Ukraine War: ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್?
ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ತುಂಬಾ ಗಟ್ಟಿಯಾಗಿದ್ದು, ಎರಡೂ ದೇಶಗಳ ಬಂಧನ ಇತರರ ಕಣ್ಣು ಕುಕ್ಕಿಸುತ್ತಿದೆ. ಇದೇ ಕಾರಣಕ್ಕೆ ಅಮೆರಿಕ ಕೂಡ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಹಾಳು ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಿದೆ. ಇಷ್ಟೆಲ್ಲಾ ಒತ್ತಡದ ನಡುವೆ ಕೂಡ ಭಾರತ ಈಗ ರಷ್ಯಾ ಜೊತೆಗಿನ ತನ್ನ ಸಂಬಂಧ ಸೂಕ್ತವಾಗಿ ಕಾಪಾಡಿಕೊಂಡು ಬರುತ್ತಿದೆ. ಇಂತಹ ಸಮಯದಲ್ಲೇ, ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್?
ರಷ್ಯಾ ವಿರುದ್ಧ ಸತತ 3 ವರ್ಷಗಳಿಂದ ಯುದ್ಧ ಮಾಡುತ್ತಿರುವ ಉಕ್ರೇನ್ ಅನೇಕ ಸಮಸ್ಯೆ ಎದುರಿಸುತ್ತಿದೆ. ಅದರಲ್ಲೂ ಉಕ್ರೇನ್ ಇನ್ನೇನು ಸಂಪೂರ್ಣವಾಗಿ ತನ್ನ ಭೂಮಿಯನ್ನು ರಷ್ಯಾ ಸೇನೆ ವಶಕ್ಕೆ ಒಪ್ಪಿಸುವ ಹಂತಕ್ಕೆ ತಲುಪಿದೆ. ಹೀಗಿದ್ದರೂ ರಷ್ಯಾ ಜೊತೆಗೆ ಸಂಧಾನ ಮಾತುಕತೆ ನಡೆಸಿ ಯುದ್ಧಕ್ಕೆ ವಿರಾಮ ಹಾಕುವ ಕೆಲಸಕ್ಕೆ ವೊಲೊಡಿಮಿರ್ ಝೆಲೆನ್ಸ್ಕಿ ಮುಂದಾಗುತ್ತಿಲ್ಲ. ಇದು ಟ್ರಂಪ್ ಸೇರಿದಂತೆ ಜಗತ್ತಿನ ಹಲವು ದೇಶಗಳ ನಾಯಕರ ಕೋಪಕ್ಕೆ ಕಾರಣವಾಗಿದ್ದು, ಈಗಲೂ ಉಕ್ರೇನ್ ಬದಲಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಇದ್ದಾಗ ಇಂಡಿಯಾಗೆ ಬರೋದಕ್ಕೆ ಪುಟಿನ್ ರೆಡಿ ಆಗಿದ್ದಾರಾ?

ಪುಟಿನ್ ಎಂಟ್ರಿ ಬಹುತೇಕ ಕನ್ಫರ್ಮ್?
ಹೌದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಬೇಟಿ ನೀಡಲಿದ್ದಾರೆ ಎಂಬ ಸುದ್ದಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಭಾರತ ಹಾಗೂ ರಷ್ಯಾ ನಡುವೆ ತುಂಬಾ ಉತ್ತಮವಾದ ಸ್ನೇಹ & ಸಂಬಂಧ ಇದ್ದು, ಎರಡೂ ದೇಶಗಳ ನಡುವೆ ಹಲವು ವ್ಯಾಪಾರ & ವಹಿವಾಟು ಕೂಡ ನಡೆಯುತ್ತಲೇ ಇದೆ. ಹೀಗಿದ್ದಾಗ ದಿಢೀರ್ ಪುಟಿನ್ ಅವರು ಭಾರತಕ್ಕೆ ಬಂದು, ಭಾರತದಲ್ಲಿ ಹಲವು ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಆದರೆ ಈವರೆಗೂ ಪುಟಿನ್ ಅವರ ಭಾರತ ಭೇಟಿ ಬಗ್ಗೆ ಹೇಳಿಕೆ ಅಧಿಕೃತವಾಗಿ ಸಿಕ್ಕಿಲ್ಲ. ಆದರೂ ಪುಟಿನ್ ಎಂಟ್ರಿ ಬಹುತೇಕ ಕನ್ಫರ್ಮ್ ಎನ್ನಲಾಗುತ್ತಿದೆ.
ಪುಟಿನ್ ಬಂದರೆ ಬೇರೆಯವರಿಗೆ ಕೋಪ?
ಒಟ್ನಲ್ಲಿ ಭಾರತಕ್ಕೆ ಪುಟಿನ್ ಬಂದರೆ ಅದು ಮತ್ತೆ ಅಮೆರಿಕ ಸೇರಿದಂತೆ ರಷ್ಯಾ ಬಗ್ಗೆ ವಿರೋಧ ಮಾಡುವ ಹಲವಾರು ದೇಶಗಳಿಗೆ ಸಾಕಷ್ಟು ಬೇಸರ ತರಿಸಲಿದೆ ಎಂಬ ಮಾತು ಕೂಡ ಕೇಳಿಬಂದಿದೆ. ಈ ವಿಚಾರದಲ್ಲಿ ಭಾರತ ಕೂಸ ಸಾಕಷ್ಟು ಚಿಂತೆ ಮಾಡಿ ಹೆಜ್ಜೆ ಇಡುತ್ತಿದೆ. ಈಗಾಗಲೇ ರಷ್ಯಾ ಜೊತೆಗೆ ಭಾರತ ತೈಲ ಖರೀದಿಯನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿತ ಮಾಡಿರುವುದು ಕೂಡ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.












Click it and Unblock the Notifications