ಇಸ್ರೇಲ್ - ಇರಾನ್ ನಡುವೆ ಇರಾಕ್ ಸೈಲೆಂಟ್ ಯಾಕೆ ? ಜಗತ್ತು ಕಂಡ ಸರ್ವಾಧಿಕಾರಿ ಸದ್ದಾಂ ಹುಸೇನ್‌ಗೆ ಸಾವನ್ನಪ್ಪಿದ್ದೇಗೆ ?!
ಇಸ್ರೇಲ್ ಹಾಗೂ ಇರಾನ್ ದೇಶಗಳ ನಡುವೆ ಹಿಂದೆ ಎಂದೂ ನಡೆಯದಷ್ಟು ಭೀಕರವಾಗಿ ಯುದ್ಧ ನಡೆಯುತ್ತಿದೆ. ಈ ಎರಡೂ ದೇಶಗಳ ನಡುವೆಯೂ ಹಲವು ವರ್ಷಗಳಿಂದ ಸಂಘರ್ಷ ಇದೆ. ಇದೀಗ ಎರಡೂ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವು ಬಹು ಮುಖ್ಯ ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಅದರಲ್ಲಿ ನ್ಯೂಕ್ಲಿಯರ್ ಬಾಂಬ್ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಇರಾನ್ ನ್ಯೂಕ್ಲಿಯರ್ ಬಾಂಬ್ ಹೊಂದಬಾರದು ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಅಂತ ಇಸ್ರೇಲ್ ಹೇಳುತ್ತಿದೆ. ಹಾಗಾದರೆ ಏನಿದು ವಿಷಯ ಮತ್ತು ಇಷ್ಟೆಲ್ಲಾ ಗದ್ದಲದ ನಡುವೆಯೂ ಇರಾಕ್ ಸೈಲೆಂಟ್ ಆಗಿರುವುದು ಯಾಕೆ ಎನ್ನುವ ವಿವರ ಇಲ್ಲಿದೆ.
ಇಸ್ರೇಲ್ ಮತ್ತು ಇರಾನ್‌ನ ನಡುವೆ ಭೌಗೋಳಿಕ, ರಾಜಕೀಯ ಮತ್ತು ಧರ್ಮ ಸೇರಿದಂತೆ ವಿವಿಧ ಕಾರಣಗಳಿಗೆ ಸಂಘರ್ಷ ಇದೆ. ಇನ್ನು ಈ ಸಂಘರ್ಷವು ನೆನ್ನೆ ಮೊನ್ನೆಯದಲ್ಲ ಹಲವು ದಶಕಗಳಿಂದ ಈ ದೇಶಗಳ ನಡುವೆ ಯುದ್ಧ ನಡೆಯುತ್ತಲ್ಲೇ ಇದೆ. ಆದರೆ ಇರಾನ್ ಈಗ ನ್ಯೂಕ್ಲಿಯರ್ ಬಾಂಬ್ ಶಸ್ತಾಸ್ತ್ರವನ್ನು ಹೊಂದುವುದಕ್ಕೆ ಮುಂದಾಗಿದ್ದು. ಇದು ಭಾರೀ ಆಘಾತಕ್ಕೆ ಕಾರಣವಾಗಿದೆ. ಒಂದೊಮ್ಮೆ ಇರಾನ್ ನ್ಯೂಕ್ಲಿಯರ್ ಬಾಂಬ್ ಪಡೆದುಕೊಂಡರೆ ಅದರ ಅಪಾಯವು ತೀವ್ರವಾಗಿ ಇರಲಿದೆ ಅಂತಲೇ ಹೇಳಲಾಗುತ್ತಿದೆ. ನ್ಯೂಕ್ಲಿಯರ್ ಬಾಂಬ್ ಬಳಕೆ ಮಾಡಿದ ಏಕೈಕ ರಾಷ್ಟ್ರ ಅಮೆರಿಕ. ಅಮೆರಿಕದ ಅನಾಹುತ ಈಗ ವಿಶ್ವದ ಮುಂದಿದೆ. ಜಪಾನ್‌ನ ಹಿರೋಷಿಮಾ ಹಾಗೂ ನಾಗಸಾಕಿಯ ಮೇಲೆ ನ್ಯೂಕ್ಲಿಯರ್ ಬಾಂಬ್ ಬಳಕೆ ಮಾಡಲಾಗಿತ್ತು.

ಇದೀಗ ಇಸ್ರೇಲ್ ಮೇಲೆ ಯುದ್ಧ ಸಾರಿರುವ ಇರಾನ್ ನ್ಯೂಕ್ಲಿಯರ್ ಬಾಂಬ್ ಪಡೆದುಕೊಳ್ಳುವುದಕ್ಕೆ ಭಾರೀ ಸಿದ್ಧತೆಯಲ್ಲಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಈ ಎರಡೂ ದೇಶಗಳ ನಡುವಿನ ದೇಶವಾದ ಇರಾಕ್ ಸೈಲೆಂಟ್ ಆಗಿದೆ. ಇರಾಕ್ ದೇಶವು ಇರಾನ್ ಮತ್ತು ಇಸ್ರೇಲ್‌ನ ನಡುವಿನ ಬಗ್ಗೆ ಯಾವುದೇ ವಿಚಾರವನ್ನೂ ಪ್ರಸ್ತಾಪನೆ ಮಾಡುತ್ತಿಲ್ಲ. ಇದರ ನಡುವೆ ಅನವಶ್ಯಕವಾಗಿ ಇಸ್ರೇಲ್ ದೇಶವು ಇರಾಕ್‌ನ ಎಳೆದು ತಂದಿದೆ. ಇರಾಕ್ ದೇಶದ ಸರ್ವಾಧಿಕಾರಿಯಾಗಿದ್ದ ಸದ್ದಾಂ ಹುಸೇನ್‌ಗೆ ಆಗಿದ್ದ ಗತಿಯೇ ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರಿಗೂ ಆಗಬುಹುದೇನೋ ಅಂತ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕ್ಯಾಟ್ಜ್ ಹೇಳಿದ್ದಾರೆ. ಇದು ಮತ್ತೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಇರಾನ್ ದೇಶದ ಮೇಲೆ ಈ ಬಾರಿ ಇಸ್ರೇಲ್ ಮೊದಲು ದಾಳಿ ಮಾಡಿದೆ. ಅಲ್ಲದೇ ವಿಶ್ವವನ್ನು ಇರಾನ್‌ನನಿಂದ ರಕ್ಷಣೆ ಮಾಡುವುದಕ್ಕೆ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಇಸ್ರೇಲ್ ಹೇಳಿದೆ. ಇದರೊಂದಿಗೆ ಇಸ್ರೇಲ್ ವಿರುದ್ಧವಾಗಿ ಇರಾನ್ ರೀತಿಯೇ ಇರಾಕ್ ಸಹ ನಡೆದುಕೊಂಡಿತ್ತು. ಆದರೆ ಇರಾಕ್‌ಗೆ ಏನು ಪರಿಸ್ಥಿತಿ ಆಗಿದೆ ಎನ್ನುವುದನ್ನು ನೋಡಲಿ ಅಂತ ಇಸ್ರೇಲ್ ಹೇಳಿದೆ. ಈ ನಡುವೆ ಅಮೆರಿಕದ ನಡೆಯೂ ಇಸ್ರೇಲ್‌ನ ಪರವಾಗಿಯೇ ಇದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ದೇಶವನ್ನೇ ಟೀಕೆ ಮಾಡುತ್ತಿದ್ದಾರೆ.
ಸದ್ದಾಂ ಹುಸೇನ್ ಅಂತ್ಯವಾಗಿದ್ದು ಹೇಗೆ ?
ಇರಾಕ್‌ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರನ್ನು ಡಿಸೆಂಬರ್ 30, 2006 ರಂದು ಗಲ್ಲಿಗೇರಿಸಲಾಯಿತು. ಇರಾಕ್‌ನ ಹೈ ಟ್ರಿಬ್ಯೂನಲ್ ಅಮಾನವೀಯತೆಯ ಅಪರಾಧಗಳಿಗೆ ಅವರನ್ನು ದೋಷಿ ಎಂದು ಗುರುತಿಸಿ ಈ ಶಿಕ್ಷೆ ವಿಧಿಸಲಾಗಿತ್ತು. ಸರ್ವಾಧಿಕಾರಿ ಭಾರೀ ದಾಳಿಗಳನ್ನೇ ಮಾಡಿದ್ದರು. ಹೀಗಾಗಿ ಸದ್ದಾಂ ಹುಸೇನ್ ಅವರು ಮರಣದಂಡನೆಗೆ ಗುರಿಯಾಗಿದ್ದರು. ಇನ್ನು ಸದ್ದಾಂ ಹುಸೇನ್ ಯುಗಾಂತ್ಯದ ನಂತರ ಇಸ್ರೇಲ್ - ಇರಾಕ್ ಸಂಘರ್ಷ ಅಂತ್ಯವಾಗಿದೆ. ಮಾತ್ರವಲ್ಲ ಇರಾಕ್ ಈಗ ಈ ವಿಚಾರದಲ್ಲಿ ಮೂಗು ತೂರಿಸುತ್ತಿಲ್ಲ.
-
ಮಧ್ಯಪ್ರಾಚ್ಯ ಮುಳುಗುವಂತೆ ಮಾಡುತ್ತಿದೆ ಇರಾನ್ ಸಂಘರ್ಷ, ಅಮೆರಿಕದ ಹೊಸ ರಣತಂತ್ರ | Iran Conflict -
ಇರಾನ್ ಸೇನೆಗೆ ಎಚ್ಚರಿಕೆ ಸಂದೇಶ ರವಾನಿಸಿದ ಸೌದಿ ಅರೇಬಿಯಾ, ಪರಿಸ್ಥಿತಿ ಭೀಕರ | Iran Conflict -
ಇರಾನ್ ದೇಶದ ಸಾಲು ಸಾಲು ನಾಯಕರ ಕಥೆ ಮುಗಿಯಿತು, ಯುದ್ಧ ಮತ್ತಷ್ಟು ಜೋರಾಯ್ತು | Iran Conflict -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications