ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಪ್ರವಾಸದ ಕುರಿತು ಮೋದಿ ಟ್ವೀಟ್ ನಲ್ಲೇನಿದೆ?

|
Google Oneindia Kannada News

ಜುಲೈ 5: ಐತಿಹಾಸಿಕ ಎಂದೇ ಬಣ್ಣಿಸಲ್ಪಡುತ್ತಿರುವ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ ಇಸ್ರೇಲ್ ಭೇಟಿ ಕುರಿತು ವಿಶ್ವದಾದ್ಯಂತಗ ಚರ್ಚೆಯಾಗುತ್ತಿದೆ. ಇಸ್ರೇಲ್ ಗೆ ಭೇಟಿ ನೀಡುತ್ತಿರುವ ಮೊಟ್ಟ ಮೊದಲ ಭಾರತೀಯ ಪ್ರಧಾನಿ ಎಂಬ ಕಾರಣಕ್ಕೂ ಈ ಭೇಟಿ ಅತ್ಯಂತ ಕುತೂಹಲ ಕೆರಳಿಸಿದೆ.

ಎರಡೂ ದೇಶಗಳೂ ಸಮಾನ ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಇಸ್ರೇಲಿಗೆ ಭಾರತದ ಮತ್ತು ಭಾರತಕ್ಕೆ ಇಸ್ರೇಲಿನ ಸಹಕಾರ ಬೇಕೇ ಬೇಕು. ಹೀಗಿರುವಾಗ ನಿನ್ನೆ(ಜುಲೈ 4)ಯಿಂದ ಆರಂಭವಾದ ಮೋದಿಯವರ ಮೂರು ದಿನಗಳ ಇಸ್ರೇಲ್ ಭೇಟಿ ಅತ್ಯಂತ ಮಹತ್ವದ್ದು ಎನ್ನಿಸಿದೆ. ತಮ್ಮ ಇಸ್ರೇಲ್ ಭೇಟಿಯ ಕುರಿತಂತೆ ಈಗಾಗಲೇ ಪ್ರಧಾನಿ ಮೋದಿ ಹಲವು ಟ್ವೀಟ್ ಗಳನ್ನು ಮಾಡಿದ್ದಾರೆ. ಭೇಟಿಗೂ ಮೊದಲೇ ಮೋದಿಯವರು ಇಸ್ರೇಲ್ ಭೇಟಿಯ ಉದ್ದೇಶವನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೋದಿಯವರ ಇಸ್ರೇಲ್ ಭೇಟಿಯನ್ನು ಹಾರ್ದಿಕವಾಗಿ ಸ್ವಾಗತಿಸಿದ್ದರು.

ಹಿಂದಿಯಲ್ಲಿ ಮಾತಾಡಿ ಮೋದಿಯನ್ನು ಸ್ವಾಗತಿಸಿದ ಇಸ್ರೇಲ್ ಪ್ರಧಾನಿಹಿಂದಿಯಲ್ಲಿ ಮಾತಾಡಿ ಮೋದಿಯನ್ನು ಸ್ವಾಗತಿಸಿದ ಇಸ್ರೇಲ್ ಪ್ರಧಾನಿ

ತಮ್ಮ ಇಸ್ರೇಲ್ ಪ್ರವಾಸದ ಕುರಿತು ಮೋದಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದು, ಅವುಗಳಲ್ಲಿ ಕೆಲವು ಇಲ್ಲಿವೆ.

ಕೃಷಿ ಕ್ಷೇತ್ರದ ಕುರಿತು ಮೆಚ್ಚುಗೆ

ಕೃಷಿ ಕ್ಷೇತ್ರದತ್ತ ಇಸ್ರೇಲ್ ದಾಪುಗಾಲಿಡುತ್ತಿರುವುದು ಆದರ್ಶನೀಯ. ಅದು ಕೃಷಿಕ್ಷೇತ್ರದಲ್ಲಿ ಅಳವಡಿಸುತ್ತಿರುವ ಹೊಸ ತಂತ್ರಜ್ಞಾನ, ಸಂಶೋಧನೆ, ಅಧ್ಯಯನ, ಎಲ್ಲವೂ ರೈತರಿಗೆ ಸಾಕಷ್ಟು ಉಪಕಾರಿಯಾಗಲಿವೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಪುಷ್ಪಕೃಷಿ ಕುರಿತು ಮಾಹಿತಿ

ಡಾಂಜಿಗರ್ ಪುಷ್ಪ ತೋಟಕ್ಕೆ ಭೇಟಿ ನೀಡಿ, ಅಲ್ಲಿ ಹೊಸ ಮಾದರಿಯ ಪುಷ್ಪಕೃಷಿಯ ಕುರಿತು ಮಾಹಿತಿ ಪಡೆದಿದ್ದಾಗಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.

ಮೋದಿ ಆಗಮನದ ಹಿಂದಿದ್ದ 70 ವರ್ಷಗಳ ಪ್ರತೀಕ್ಷೆ: ಇಸ್ರೇಲ್ ಪ್ರಧಾನಿಮೋದಿ ಆಗಮನದ ಹಿಂದಿದ್ದ 70 ವರ್ಷಗಳ ಪ್ರತೀಕ್ಷೆ: ಇಸ್ರೇಲ್ ಪ್ರಧಾನಿ

ಹಿಬ್ರೂ ಲಿಪಿಯಲ್ಲಿ ಟ್ವೀಟ್ ಮಾಡಿದ ಮೋದಿ

ಇಸ್ರೇಲ್ ಜೊತೆ ಶಾಂತಿ! ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಲು ನಾನು ಇಸ್ರೇಲಿನೊಂದಿಗೆ ಹೊಸ ವ್ಯವಹಾರ ಆರಂಭಿಸಲು ನಿರ್ಧರಿಸಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ನ ವಿಶೇಷತೆ ಅಂದ್ರೆ, ಇದು ಇಸ್ರೇಲ್ ನ ಹಿಬ್ರೂ ಲಿಪಿಯಲ್ಲಿದೆ!

ದಿಗ್ಗಜರ ಆಲಿಂಗನ

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಬ್ಬರನ್ನೊಬ್ಬರು ಆಲಂಗಿಸಿದ ಚಿತ್ರವನ್ನೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿರುವ ಮೋದಿ, ಇಸ್ರೇಲ್ ಕುರಿತ ತಮ್ಮ ಅಭಿಪ್ರಾಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳುವುದಾಗಿ ಬರೆದಿದ್ದಾರೆ.

ಹೂವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟು ಗೌರವಿಸಿದ ಇಸ್ರೇಲ್ಹೂವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟು ಗೌರವಿಸಿದ ಇಸ್ರೇಲ್

English summary
Israel’s strides in agriculture are well known. Latest technology, research & innovation in agriculture can benefit farmers immensely, Prime ninister Narendra Modi tweeted during his historical visit to Israel. Here are some twitter statements by Narendra Modi on his Israel visit
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X