನ್ನು ಕೇವಲ 9000ಕ್ಕೆ ತಗ್ಗಿಸಿದೆ. ಫೇಸ್‌ಬುಕ್‌ನಿಂದ ಈ ಹಾಸ್ಯವೂ ನಡೆಯುತ್ತದೆಯೇ," ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನಿರ್ಧಾರದ ಹಿಂದಿನ ಕಾರಣವೇನು?

ನಿರ್ಧಾರದ ಹಿಂದಿನ ಕಾರಣವೇನು?

ಟೆಕ್ ದೈತ್ಯನನ್ನು ರಷ್ಯಾವು "ಭಯೋತ್ಪಾದಕರು ಮತ್ತು ಉಗ್ರಗಾಮಿಗಳ" ಪಟ್ಟಿಗೆ ಸೇರಿಸಿರುವುದರಿಂದ ಮೆಟಾಗೆ ಇದು ಪ್ರಕ್ಷುಬ್ಧ ವಾರವಾಗಿದೆ. ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿಯ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡುವ ಪೋಸ್ಟ್‌ಗಳನ್ನು ಮೆಟಾ ಅನುಮತಿಸುತ್ತಿದೆ ಎಂದು ರಷ್ಯಾದ ಹಣಕಾಸು ಮೇಲ್ವಿಚಾರಣಾ ಸಂಸ್ಥೆ ಆಗಿರುವ ರೋಸ್ಫಿನ್‌ಮೋನಿಟರಿಂಗ್ ಈ ನಿರ್ಧಾರ ತೆಗೆದುಕೊಂಡಿದೆ.

ಫೇಸ್‌ಬುಕ್ ಒಡೆಯನಿಗೆ ರಷ್ಯಾ ಹಾಕಿದ ನಿರ್ಬಂಧ

ಫೇಸ್‌ಬುಕ್ ಒಡೆಯನಿಗೆ ರಷ್ಯಾ ಹಾಕಿದ ನಿರ್ಬಂಧ

ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಲಿಂಕ್ಡ್‌ಇನ್‌ನ ಸಿಇಒ ರಯಾನ್ ರೋಸ್ಲಾನ್ಸ್‌ಕಿ ಸೇರಿದಂತೆ ಹಲವಾರು ಅಮೇರಿಕನ್ ನಾಗರಿಕರ ಮೇಲೆ ಕ್ರೆಮ್ಲಿನ್ ಹೇರಿದ ನಿರ್ಬಂಧಗಳ ಭಾಗವಾಗಿ ಜುಕರ್‌ಬರ್ಗ್ ಈಗಾಗಲೇ ರಷ್ಯಾ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.

English summary
Why Mark Zuckerberg loses more than 118 million followers on Facebook: Here read the reason.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X