ಕೊರೊನಾ ವೈರಸ್: ವಿಶ್ವ ತುರ್ತು ಪರಿಸ್ಥಿತಿ ಘೋಷಿಸಿದ ಆರೋಗ್ಯ ಸಂಸ್ಥೆ

ವುಹಾನ್, ಜನವರಿ 31: ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟವರ ಸಂಖ್ಯೆ 213ಕ್ಕೇರಿದೆ.

ಜಗತ್ತಿನಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಹೇರಲಾಗಿದೆ. ಸ್ವಿಡ್ಜರ್‌ಲೆಂಡ್ನಲ್ಲಿರುವ ಜಿನಿವಾದಲ್ಲಿರುವ ವಿಶ್ವ ಆರೋಗ್ಯ ಸಂಘಟನೆ ಆರಂಭದಲ್ಲಿ ಕೊರೊನಾ ವೈರಸ್ ನಿಂದ ಜಾಗತಿಕವಾಗಿ ಅಪಾಯವಿದೆ ಎಂಬ ಎಚ್ಚರಿಕೆಯನ್ನು ತಳ್ಳಿಹಾಕಿತ್ತು.

ಆದರೆ ಕಳೆದ ನಾಲ್ಕೈದು ದಿನಗಳ ಅಪಾಯದ ಮೌಲ್ಯಮಾಪನವನ್ನು ಪರಿಷ್ಕರಿಸಿ ಜಾಗತಿಕ ಮಟ್ಟದಲ್ಲಿ ವೈರಸ್ ನಿಂದ ಜಾಗ್ರತೆ ವಹಿಸುವಂತೆ ದೇಶಗಳಿಗೆ ಎಚ್ಚರಿಕೆ ನೀಡಿದೆ.

ಚೀನಾ ಸರ್ಕಾರ ಮತ್ತೆ 43 ಮಂದಿ ಕೊರೊನಾ ವೈರಸ್ ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದು ಈ ಮೂಲಕ ಚೀನಾದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 213ಕ್ಕೇರಿದೆ. ನಿನ್ನೆ ದೃಢಪಟ್ಟ ಇಬ್ಬರ ಸಾವು ಹುಬೈ ಪ್ರಾಂತ್ಯದಲ್ಲಿ ಆಗಿದೆ. ಭಾರತದಿಂದ ಚೀನಾಕ್ಕೆ ಐವರು ವೈದ್ಯರು ತೆರಳಿದ್ದಾರೆ.

ಕಳಪೆ ಆರೋಗ್ಯ ವ್ಯವಸ್ಥೆಯಿರುವ ದೇಶ

ಕಳಪೆ ಆರೋಗ್ಯ ವ್ಯವಸ್ಥೆಯಿರುವ ದೇಶ

ಕಳಪೆ ಆರೋಗ್ಯ ವ್ಯವಸ್ಥೆಯಿರುವ ದೇಶಗಳಿಗೆ ಸಹ ವೈರಸ್ ಹರಡಬಹುದೆಂದು ನಮಗೆ ತೀವ್ರ ಆತಂಕವಿದೆ. ಇನ್ನಷ್ಟು ಹರಡದಂತೆ ನಾವೆಲ್ಲರೂ ಜೊತೆ ಸೇರಿ ಕೆಲಸ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಘಟನೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಚೀನಾದೊಂದಿಗೆ ವ್ಯಾಪಾರಕ್ಕೆ ನಿರ್ಬಂಧ

ಚೀನಾದೊಂದಿಗೆ ವ್ಯಾಪಾರಕ್ಕೆ ನಿರ್ಬಂಧ

ಕೊರೊನಾ ವೈರಸ್ 15ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು ಚೀನಾ ದೇಶದೊಂದಿಗೆ ಪ್ರಯಾಣ ಮತ್ತು ವ್ಯಾಪಾರಕ್ಕೆ ಸದ್ಯಕ್ಕೆ ನಿರ್ಬಂಧ ಹೇರಿವೆ.ಈಗಾಗಲೇ ಹಲವು ದೇಶಗಳು ಚೀನಾಕ್ಕೆ ಹೋಗಬೇಡಿ ಎಂದು ತನ್ನ ನಾಗರಿಕರಿಗೆ ಸರ್ಕಾರಗಳು ಒತ್ತಾಯಿಸುತ್ತಿದ್ದು ಚೀನಾದ ಕೇಂದ್ರ ನಗರ ವುಹಾನ್ ನಿಂದ ಪ್ರಯಾಣಿಕರು ತಮ್ಮ ದೇಶಕ್ಕೆ ಪ್ರಯಾಣಿಸುವುದನ್ನು ಸಹ ತಡೆದಿವೆ. ಇಲ್ಲಿಯೇ ಕೊರೊನಾ ವೈರಸ್ ಸೋಂಕು ಹೆಚ್ಚಾಗಿ ಕಾಣಿಸಿಕೊಂಡು ಜನರು ಮೃತಪಟ್ಟಿರುವುದು. ಆದರೆ ಈ ರೀತಿ ಮಾಡುವುದು ಅನಗತ್ಯ, ಇದರಿಂದ ವೈರಸ್ ತಡೆಯಲು ಸಾಧ್ಯವಿಲ್ಲ ಎಂದು ಟೆಡ್ರೊಸ್ ಹೇಳಿದ್ದಾರೆ.

ಐವರು ವೈದ್ಯರು ಚೀನಾಕ್ಕೆ

ಐವರು ವೈದ್ಯರು ಚೀನಾಕ್ಕೆ

ಚೀನಾದಲ್ಲಿರುವ ಭಾರತದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕರೆತರಲು ಭಾರತದಿಂದ ಚೀನಾಕ್ಕೆ ಐವರು ವೈದ್ಯರು ತೆರಳಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಿಮಾನವು ದೆಹಲಿಯಿಂದ ಚೀನಾಕ್ಕೆ ಹೊರಡಲಿದೆ.

ಬ್ರಿಟಿಷ್ ಏರ್‌ವೇಸ್, ಲುಫ್ತಾನ್ಸ ರದ್ದು

ಬ್ರಿಟಿಷ್ ಏರ್‌ವೇಸ್, ಲುಫ್ತಾನ್ಸ ರದ್ದು

ಚೀನಾಕ್ಕೆ ಪ್ರಯಾಣಿಸುವ ಏರ್ ಫ್ರಾನ್ಸ್, ಬ್ರಿಟಿಷ್ ಏರ್ ವೇಸ್ ಮತ್ತು ಲುಫ್ತಾನ್ಸ ತಮ್ಮ ಸೇವೆಯನ್ನು ಆ ದೇಶಕ್ಕೆ ತಾತ್ಕಾಲಿಕವಾಗಿ ರದ್ದುಪಡಿಸಿವೆ.ಇಸ್ರೇಲ್, ರಷ್ಯಾ ದೇಶಗಳು ಸಹ ನಾಗರಿಕರ ಪ್ರಯಾಣವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+