ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕಾಶ್ಮೀರಕ್ಕಾಗಿ ರಕ್ತದ ಕೊನೆ ಹನಿ ಇರುವ ತನಕ ಹೋರಾಟ'

By ಅನಿಲ್ ಆಚಾರ್
|
Google Oneindia Kannada News

ಇಸ್ಲಾಮಾಬಾದ್, ಆಗಸ್ಟ್ 7: "ಕಾಶ್ಮೀರಕ್ಕಾಗಿ ರಕ್ತದ ಕೊನೆ ಹನಿಯ ತನಕ ಹೋರಾಡುತ್ತೇವೆ" ಎಂದು ಕಾಶ್ಮೀರ ವ್ಯವಹಾರಗಳ ಪಾಕಿಸ್ತಾನ ಸಚಿವ ಅಲಿ ಅಮಿನ್ ಗಂದಪುರ್ ಬುಧವಾರ ಹೇಳಿದ್ದಾರೆ. ಎಆರ್ ವೈ ನ್ಯೂಸ್ ಜತೆಗೆ ಮಾತನಾಡಿದ ಅವರು, ಪ್ರಧಾನಿ ಇಮ್ರಾನ್ ಖಾನ್ ಸ್ಪಷ್ಟವಾಗಿ ಹೇಳಿದ್ದಾರೆ: ಕಾಶ್ಮೀರಕ್ಕಾಗಿ ಪಾಕಿಸ್ತಾನವು ಎಲ್ಲ ಆಯ್ಕೆಗಳನ್ನು ಬಳಸಿಕೊಳ್ಳುತ್ತದೆ, ಕೊನೆ ಹನಿ ರಕ್ತ ಇರುವ ತನಕ ಹೋರಾಡುತ್ತದೆ ಎಂದು ಹೇಳಿದ್ದಾರೆ.

ದ್ವೇಷ ತೀರಿಸಲು ಮುಂದಾದ ಪಾಕಿಸ್ತಾನದಿಂದ ಭಾರತ ರಾಯಭಾರಿ ಹೊರಕ್ಕೆದ್ವೇಷ ತೀರಿಸಲು ಮುಂದಾದ ಪಾಕಿಸ್ತಾನದಿಂದ ಭಾರತ ರಾಯಭಾರಿ ಹೊರಕ್ಕೆ

ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ತೆಗೆದುಹಾಕಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ನಂತರ ಈ ಹೇಳಿಕೆಯನ್ನು ಅವರು ನೀಡಿದ್ದಾರೆ. ಮಂಗಳವಾರದಂದು ಇದೇ ವಿಚಾರವಾಗಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮಾತನಾಡಿದ್ದರು.

We Will Fight For Kashmir Till Last Drop Of Blood: Pakistan

ಜಮ್ಮು- ಕಾಶ್ಮೀರದ ಪರಿಚ್ಛೇದ 370 ಅನ್ನು ರದ್ದುಗೊಳಿಸುವ ನಿರ್ಧಾರವು ಆಡಳಿತಾರೂಢ ಬಿಜೆಪಿಯ 'ಜನಾಂಗೀಯ ಸಿದ್ಧಾಂತ'ವನ್ನು ತೋರಿಸುತ್ತದೆ. ಇತರ ಎಲ್ಲ ಧರ್ಮಗಳಿಗಿಂತ ಹಿಂದೂ ಧರ್ಮವನ್ನು ಎತ್ತರದಲ್ಲಿ ನಿಲ್ಲಿಸುತ್ತದೆ ಹಾಗೂ ಇದರ ಜತೆಗೆ ಉಳಿದೆಲ್ಲ ಧಾರ್ಮಿಕ ಗುಂಪುಗಳನ್ನು ದಮನ ಮಾಡುವಂಥ ಪ್ರಯತ್ನ ಇದು ಎಂದು ಹೇಳಿದ್ದರು.

English summary
Pakistan minister Ali Amin said, we will fight for Kashmir till last drop of blood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X