Get Updates
Get notified of breaking news, exclusive insights, and must-see stories!

ಭಾರತ ಪ್ರಮುಖ ಬದಲಾವಣೆಯ ಹಾದಿಯಲ್ಲಿದೆ: ನೀತಿ ಆಯೋಗದ ಉಪಾಧ್ಯಕ್ಷ

ಲಂಡನ್, ಜೂನ್ 20: ಭಾರತ ದೇಶ ಪ್ರಮುಖ ಬದಲಾವಣೆಯ ಹಾದಿಯಲ್ಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದರು.

ಲಂಡನ್ ನಲ್ಲಿ ನಡೆಯುತ್ತಿರುವ ಯುಕೆ-ಇಂಡಿಯಾ ಲೀಡರ್ ಶಿಪ್ ಕಾನ್ಕ್ಲೇವ್ ನಲ್ಲಿ ಮಾತನಾಡಿದ ಅವರು, "ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಾವು ಸರಕಾರ ನಡೆಸುವ ರೀತಿ ಮತ್ತು ಉದ್ಯಮದ ಮಾದರಿಯನ್ನು ಬದಲಾಯಿಸಿದ್ದೇವೆ. ನಮ್ಮ ಸರಕಾರ ಬದಲಾವಣೆಗಳನ್ನು ತಂದಿದ್ದು, ಉದ್ಯಮ ನಡೆಸಲು ಬೇಕಾದ ವಾತಾವರಣ ಬದಲಾಗುತ್ತಿದೆ. ನಾವು ಕಂಡುಕೊಂಡ ನಮ್ಮ ದೌರ್ಬಲ್ಯದ ಬಗ್ಗೆ ಹೆಚ್ಚು ಆಸಕ್ತರಾಗಿದ್ದೇವೆ. ಕೃಷಿ ಇದಕ್ಕೊಂದು ಉದಾಹರಣೆ," ಎಂದರು.

"ಕಳೆದ 4 ವರ್ಷಗಳಲ್ಲಿ ತೆಗೆದುಕೊಂಡಿರುವ ಸುಧಾರಣೆಗಳು ಭಾರತದವನ್ನು ಅಭಿವೃದ್ಧಿಯಲ್ಲಿ ಪಥದಲ್ಲಿಟ್ಟಿದೆ. ನಾವು ಭಾರೀ ಬದಲಾವಣೆಯ ಹಾದಿಯಲ್ಲಿದ್ದೇವೆ," ಎಂದು ಅವರು ಹೇಳಿದರು.

Rajiv Kumar

ಇದೇ ವೇಳೆ ರಾಜೀವ್ ಕುಮಾರ್, "ನಾನು ಪ್ರಧಾನಿಯವರ ಪರವಾಗಿ, ನಿಮ್ಮ (ಉದ್ಯಮಿಗಳು) ವಿಷಯಗಳ ಬಗ್ಗೆ ಗಮನ ಹರಿಸುತ್ತೇವೆ ಎಂಬ ಭರವಸೆ ನೀಡುತ್ತೇನೆ," ಎಂದು ತಿಳಿಸಿದರು.

"ವಿದೇಶಿ ಹೂಡಿಕೆದಾರರು ನಾವು ಎಲ್ಲಿ ತಪ್ಪಾಗಿ ನಡೆಯುತ್ತಿದ್ದೇವೆ ಎಂಬುದನ್ನು ನಮಗೆ ತಿಳಿಸಬೇಕು. ಬಂಡವಾಳ ಹೂಡಿಕೆಯನ್ನು ಸುಧಾರಿಸಲು ಸರ್ಕಾರ ಬದ್ಧವಾಗಿದೆ. ಹೂಡಿಕೆಗೆ ಅನುಕೂಲ ಮಾಡಿಕೊಡುವುದು ಸರಕಾರದ ಕೆಲಸ ಎಂಬುದನ್ನು ಪ್ರಧಾನಿ ತೋರಿಸಿಕೊಟ್ಟಿದ್ದಾರೆ," ಎಂದವರು ಇದೇ ಸಂದರ್ಭದಲ್ಲಿ ವಿವರಿಸಿದರು.

ಭಾರತೀಯ ಆರ್ಥಿಕತೆಯ ಪಥ ಮತ್ತು ಮೋದಿ ಸರಕಾರದ ನೀತಿಗಳು ವಿಚಾರದ ಕುರಿತು ಮಾತನಾಡಿದ ಅವರು,ಹೂಡಿಕೆ ಪರಿಸ್ಥಿತಿ ಕಷ್ಟವಿದೆ.ಆದರೆ ಪರಿಸ್ಥಿತಿ ಬದಲಾಯಿಸುತ್ತಿದೆ," ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ನೀತಿ ಆಯೋಗದ ಕೆಲಸಗಳ ಬಗ್ಗೆ ಮಾತನಾಡಿದ ಅವರು, "ಹಿಂದಿನ ಯೋಜನಾ ಆಯೋಗದ ಐದು ವರ್ಷಗಳ ಯೋಜನಾ ಕಾರ್ಯತಂತ್ರವನ್ನು ನಾವು ಬಿಟ್ಟಿದ್ದೇವೆ. ನೀತಿ ಆಯೋಗ ಕೇವಲ ಯೋಜನೆಗಳನ್ನು ಸಂಗ್ರಹಿಸುವುದು ಮಾತ್ರವಲ್ಲ, ಆ ವಿಚಾರಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಉದಾಹರಣೆಗೆ, ಕೃಷಿ-ಸಂಸ್ಕರಣೆ. ನಾವು ರೈತರಿಗೆ ನೇರ ಮಾರುಕಟ್ಟೆಗೆ ಸಂಪರ್ಕ ಕಲ್ಪಿಸಬೇಕಾಗಿದೆ. ಆದ್ದರಿಂದ, ನಾವು ಕೃಷಿ-ಜಾನುವಾರು ಮಾರುಕಟ್ಟೆ ಕಾಯ್ದೆಯ ಕರಡನ್ನು ರಚಿಸಿದ್ದೇವೆ," ಎಂದವರು ಮಾಹಿತಿ ನೀಡಿದರು.

ದೆಹಲಿಯ ವಾಯು ಮಾಲಿನ್ಯದ ಬಗ್ಗೆ ಮಾತನಾಡಿದ ಅವರು, ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಆದ್ಯತೆಯ ಕೆಲಸವಾಗಿದೆ. ಈ ಸಮಸ್ಯೆ ಬಗ್ಗೆ ಗಮನ ಹರಿಸಲು ಈಗಾಗಲೇ ಎರಡು ಟಾಸ್ಕ್ ಫೋರ್ಸ್ ಗಳನ್ನು ರಚಿಸಲಾಗಿದೆ. ಚಳಿಗಾಲದಲ್ಲಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗುವುದನ್ನು ನೀವು ಕಾಣಬಹುದು ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+