ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಪಾಠ ಕಲಿತಿದ್ದೇವೆ: ಪ್ರಧಾನಿ ಮೋದಿ ಜತೆ ಮಾತುಕತೆಗೆ ಮುಂದಾದ ಪಾಕ್ ಪ್ರಧಾನಿ- ಇದು ಆರ್ಥಿಕ ಬಿಕ್ಕಟ್ಟಿನ ಪರಿಣಾಮವೇ?

|
Google Oneindia Kannada News

ಇಸ್ಲಾಮಾಬಾದ್‌, ಜನವರಿ 17: ಪಾಕಿಸ್ತಾನವು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತದೆ ಎಂದು ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.

ಕಾಶ್ಮೀರದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಗಂಭೀರ ಮತ್ತು ಪ್ರಾಮಾಣಿಕ ಮಾತುಕತೆಗೆ ಅವರು ಮುಂದಾಗಿದ್ದಾರೆ.

ಜಮ್ಮು ಕಾಶ್ಮೀರ: ಗ್ರಾಮಸ್ಥರಲ್ಲಿ ಭದ್ರತೆಯ ಭಾವ ಮೂಡಿಸಲು ಗ್ರಾಮ ರಕ್ಷಣಾ ಸಮಿತಿಗಳಿಗೆ ಸೇನೆಯಿಂದ ತರಬೇತಿಜಮ್ಮು ಕಾಶ್ಮೀರ: ಗ್ರಾಮಸ್ಥರಲ್ಲಿ ಭದ್ರತೆಯ ಭಾವ ಮೂಡಿಸಲು ಗ್ರಾಮ ರಕ್ಷಣಾ ಸಮಿತಿಗಳಿಗೆ ಸೇನೆಯಿಂದ ತರಬೇತಿ

ದುಬೈ ಮೂಲದ ಅಲ್ ಅರೇಬಿಯಾ ಟಿವಿಗೆ ನೀಡಿದ ಸಂದರ್ಶನದಲ್ಲಿ, 'ಭಾರತದೊಂದಿಗೆ ಮೂರು ಯುದ್ಧಗಳ ನಂತರ ಪಾಕಿಸ್ತಾನ ತನ್ನ ಪಾಠವನ್ನು ಕಲಿತಿದೆ. ಈಗ ಅದು ತನ್ನ ನೆರೆಹೊರೆಯೊಂದಿಗೆ ಶಾಂತಿಯನ್ನು ಬಯಸುತ್ತದೆ' ಎಂದು ಒತ್ತಿ ಹೇಳಿದ್ದಾರೆ.

‘We have learnt our lesson’: Pakistan PM Shehbaz Sharif calls for talks with PM Modi

'ಭಾರತೀಯ ನಾಯಕತ್ವ ಮತ್ತು ಪ್ರಧಾನಿ ಮೋದಿಗೆ ನನ್ನ ಸಂದೇಶವೆಂದರೆ ಕಾಶ್ಮೀರದಂತಹ ನಮ್ಮ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ನಾವು ಮೇಜಿನೊಂದಿಗೆ ಕುಳಿತು ಗಂಭೀರ ಮತ್ತು ಪ್ರಾಮಾಣಿಕ ಮಾತುಕತೆ ನಡೆಸೋಣ. ಶಾಂತಿಯುತವಾಗಿ ಬದುಕುವುದು ಮತ್ತು ಪ್ರಗತಿ ಸಾಧಿಸುವುದು ನಮ್ಮ ಆದ್ಯತೆ ಆಗಬೇಕು. ಪರಸ್ಪರ ಜಗಳವಾಡುವುದರಿಂದ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದು ಬೇಡ' ಎಂದು ಶೆಹಬಾಜ್ ಷರೀಫ್ ತಿಳಿಸಿದ್ದಾರೆ.

'ನಾವು ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿದ್ದೇವೆ. ಇದು ಜನರಿಗೆ ಹೆಚ್ಚು ದುಃಖ, ಬಡತನ ಮತ್ತು ನಿರುದ್ಯೋಗವನ್ನು ತಂದಿದೆ. ನಾವು ನಮ್ಮ ಪಾಠವನ್ನು ಕಲಿತಿದ್ದೇವೆ. ನಾವು ಭಾರತದೊಂದಿಗೆ ಶಾಂತಿಯಿಂದ ಬದುಕಲು ಬಯಸುತ್ತೇವೆ. ನಮ್ಮ ನಿಜವಾದ ಸಮಸ್ಯೆಗಳನ್ನು ಪರಿಹರಿಸಲು ನಾವು ಸಮರ್ಥರಾಗಿದ್ದೇವೆ' ಎಂದು ಅವರು ಹೇಳಿದ್ದಾರೆ.

‘We have learnt our lesson’: Pakistan PM Shehbaz Sharif calls for talks with PM Modi

'ಭಾರತ ನಮ್ಮ ನೆರೆಯ ದೇಶ. ನಾವು ನೆರೆಹೊರೆಯವರು. ನಾವು ಆಯ್ಕೆಯಿಂದ ನೆರೆಹೊರೆಯವರಲ್ಲದಿದ್ದರೂ, ನಾವು ಶಾಶ್ವತವಾಗಿ ಇರುತ್ತೇವೆ. ಶಾಂತಿಯುತವಾಗಿ ಬದುಕುವುದು ಮತ್ತು ಪ್ರಗತಿ ಸಾಧಿಸುವುದು ನಮ್ಮ ಆದ್ಯತೆ ಆಗಬೇಕಿದೆ' ಎಂದೂ ಪಾಕ್‌ ಪ್ರಧಾನಿ ತಿಳಿಸಿದ್ದಾರೆ.

ಷರೀಫ್ ಅವರು ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದ್ದಾರೆ. 'ಪಾಕಿಸ್ತಾನವು ಶಾಂತಿಯನ್ನು ಬಯಸುತ್ತದೆ ಆದರೆ ಕಾಶ್ಮೀರದಲ್ಲಿ ಏನಾಗುತ್ತಿದೆ. ಅದನ್ನು ಅವರು ನಿಲ್ಲಿಸಬೇಕು' ಎಂದು ಹೇಳಿದ್ದಾರೆ.

‘We have learnt our lesson’: Pakistan PM Shehbaz Sharif calls for talks with PM Modi

ಎರಡೂ ದೇಶಗಳು ಎಂಜಿನಿಯರ್‌ಗಳು, ವೈದ್ಯರು ಮತ್ತು ನುರಿತ ಕಾರ್ಮಿಕರನ್ನು ಹೊಂದಿವೆ ಎಂದು ಅವರು ತಿಳಿಸಿದ್ದಾರೆ. 'ನಾವು ಈ ಆಸ್ತಿಗಳನ್ನು ಸಮೃದ್ಧಿಗಾಗಿ ಬಳಸಿಕೊಳ್ಳಲು ಬಯಸುತ್ತೇವೆ. ಎರಡೂ ರಾಷ್ಟ್ರಗಳು ಬೆಳೆಯಲು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ಬಯಸುತ್ತೇವೆ' ಎಂದು ಷರೀಫ್ ತಿಳಿಸಿದ್ದಾರೆ.

'ಪಾಕಿಸ್ತಾನವು ಬಾಂಬ್‌ಗಳು ಮತ್ತು ಮದ್ದುಗುಂಡುಗಳಿಗಾಗಿ ಸಂಪನ್ಮೂಲಗಳನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ನಾವು ಪರಮಾಣು ಶಕ್ತಿಗಳನ್ನು ಹೊಂದಿದ್ದೇವೆ. ಶಸ್ತ್ರಸಜ್ಜಿತರಾಗಿದ್ದೇವೆ. ಒಂದು ವೇಳೆ, ಯುದ್ಧ ಪ್ರಾರಂಭವಾದರೆ ಏನಾದೀತು ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ' ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನವು ಈಗ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ಶಾಂತಿ ಮಾತಕತೆಯ ಬಗ್ಗೆ ಪಾಕ್‌ ಪ್ರಧಾನಿ ಮಾತನಾಡುತ್ತಿದ್ದಾರೆ ಎಂದು ವಿಶ್ಲೇಷಕರು ಹೇಳಿದ್ದಾರೆ.

English summary
Pakistan Prime Minister Shehbaz Sharif has said that Pakistan wants to live in peace with India and called for “serious and sincere talks” with Prime Minister Narendra Modi on “burning issues like Kashmir”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X