Get Updates
Get notified of breaking news, exclusive insights, and must-see stories!

ಭಯ ಹುಟ್ಟಿಸುವ ಮೆಕ್ಸಿಕೋ ಭೂಕಂಪದ ವೈರಲ್ ವಿಡಿಯೋ

ಮೆಕ್ಸಿಕೋ, ಸೆಪ್ಟೆಂಬರ್ 8: ಮೆಕ್ಸಿಕೋದ ದಕ್ಷಿಣ ಕರಾವಳಿಯಲ್ಲಿ ಸಂಭವಿಸಿದ 8.0 ತೀವ್ರತೆಯ ಭೀಕರ ಭೂಕಂಪದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದೀಪದ ಕಂಬಗಳು ಉಯ್ಯಾಲೆಯಂತೆ ತೂಗುತ್ತಿರುವ ದೃಶ್ಯ, ಆಕಾಶದ ತುಂಬ ವಿಲಕ್ಷಣ ಮಿಂಚು ತುಂಬಿರುವ ದೃಶ್ಯ, ಅಟ್ಟಿಸಿಕೊಂಡು ಬರುವ ಬಿರುಗಾಳಿಯಿಂದ ತಪ್ಪಿಸಿಕೊಳ್ಳೋದಕ್ಕೆ ಜನರು ಓಡುತ್ತಿರುವ ದೃಶ್ಯ, ಬೆಂಕಿಯುಗುಳುವ ವಿದ್ಯುತ್ ತಂತಿಯ ದೃಶ್ಯ ಇತ್ಯಾದಿ ದೃಶ್ಯಗಳು ಮೆಕ್ಸಿಕೋ ಭೂಕಂಪದ ತೀವ್ರತೆಯನ್ನು ವ್ಯಕ್ತಪಡಿಸಿವೆ.

ಮೆಕ್ಸಿಕೋ ಕಾಲಮಾನದ ಪ್ರಕಾರ ಗುರುವಾರ ರಾತ್ರಿ 9:49 ಕ್ಕೆ ಭೂಕಂಪ ಸಂಭವಿಸಿದ್ದು ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇಲ್ಲಿನ ಹವಾಮಾನ ಇಲಾಖೆ ಸುನಾಮಿ ಮುನ್ಸೂಚನೆಯನ್ನೂ ನೀಡಿದ್ದು, ಕೆಲವು ಮಾಧ್ಯಮಗಳು ರಿಕ್ಟರ್ ಮಾಪನದಲ್ಲಿ 8.4 ಭೂಕಂಪ ತೀವ್ರತೆ ದಾಖಲಾಗಿದೆ ಎಂದೂ ಉಲ್ಲೇಖಿಸಿವೆ. ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಭೂಕಂಪದ ಕೆಲವು ಭಯಾನಕ ವಿಡಿಯೋಗಳಂತೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ವಿಡಿಯೋ ಇಲ್ಲಿವೆ.

ಅಲುಗಾಡಿದ ಏಂಜೆಲ್ ಆಫ್ ಇಂಡಿಪೆಂಡೆನ್ಸ್ ಕಟ್ಟಡ

ಮೆಕ್ಸಿಕೋದ ಪ್ರಸಿದ್ಧ ತಾಣವಾದ ಏಂಜೆಲ್ ಆಫ್ ಇಂಡಿಪೆಂಡೆನ್ಸ್ ಕಟ್ಟಡ ಭೂಕಂಪದ ತೀವ್ರತೆಗೆ ಅಲುಗಾಡುತ್ತಿದ್ದುದು ಕಂಡುಬಂತು.

ಉಯ್ಯಾಲೆಯಾಡುತ್ತಿರುವ ದೀಪದ ಕಂಬಗಳು

ಫ್ಲೈ ಓವರ್ ಮೇಲಿನ ದೀಪದ ಕಂಬಗಳು ಜೋಕಾಲಿಯಂತೆ ಅಲ್ಲಾಡುತ್ತಿದ್ದ ದೃಶ್ಯ ಭೂಕಂಪದ ತೀವ್ರತೆಯನ್ನು ಅರ್ಥ ಮಾಡಿಸುತ್ತಿದೆ.

ಭೂಕಂಪದದಿಂದಾಗಿ ಬೆಂಕಿಯುಗುಳುತ್ತಿರುವ ವಿದ್ಯುತ್ ತಂತಿಯ ವಿಡಿಯೋ.

ಭೂಕಂಪದದಿಂದಾಗಿ ಬೆಂಕಿಯುಗುಳುತ್ತಿರುವ ವಿದ್ಯುತ್ ತಂತಿಯ ವಿಡಿಯೋ.

ರುದ್ರರಮಣೀಯತೆ

ಭೂಕಂಪದ ಸಮಯದಲ್ಲಿ ಆಕಾಶದ ತುಂಬ ತುಂಬಿದ್ದ ಮಿಂಚಿನ ದೃಶ್ಯ ನೋಡುವುದಕ್ಕೆ ರಮಣೀಯವಾದರೂ ಅದು ಭೂಕಂಪದ ಮುನ್ಸೂಚನೆಯಾಗಿತ್ತು ಎಂಬುದು ಅಲ್ಲಿನ ಯಾರಿಗೂ ಗೊತ್ತಾಗಿರಲಿಲ್ಲ!

ಅಟ್ಟಿಸಿಕೊಂಡು ಬರುವ ಬಿರುಗಾಳಿ

ಭೂಕಂಪಕ್ಕೆ ಹೆದರಿ ಜನರು ಮನೆಯಿಂದ ರಸ್ತೆಗೆ ಓಡಿಬರುತ್ತಿದ್ದ ದೃಶ್ಯವಂತೂ ಮಾಮೂಲೆನ್ನಿಸಿತ್ತು. ಬಿರುಗಾಳಿಗೆ ಅಂಜಿ ರಸ್ತೆಯಲ್ಲಿ ಓಡುತ್ತಿದ್ದ ಜನರನ್ನೂ ಬಿರುಗಾಳಿ ಅಟ್ಟಿಸಿಕೊಂಡು ಬರುತ್ತಿದ್ದ ದೃಶ್ಯ ಮೆಕ್ಸಿಕೋ ಜನರ ಸಂಕಟದ ಕತೆ ಹೇಳುವಂತಿತ್ತು!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+