ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಹಿನೂರ್ ವಜ್ರದ ಬಗ್ಗೆ ರಾಜಮನೆತನದ ನಿರ್ಧಾರ ಏನಾಗಬಹುದು?

|
Google Oneindia Kannada News

ಲಂಡನ್‌, ಅಕ್ಟೋಬರ್‌ 14: ಕಿಂಗ್ ಚಾರ್ಲ್ಸ್ III ರ ಪಟ್ಟಾಭಿಷೇಕವು ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿದೆ. ರಾಜನೊಂದಿಗೆ ರಾಣಿ ಕಾನ್ಸಾರ್ಟ್ ಕ್ಯಾಮಿಲ್ಲಾ ಕೂಡ ಕಿರೀಟವನ್ನು ಅಲಂಕರಿಸುತ್ತಾರೆ. ಆಗ ಕೊಹಿನೂರ್ ವಜ್ರವಿರುವ ಕಿರೀಟಧಾರಣೆ ಮಾಡಲಾಗುತ್ತದೆ. ಆದರೆ ವಜ್ರದ ಮಾಲೀಕತ್ವದ ಸುತ್ತಲಿನ ಕೋಲಾಹಲದ ನಂತರ ಇದನ್ನು ರದ್ದುಗೊಳಿಸಬಹುದು ಎನ್ನಲಾಗಿದೆ.

ಕೊಹಿನೂರ್ 105 ಕ್ಯಾರೆಟ್ ವಜ್ರವು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿವಾದಾತ್ಮಕ ವಜ್ರಗಳಲ್ಲಿ ಒಂದಾಗಿದೆ. ಇರಾನ್ ದೊರೆ ನಾದಿರ್ ಶಾ ಆಕ್ರಮಣದ ನಂತರ ವಜ್ರವನ್ನು ಭಾರತದಿಂದ ತೆಗೆದುಕೊಂಡು ಹೋಗಲಾಯಿತು. ಇದನ್ನು ಒಮ್ಮೆ 17ನೇ ಶತಮಾನದಲ್ಲಿ ಮೊಘಲ್ ರಾಜ ಷಹಜಹಾನ್ ಸಿಂಹಾಸನದ ಮೇಲೆ ಇರಿಸಲಾಯಿತು ಎಂಬ ಐತಿಹ್ಯ ಈ ವಜ್ರಕ್ಕೆ ಇದೆ.

ವಾರಂಗಲ್‌ನ ಭದ್ರಕಾಳಿ ದೇಗುಲವೇ ಕೊಹಿನೂರ್ ವಜ್ರದ ಮೂಲ ನೆಲೆ?ವಾರಂಗಲ್‌ನ ಭದ್ರಕಾಳಿ ದೇಗುಲವೇ ಕೊಹಿನೂರ್ ವಜ್ರದ ಮೂಲ ನೆಲೆ?

ಪಂಜಾಬ್‌ ಬ್ರಿಟಿಷ್ ಸ್ವಾಧೀನವಾದ ನಂತರ 1849ರಲ್ಲಿ ರಾಣಿ ವಿಕ್ಟೋರಿಯಾಗೆ ಬಿಟ್ಟುಕೊಡುವ ಮೊದಲು ಇದು ಅನೇಕ ಆಡಳಿತಗಾರರ ಕೈಯಿಂದ ಹಾದುಹೋಯಿತು. ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಲ್ಲಿ ಕೊಹಿನೂರ್ ಅನ್ನು ಕದಿಯಲಾಗಿದೆ ಎಂದು ಪರಿಗಣಿಸಲಾಗಿರುವುದರಿಂದ ವಿವಾದದ ಬಿಂದುವಾಗಿ ಉಳಿದಿದೆ.

ಕೊಹಿನೂರ್ ವಜ್ರವನ್ನು 1930ರ ದಶಕದಲ್ಲಿ ರಾಣಿ ತಾಯಿಯ ಕಿರೀಟದಲ್ಲಿ ಅಲಂಕರಿಸಲಾಯಿತು. ಅದನ್ನು ಕ್ಯಾಮಿಲ್ಲಾಗೆ ರವಾನಿಸಲು ನಿರೀಕ್ಷಿಸಲಾಗಿತ್ತು. ರಾಣಿ ಸಿಂಹಾಸನ ಏರಿದಾಗ ರಾಣಿ ತಾಯಿ ಕಿರೀಟವನ್ನು ಧರಿಸುವುದು ಮೂಲ ಯೋಜನೆಯಾಗಿತ್ತು. ಆದರೆ ಸಮಯ ಬದಲಾಯಿತು. ವಿಶೇಷವಾಗಿ ಭಾರತಕ್ಕೆ ಸಂಬಂಧಿಸಿದಂತೆ ಅವರ ಸಲಹೆಗಾರರಂತೆ ಹಿಸ್ ಮೆಜೆಸ್ಟಿ ದಿ ಕಿಂಗ್ ಈ ಸಮಸ್ಯೆಗಳಿಗೆ ತೀವ್ರವಾಗಿ ಸಂವೇದನಾಶೀಲರಾಗಿದ್ದರು. ಅವರ ಸುತ್ತಲೂ ಗಂಭೀರವಾದ ರಾಜಕೀಯ ಸೂಕ್ಷ್ಮತೆಗಳು ಮತ್ತು ಗಮನಾರ್ಹ ಆತಂಕಗಳಿದ್ದವು ವರದಿಯೊಂದು ಹೇಳಿದೆ.

ಬೇರೆ ಕಿರೀಟವನ್ನು ಬಳಸಬಹುದು

ಬೇರೆ ಕಿರೀಟವನ್ನು ಬಳಸಬಹುದು

ರಾಣಿಯ ಪಟ್ಟಾಭಿಷೇಕವು ಕೊಹಿನೂರ್ ವಜ್ರವನ್ನು ಕಿರೀಟದಿಂದ ಬೇರ್ಪಡಿಸುವುದನ್ನು ನೋಡಬಹುದು ಅಥವಾ ಹೊಸ ರಾಜ ಮತ್ತು ರಾಣಿ ರಾಯಲ್ ಸಂಗ್ರಹದಿಂದ ಬೇರೆ ಕಿರೀಟವನ್ನು ಬಳಸಬಹುದು ಎಂದು ವರದಿಗಳು ತಿಳಿಸುತ್ತವೆ. ಬ್ರಿಟನ್ ರಾಣಿ ಎರಡನೇ ಎಲಿಜಬೆತ್‌ ನಿಧನರಾದಾಗ ಭಾರತವು ಲಂಡನ್‌ನಿಂದ ಕೊಹಿನೂರ್‌ ವಜ್ರವನ್ನು ತರಲು ಆಗ್ರಹಗಳು ಕೇಳಿ ಬಂದವು.

ಕೊಹಿನೂರ್‌ ವಜ್ರ ಪುರಿ ಜಗನ್ನಾಥನಿಗೆ ಸೇರಿದ್ದು: ಜಗನ್ನಾಥ ಸೇನೆ ವಾದಕೊಹಿನೂರ್‌ ವಜ್ರ ಪುರಿ ಜಗನ್ನಾಥನಿಗೆ ಸೇರಿದ್ದು: ಜಗನ್ನಾಥ ಸೇನೆ ವಾದ

ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ

ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ

105.6 ಕ್ಯಾರೆಟ್‌ನ ಅದ್ಭುತವಾದ ನೀಲಿ ಬೆಳಕಿನ ವಜ್ರವು ಈಗ ಕಿರೀಟದಲ್ಲಿರುವ ವಜ್ರಗಳಲ್ಲಿ ಒಂದಾಗಿದೆ. ವಜ್ರವನ್ನು 14 ನೇ ಶತಮಾನದಲ್ಲಿ ಭಾರತದ ಗೋಲ್ಕೊಂಡಾ ಗಣಿಗಳಲ್ಲಿ ಪತ್ತೆ ಹಚ್ಚಲಾಗಿತ್ತು. ಶತಮಾನಗಳ ಅವಧಿಯಲ್ಲಿ ವಿವಿಧ ಕೈಗಳ ಮೂಲಕ ಅದು ಸರಿದು ಹೋಯಿತು. ಭಾರತ ಸರ್ಕಾರವು 1947ರಲ್ಲಿ ಒಮ್ಮೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಕೊಹಿನೂರ್‌ನ ವಾಪಸಾತಿಗೆ ಒತ್ತಾಯಿಸಿದೆ. ಆದಾಗ್ಯೂ, ಬ್ರಿಟಿಷ್ ಸರ್ಕಾರವು ವಜ್ರವನ್ನು ಕೊಡಲು ನಿರಾಕರಿಸಿತ್ತು.

ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಲು ಒತ್ತಾಯ

ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಲು ಒತ್ತಾಯ

ಇದಲ್ಲದೆ ಪುರಿಯ ಜಗನ್ನಾಥ ಸೇನೆ ಹಾಗೂ ವಾರಂಗಲ್‌ ಭದ್ರಕಾಳಿ ದೇಗುಲದಿಂದಲೂ ಕೊಹಿನೂರ್ ವಜ್ರದ ಉತ್ತರದಾಯಿತ್ವಕ್ಕಾಗಿ ಆಗಹ್ರಗಳು ಕೇಳಿಬಂದಿದ್ದವು. ಆದರೆ ಅದನ್ನು ತರುವ ಬಗ್ಗೆ ಭಾರತ ಸರ್ಕಾರದಿಂದ ಎಲ್ಲಿಯೂ ಮಾತುಗಳು ಕೇಳಿ ಬಂದಿರಲಿಲ್ಲ. ಪುರಿಯ ಜಗನ್ನಾಥ ಸೇನೆಯು ಕುಹಿನೂರ್‌ ವಜ್ರವನ್ನು ದೇವಸ್ಥಾನಕ್ಕೆ ತರಬೇಕು ಎಂದು ಇದಕ್ಕೆ ರಾಷ್ಟ್ರಪತಿ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹ ಮಾಡಿತ್ತು.

ಮೊಘಲ್ ನವಿಲು ಸಿಂಹಾಸನದಲ್ಲಿ ಅಲಂಕೃತಗೊಂಡಿತ್ತು

ಮೊಘಲ್ ನವಿಲು ಸಿಂಹಾಸನದಲ್ಲಿ ಅಲಂಕೃತಗೊಂಡಿತ್ತು

ಸುಮಾರು ಕ್ರಿ.ಶ. 1310ರಲ್ಲಿ ದೆಹಲಿಯ ಸುಲ್ತಾನನಾಗಿದ್ದ ಅಲ್ಲಾವುದ್ದೀನ್ ಖಲ್ಜಿ ತನ್ನ ಸೇನಾಪತಿ ಮಲಿಕ್ ಕಾಫರ್‌ನ ಸಹಾಯದಿಂದ ಈ ಕೊಹಿನೂರ್‌ ವಜ್ರವನ್ನು ಸ್ವಾಧೀನಪಡಿಸಿಕೊಂಡನು ಎನ್ನಲಾಗಿದೆ. ಮೂಲಗಳ ಪ್ರಕಾರ ಇದು ಮೊಘಲ್ ನವಿಲು ಸಿಂಹಾಸನದಲ್ಲಿ ಅಲಂಕೃತಗೊಂಡಿದ್ದ ಬೆಲೆಬಾಳುವ ಕಲ್ಲುಗಳಲ್ಲಿ ಒಂದಾಗಿದೆ. 1849ರಲ್ಲಿ ಬ್ರಿಟಿಷರು ಪಂಜಾಬ್ ಅನ್ನು ವಶಪಡಿಸಿಕೊಂಡರು. ಕೊಹಿನೂರ್ ವಜ್ರವನ್ನು ವಶಪಡಿಸಿಕೊಂಡು ವಿಕ್ಟೋರಿಯಾ ರಾಣಿಗೆ ಉಡುಗೊರೆಯಾಗಿ ನೀಡುವವರೆಗೂ ಇದು ಹಲವಾರು ಕೈಗಳು ಮತ್ತು ರಾಜವಂಶಗಳ ಮೂಲಕ ಕೈಯಿಂದ ಹಾದುಹೋಯಿತು ಎಂಬ ಐತಿಹ್ಯವೂ ಇದಕ್ಕೆ ಇದೆ.

English summary
King Charles III's coronation will take place in May next year. Queen Consort Camilla will also be crowned with the King. Then the crown with Kohinoor diamond is done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X