ಕೇರಳ ಪ್ರವಾಹ:ಕೋವಿಂದ್, ಮೋದಿಗೆ ವ್ಲಾಡಿಮಿರ್ ಪುಟಿನ್ ಪತ್ರ

ಮಾಸ್ಕೋ, ಆಗಸ್ಟ್ 21: 'ಕೇರಳ ಪ್ರವಾಹದಿಂದ ಮೃತರಾದವರಿಗೆ ನನ್ನ ತೀವ್ರ ಸಂತಾಪಗಳು' ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರಬರೆದಿದ್ದಾರೆ.

"ಕೇರಳಕ್ಕೆ ಅಪ್ಪಳಿಸಿರುವ ಭೀಕರ ಪ್ರವಾಹದಿಂದ ಮೃತರಾದವರಿಗೆ ನನ್ನ ತೀವ್ರ ಸಂತಾಪಗಳು. ಈ ದುರ್ಘಟನೆಯಿಂದ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ. ಈ ಸಂಕಷ್ಟದದ ಸಂದರ್ಭದಲ್ಲಿ ಸ್ನೇಹಮಯಿ ಭಾರತದ ಜನರೊಂದಿಗೆ ರಷ್ಯಾ ಸದಾ ಜೊತೆ ಇರುತ್ತದೆ" ಎಂದು ಪುಟಿನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

Vladimir Putin writes to PM Modi and Kovind about Kerala floods

ಕಳೆದ ಕೆಲವು ದಿನಗಳಿಂದ ಕೇರಳದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಇದುವರೆಗೆ 350 ಕ್ಕೂ ಹೆಚ್ಚು ಜನ ಮೃತರಾಗಿದ್ದು, ಲಕ್ಷಾಂತರ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ದೇಶದ ಬಹುತೇಕ ರಾಜ್ಯಗಳಿಂದ ನೆರವು ಹರಿದುಬರುತ್ತಿದೆಯಾದರೂ ಈಗಾಗಲೇ ಆಗಿರುವ ನಷ್ಟವನ್ನು ತುಂಬುವುದಕ್ಕೆ ಸಾಕಷ್ಟು ಸಮಯವೇ ಬೇಕಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+