ಗೋಧಿ-ಗೊಬ್ಬರಗಳ ಒಪ್ಪಂದ: ಆಹಾರ ಭದ್ರತೆಗೆ ಮುಂದಾದ ಭಾರತ-ಈಜಿಪ್ಟ್
ದೆಹಲಿ ಸೆಪ್ಟೆಂಬರ್ 1: ಭಾರತದಲ್ಲಿ ಆಹಾರ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಯೋಚಿಸಿದೆ. ಇದರ ಬೆನ್ನಲ್ಲೆ ಈಜಿಪ್ಟ್ನೊಂದಿಗೆ ಒಪ್ಪಂದವೊಂದನ್ನ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಹೌದು.. ಭಾರತ ಮತ್ತು ಈಜಿಪ್ಟ್ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಎರಡು ಸರಕುಗಳ ಕೊರತೆಯನ್ನು ನಿಭಾಯಿಸಲು ಗೋಧಿ-ಗೊಬ್ಬರಗಳ ಒಪ್ಪಂದವನ್ನು ಚರ್ಚಿಸುತ್ತಿವೆ ಎಂದು ಈ ವಿಷಯದ ಪರಿಚಯವಿರುವ ಜನರು ಹೇಳಿದ್ದಾರೆ.

ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಈಜಿಪ್ಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳು ತಮ್ಮ ಸಂಬಂಧವನ್ನು ಒಪ್ಪಂದದ ಮೂಲಕ ಹೆಚ್ಚಿಸಿಕೊಂಡಿವೆ. 2027ರ ವೇಳೆಗೆ ದ್ವಿಮುಖ ವ್ಯಾಪಾರವನ್ನು $ 12 ಬಿಲಿಯನ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.
ಏನಿದು ಗೋಧಿ-ಗೊಬ್ಬರಗಳ ಒಪ್ಪಂದ?
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರು ಮೋದಿಯವರೊಂದಿಗಿನ ಸಭೆಯ ಸಮಯದಲ್ಲಿ ತಮ್ಮ ದೇಶದ ಧಾನ್ಯದ ಅಗತ್ಯವನ್ನು ಪ್ರಸ್ತಾಪಿಸಿದಾಗ ಗೋಧಿ-ಗೊಬ್ಬರಗಳ ಒಪ್ಪಂದದ ಕುರಿತು ಚರ್ಚೆಗಳು ಪ್ರಾರಂಭವಾದವು. ಪ್ರತಿಯಾಗಿ ಮೋದಿ ಅವರು ರಸಗೊಬ್ಬರದ ಬಗ್ಗೆ ಭಾರತದ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಮಾತುಕತೆ ಈಗ ಚರ್ಚೆಯಯ ವಿಷಯವಾಗಿದೆ. ಏಕೆಂದರೆ ಧಾನ್ಯದ ಕೊರತೆಯನ್ನು ಅನುಭವಿಸುತ್ತಿರುವ ಈಜಿಪ್ಟ್‌ನಲ್ಲಿ ಗುಣಮಟ್ಟದ ರಸಗೊಬ್ಬರ ಹೇರಳವಾಗಿ ಲಭ್ಯವಿದೆ. ಅದೇ ರೀತಿ ಭಾರತಕ್ಕೆ ರಸಗೊಬ್ಬರದ ಅವಶ್ಯಕತೆ ಇದ್ದು ಧಾನ್ಯಗಳನ್ನು ಇತರ ದೇಶಗಳಿಗೆ ರಫ್ತು ಮಾಡುತ್ತಿದೆ. ಎರಡು ದೇಶದ ನಾಯಕರು ಅವರ ಅವಶ್ಯಕತೆಯ ಬಗ್ಗೆ ಪ್ರಸ್ತಾಪಿಸಿದ್ದು ಗೋಧಿ-ಗೊಬ್ಬರಗಳ ಪರಸ್ಪರ ರಫ್ತಿನ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದು ಎರಡೂ ದೇಶಗಳಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಲಾಗುತ್ತಿದೆ.

ಗೋಧಿ ಪೂರೈಕೆದಾರ ಭಾರತ
ಈಜಿಪ್ಟ್ ಏಪ್ರಿಲ್ 2022 ರಲ್ಲಿ ಭಾರತವನ್ನು ಪ್ರಮಾಣೀಕೃತ ಗೋಧಿ ಪೂರೈಕೆದಾರ ಎಂದು ಅನುಮೋದಿಸಿತು. ಮೇ 2022 ರಲ್ಲಿ ಭಾರತ ಸರ್ಕಾರವು ಗೋಧಿ ರಫ್ತು ನಿಷೇಧಿಸುವ ಮೊದಲು 63,500 ಟನ್ ಗೋಧಿಗೆ ಈಜಿಪ್ಟ್ ಕಡೆಯಿಂದ ಮೊದಲ ಆದೇಶವನ್ನು ಪಡೆಯಿತು.
ಭಾರತ ಅಕ್ಕಿ ಮತ್ತು ಗೋಧಿ ಸೇರಿದಂತೆ ಅನೇಕ ಆಹಾರ ಧಾನ್ಯಗಳ ಅತಿದೊಡ್ಡ ಉತ್ಪಾದಕ ದೇಶಗಳಲ್ಲಿ ಒಂದಾಗಿದೆ. ಆದರೆ ಇದಕ್ಕೆ ಆರ್ಥಿಕ ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರಗಳ ಅಗತ್ಯವಿದೆ. 2022 ರಲ್ಲಿ $2.7 ಶತಕೋಟಿ ಮೌಲ್ಯದ ಮಾರಾಟದೊಂದಿಗೆ ಈಜಿಪ್ಟ್‌ನ ರಫ್ತುಗಳಲ್ಲಿ ರಸಗೊಬ್ಬರಗಳು ಎರಡನೇ ಸ್ಥಾನದಲ್ಲಿದೆ. ಈಜಿಪ್ಟ್ ವಿಶ್ವದ ಐದನೇ ಅತಿದೊಡ್ಡ ರಸಗೊಬ್ಬರ ರಫ್ತುದಾರನಾಗಿದ್ದು, ವಾರ್ಷಿಕವಾಗಿ 7.8 ಮಿಲಿಯನ್ ಟನ್ ಸಾರಜನಕ ಗೊಬ್ಬರಗಳು ಮತ್ತು ನಾಲ್ಕು ಮಿಲಿಯನ್ ಟನ್ ಫಾಸ್ಫೇಟ್ ರಸಗೊಬ್ಬರಗಳನ್ನು ಉತ್ಪಾದಿಸುತ್ತದೆ.
ರಷ್ಯಾ ಮತ್ತು ಉಕ್ರೇನ್‌ನಿಂದ ಗೋಧಿ ಆಮದುಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದ್ದ ಈಜಿಪ್ಟ್ ಅದ್ಯ ಅಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಪೂರೈಕೆ ಸಾಧ್ಯವಾಗದೆ ತೀವ್ರವಾಗಿ ತತ್ತರಿಸಿದೆ. ಆದ್ದರಿಂದ ಎರಡು ದೇಶಗಳ ನಡುವೆ ಗೋಧಿ-ಗೊಬ್ಬರಗಳ ಒಪ್ಪಂದ ನಡೆದಿದೆ ಎಂದು ಹೇಳಲಾಗುತ್ತಿದೆ.
ಈಜಿಪ್ಟ್ ಗೆ ಗೋಧಿ ಅಗತ್ಯತೆ
2021 ರಲ್ಲಿ ಈಜಿಪ್ಟ್ ತನ್ನ ಗೋಧಿ ಅಗತ್ಯತೆಯ 80% ಕ್ಕಿಂತ ಹೆಚ್ಚು (ಸುಮಾರು $ 2 ಬಿಲಿಯನ್ ಮೌಲ್ಯ) ರಷ್ಯಾ ಮತ್ತು ಉಕ್ರೇನ್‌ನಿಂದ ಆಮದು ಮಾಡಿಕೊಂಡಿತು. ಈ ಆಮದುಗಳಿಗೆ ಈಗ ಅಡ್ಡಿಯಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಿಂದಾಗಿ ಈಜಿಪ್ಟ್‌ಗೆ ಗೋಧಿ ಆಮದು ಸಾಧ್ಯವಾಗುತ್ತಿಲ್ಲ.
ಭಾರತ ಇತರ ದೇಶಗಳಿಗೆ ಅವರ ಅಗತ್ಯದ ಸಮಯದಲ್ಲಿ ಸಹಾಯ ಮಾಡುತ್ತದೆ. ಇದು ಸಾಂಕ್ರಾಮಿಕ ಸಮಯದಲ್ಲಿ ಹಲವಾರು ದೇಶಗಳಿಗೆ ಆಹಾರ ಮತ್ತು ಕೋವಿಡ್ -19 ಲಸಿಕೆಗಳನ್ನು ಪೂರೈಸಿದೆ. ತನ್ನ ಸ್ವಂತ ಜನರ ಆಹಾರ ಭದ್ರತೆಯನ್ನು ಖಾತ್ರಿಪಡಿಸಿದ ನಂತರ, ಅದು ಪರಸ್ಪರ ಲಾಭಕ್ಕಾಗಿ ಆಹಾರ ಧಾನ್ಯಗಳು ಮತ್ತು ಇತರ ವಸ್ತುಗಳನ್ನು ಪೂರೈಸಲು ಮುಕ್ತವಾಗಿದೆ.
ರಸಗೊಬ್ಬರ ಮತ್ತು ಇಂಧನದ ಅಗತ್ಯಗಳನ್ನು ಪೂರೈಸಲು ಆಫ್ರಿಕನ್ ದೇಶಗಳೊಂದಿಗೆ ತನ್ನ ವಾಣಿಜ್ಯ ಸಂಬಂಧವನ್ನು ಹೆಚ್ಚಿಸಲು ಭಾರತವು ಉತ್ಸುಕವಾಗಿದೆ. ಜೂನ್‌ನಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಈಜಿಪ್ಟ್ ಸೇರಿದಂತೆ ಆಫ್ರಿಕನ್ ರಾಜ್ಯಗಳ 15 ರಾಯಭಾರಿಗಳಿಗೆ ಆತಿಥ್ಯ ವಹಿಸಿದ್ದರು. ಈ ಈವೆಂಟ್ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸುವುದು, ಭಾರತ ಮತ್ತು ಆಫ್ರಿಕಾ ನಡುವಿನ ಸಹಯೋಗದ ಕ್ಷೇತ್ರಗಳನ್ನು ಅನ್ವೇಷಿಸುವುದಾಗಿತ್ತು.
ಈಜಿಪ್ಟ್ ಮತ್ತು ಭಾರತದ ನಡುವಿನ ವ್ಯಾಪಾರ
ಇತ್ತೀಚಿನ ವರ್ಷಗಳಲ್ಲಿ ಈಜಿಪ್ಟ್ ಮತ್ತು ಭಾರತದ ನಡುವಿನ ವ್ಯಾಪಾರ ಮತ್ತು ಹೂಡಿಕೆಗಳು ಹೆಚ್ಚಿವೆ. ಈಜಿಪ್ಟ್ ಮಾರುಕಟ್ಟೆಯು ನವೀಕರಿಸಬಹುದಾದ ಇಂಧನ, ಔಷಧೀಯ, ಆಹಾರ ಉತ್ಪಾದನೆ, ಲಾಜಿಸ್ಟಿಕ್ಸ್, ಎಂಜಿನಿಯರಿಂಗ್ ಮತ್ತು ಸಾರಿಗೆಯಂತಹ ಕ್ಷೇತ್ರಗಳಲ್ಲಿ ನವೀನ ಭಾರತೀಯ ತಂತ್ರಜ್ಞಾನ ಪರಿಹಾರಗಳನ್ನು ಸ್ವಾಗತಿಸಿದೆ.
ಈಜಿಪ್ಟ್‌ನಲ್ಲಿ ಭಾರತೀಯ ಹೂಡಿಕೆಗಳು $3 ಬಿಲಿಯನ್‌ಗೆ ತಲುಪಿವೆ. ಸದ್ಯ ಗೋಧಿ-ಗೊಬ್ಬರಗಳ ಒಪ್ಪಂದವೂ ಮುನ್ನೆಲೆಗೆ ಬಂದಿದೆ. ಹಾಗೊಂದು ವೇಳೆ ಈಜಿಪ್ಟ್ ಹಾಗೂ ಭಾರತ ಗೋಧಿ-ಗೊಬ್ಬರಗಳ ಒಪ್ಪಂದ ಮಾಡಿಕೊಂಡಿದ್ದು ನಿಜವೇ ಆದಲ್ಲಿ ಭಾರತದಲ್ಲಿ ಆಹಾರ ಧಾನ್ಯಗಳು ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ ಪೂರೈಕೆಯಾಗಲಿದೆ. ಇದರಿಂದ ಭಾರತದ ಕೃಷಿ ಇನ್ನಷ್ಟು ಸುಧಾರಣೆ ಕಾಣಲಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications