ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ರೂಪದಲ್ಲಿ ಎದ್ದ ಅಮೆರಿಕ, ರಷ್ಯಾ ಶೀತಲ ಸಮರ!

|
Google Oneindia Kannada News

ಸೇಂಟ್ ಪೀಟರಬರ್ಗ, ಡಿಸೆಂಬರ್ 3; ಜಗತ್ತಿನ ಅತ್ಯಂತ ಪ್ರಭಾವಿ, ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು, ರಷ್ಯಾದಲ್ಲಿನ ಅಮೆರಿಕ ಹಾಗೂ ಪಾಶ್ಚಿಮಾತ್ಯ ಮೂಲದ ಮಾಧ್ಯಮಗಳ ವಾಕ್ ಸ್ವಾತಂತ್ರ್ಯದ ಮೇಲೆ ಗದಾಪ್ರಹಾರ ಮಾಡಲು ಮುಂದಾಗಿದ್ದಾರೆ. ಇದು ಅಮೆರಿಕ ಹಾಗೂ ರಷ್ಯಾದ ನಡುವಿನ ಮತ್ತೊಂದು ಬಗೆಯ ಶೀತಲ ಸಮರಕ್ಕೆ ಕಾರಣವಾಗಿದೆ.

ಹೌದು, ಪುಟಿನ್ ಅವರು, ರಷ್ಯಾದದಲ್ಲಿ ತಮ್ಮ ವಿರುದ್ದ ಧ್ವನಿ ಎತ್ತುವ ವಿದೇಶಿ ಪತ್ರಕರ್ತರಿಗೆ 'ವಿದೇಶಿ ಏಜೆಂಟ್‌' ಗಳು ಎಂದು ಲೇಬಲ್ ಹಚ್ಚುವ ಮಸೂದೆಗೆ ಸೋಮವಾರ ಸಹಿ ಮಾಡಿದ್ದಾರೆ. ಪುಟಿನ್ ಅವರ ಈ ವಿವಾದಾತ್ಮಕ ನಡೆ ಅಲ್ಲಿನ ಮುಕ್ತ ಮಾಧ್ಯಮ ಸ್ವಾತಂತ್ಯ ಹರಣ ಎಂದು ವಿಮರ್ಶಿಸಲಾಗುತ್ತಿದೆ. ರಷ್ಯಾದಲ್ಲಿ ಸರಕಾರದ ನೀತಿ ನಿಯಮಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಹಾಗೂ ವಿಮರ್ಶೆ ಮಾಡುವ ಪತ್ರಕರ್ತರನ್ನು ಕಟ್ಟಿ ಹಾಕುವ ಕೆಲಸವನ್ನು ಪುಟಿನ್ ಅವರು ಮಾಡಿದ್ದಾರೆ ಎಂದು ಪಾಶ್ಚಿಮಾತ್ಯ ಮಾಧ್ಯಮಗಳು ಆರೋಪಿಸಿವೆ.

ಈಗಾಗಲೇ ರಷ್ಯಾ ಸರಕಾರ 2012 ರಲ್ಲಿ, ಸರಕಾರದ ವಿರುದ್ದ ಕೆಲಸ ಮಾಡುತ್ತವೆ ಎಂದು ವಿದೇಶಿ ಎನ್‌ ಜಿ ಓಗಳನ್ನು ನಿಷೇಧಿಸಲು ಇದೇ "ವಿದೇಶಿ ಏಜೆಂಟ್‌' ಮಸೂದೆಯನ್ನು ಜಾರಿಗೆ ತಂದಿತ್ತು. ಈಗ ಅದನ್ನು ಮುಕ್ತವಾಗಿ ಸರಕಾರದ ನೀತಿ ನಿಯಮಗಳ ಬಗ್ಗೆ ಮಾತನಾಡುವ ವಿದೇಶಿ ಪತ್ರಕರ್ತರಿಗೂ ವಿಸ್ತರಿಸಿದೆ. ಅಷ್ಟೇ ಅಲ್ಲದೆ, ಮುಕ್ತವಾಗಿ ಬರೆಯುವ ಮಾತನಾಡುವ ಸ್ವತಂತ್ರ ಪತ್ರಕರ್ತರು ಇನ್ಮುಂದೆ ವಿದೇಶಗಳಿಂದ ದೇಣಿಗೆ, ಆರ್ಥಿಕ ಸಹಾಯ ಪಡೆದರೆ, ಅದನ್ನು ಸರಕಾರದ ನ್ಯಾಯಾಂಗ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ಇಲ್ಲದಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ ಎಂಬ ಎಚ್ಚರಿಕೆ ಹೊಸ ಮಸೂದೆಯಲ್ಲಿ ಅಡಗಿದೆ.

Vladimir Putin Signs Law To Label Journalists As Foreign Agents

ಪುಟಿನ್ ಅವರ ಈ ನಡೆಯನ್ನು ಖಂಡಿಸಿರುವ 'ಆಮ್ನೆಟಿ ಇಂಟರನ್ಯಾಷನಲ್' ಹಾಗೂ 'ಜರ್ನಲಿಸ್ಟ ವಿತೌಟ್ ಬಾರ್ಡರ್ಸ್' ಸಂಸ್ಥೆಗಳು, ಹೊಸ ಮಸೂದೆ ಉದ್ದೇಶ ಕೇವಲ ಬಾಯಿಮುಚ್ಚಿಸುವುದಲ್ಲ, ಬ್ಲಾಗ್ ಬರೆಯುವರ ಮೇಲೆ, ವಿದೇಶಿ ಸ್ಕಾಲರಶಿಪ್ ಪಡೆಯುವರ ಮೇಲೆಯೂ ವಕ್ರದೃಷ್ಠಿ ಬೀರಲಾಗಿದೆ. ಇದು ವಾಕ್ ಸ್ವಾತ್ರಂತ್ರ್ಯದ ಹರಣ ಎಂದು ಖಂಡಿಸಿವೆ. ಈ ಹಿಂದೆ ಅಮೆರಿಕ ಕೂಡ ರಷ್ಯಾ ಮೂಲದ ಆರ್ ಟಿ ನ್ಯೂಸ್ ಗೆ "ವಿದೇಶಿ ಲೇಬಲ್' ಹಚ್ಚಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Rusian President Vladimir Putin sign to new law to label journalists as Foreign agents, its condem by foriegn medias.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X