ಭ್ರಷ್ಟಾಚಾರದ ಬೇಗುದಿ: ಪೊಲೀಸರಿಗೆ ಕಾಸು ಕೊಟ್ಟವರೇ ಬಾಸು, ಇಲ್ಲದಿದ್ರೆ ವ್ಯಾಪಾರ ಫುಲ್ ಲಾಸು!
ಹನೋಯಿ, ಡಿಸೆಂಬರ್ 23: ಕಾಸು ಅಂದರೆ ಖಾಕಿ. ಖಾಕಿ ಎಂದರೆ ಕಾಸು. ಈ ಖಾಕಿಗೂ ಮತ್ತು ಕಾಸಿಗೂ ಬಿಡಿಸಲಾಗದ ನಂಟು. ಅದು ಯಾವುದೇ ದೇಶ ಆಗಿರಲಿ ಅಲ್ಲಿ ಖಾಕಿ ತೊಟ್ಟ ಪೊಲೀಸರಿಗೆ ಕೈ ಬಿಸಿ ಮಾಡಿದರಷ್ಟೇ ಸಾರ್ವಜನಿಕರು ಕೆಲಸಗಳು ಸುಗಮವಾಗಿ ನಡೆಯುತ್ತದೆ. ಪೊಲೀಸರಿಗೆ ಹಣ ನೀಡದಿದ್ದರೆ ಯಾವುದೇ ವ್ಯಾಪಾರಿ ವ್ಯಾಪಾರ ಮಾಡುವುದಕ್ಕೆ ಸಾಧ್ಯವಿಲ್ಲ.
ಭಾರತದಲ್ಲಿ ಭ್ರಷ್ಟಾಚಾರ, ಪೊಲೀಸರಿಂದ ಹಣ ವಸೂಲಿ ಬಗ್ಗೆ ಸುದ್ದಿಗಳು ಸರ್ವೇ ಸಾಮಾನ್ಯವಾಗಿ ಓದಲು ಸಿಗುತ್ತವೆ. ದೇಶದ ಬಹುಪಾಲು ರಾಜ್ಯಗಳಲ್ಲಿ ಪೊಲೀಸರೇ ಕಮೀಷನ್ ವಸೂಲಿಗೆ ನಿಂತಿದ್ದಾರೆ ಎಂದ ಬಗ್ಗೆ ಕೇಳಿರುತ್ತೀರಿ, ಓದಿರುತ್ತೀರಿ. ಆದರೆ ಇಲ್ಲಿ ನಾವು ಹೇಳುತ್ತಿರುವುದು ಭಾರತೀಯ ಪೊಲೀಸರ ಸುದ್ದಿ ಅಲ್ಲ.
ವಿಯೆಟ್ನಾಂ ಎಂಬ ರಾಷ್ಟ್ರದಲ್ಲಿ ಪೊಲೀಸರು ಪ್ರತಿನಿತ್ಯ ನಡೆಸುವ ವಸೂಲಿ ದಂಧೆಗೆ ಕಡಿವಾಣವೇ ಇಲ್ಲದಂತೆ ಆಗಿದೆ. ಪುಟ್ಟ ಟೀ ಅಂಗಡಿಯ ವ್ಯಾಪಾರಿ ಆದಿಯಾಗಿ ಹೋಟೆಲ್ ಉದ್ಯಮಿವರೆಗೂ ಎಲ್ಲರೂ ಪೊಲೀಸರಿಗೆ ಕಮೀಷನ್ ನೀಡಲೇಬೇಕು. ತಿಂಗಳಿಗೆ ಇಷ್ಟು ಹಣ ಎಂದು ಪೊಲೀಸರಿಗಾಗಿ ತೆಗೆದು ಇಡಬೇಕು. ಅದು ಎಷ್ಟರ ಮಟ್ಟಿಗೆ ಆಗಿದೆ ಎಂದರೆ ವ್ಯಾಪಾರಕ್ಕಾಗಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಪೊಲೀಸರಿಗೆ ನೀಡುವ ಕಮೀಷನ್ ಕೂಡಾ ಹೂಡಿಕೆಯ ಒಂದು ಭಾಗ ಎನ್ನುವ ಹಂತಕ್ಕೆ ಬಂತು ನಿಂತಿದೆ.
ವಿಯೆಟ್ನಾಂನಲ್ಲಿ ಪೊಲೀಸರ ಕಮೀಷನ್ ದಂಧೆ ಹೇಗೆ ನಡೆಯುತ್ತಿದೆ?, ಸ್ಥಳೀಯ ಹಾಗೂ ಪುಟ್ಟ ವ್ಯಾಪಾರಿಗಳ ಪರಿಸ್ಥಿತಿ ಹೇಗಿದೆ?, ದೇಶದಲ್ಲಿ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಮಿತಿ ಮೀರಿದೆ?, ಪೊಲೀಸರು ವಸೂಲಿಗೆ ನಿಂತುಕೊಳ್ಳುವುದಕ್ಕೆ ಕಾರಣ ಯಾರು?, ಪೊಲೀಸರಿಗೆ ಹಿರಿಯ ಅಧಿಕಾರಿಗಳೇ ಒತ್ತಡ ಹಾಕುತ್ತಿದ್ದಾರೆ?. ಹೀಗೆ ಸರ್ವೇ ಸಾಮಾನ್ಯವಾಗಿ ಕಾಡುವ ಎಲ್ಲ ಪ್ರಶ್ನೆಗಳಿಗೆ ವರದಿ ಮೂಲಕ ಉತ್ತರವನ್ನು ತಿಳಿಯೋಣ.

ಪೊಲೀಸ್ ಜೀಪ್ ಸದ್ದು ಮಾಡಿದರೆ ಎದೆಯಲ್ಲಿ ನಡುಕ
ವಿಯೆಟ್ನಾಂ ರಾಜಧಾನಿ ಹನೋಯಿ ಹಳೆಯ ಕ್ವಾರ್ಟರ್‌ನಲ್ಲಿ ಇತ್ತೀಚಿಗೆ ಪೊಲೀಸ್ ಜೀಪ್ ಕಂಡರೆ ವ್ಯಾಪಾರಿಗಳು ಭಯ ಬೀಳುತ್ತಾರೆ. "ಪೊಲೀಸ್ ಕಾರಿನ ಸದ್ದು ಕೇಳಿದರೆ ಸಾರು, ತಮ್ಮ ಅಂಗಡಿಗಳ ಮುಂದೆ ಇರಿಸಿದ್ದ ಎಲ್ಲ ಕುರ್ಚಿಗಳನ್ನು ಎತ್ತಿಕೊಂಡು ಒಳಗೆ ಹೋಗಬೇಕು. ಪೊಲೀಸರು ಮುಂದೆ ಸಾಗಿದ ನಂತರದಲ್ಲಿ ಮತ್ತೆ ತರಾತುರಿಯಲ್ಲಿ ಕುರ್ಚಿಗಳನ್ನು ಮೊದಲಿದ್ದ ಸ್ಥಳದಲ್ಲಿ ತಂದು ಇರಿಸಬೇಕು," ಎಂದು ಎನ್ಗಾನ್ ಎಂಬ ಮಹಿಳಾ ವ್ಯಾಪಾರ ತಮ್ಮ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ.
"ಪ್ರತಿನಿತ್ಯ ನಮಗೆ ಇದೊಂದು ನಟನೆಯ ರೀತಿ ಆಗಿ ಹೋಗಿದೆ. ದಿನವೂ ಈ ಕುರ್ಚಿಗಳನ್ನು ಎತ್ತಿ ಹಾಕುವುದಕ್ಕಾಗಿ ಕೆಲವು ಸಮಯವನ್ನು ನಾವು ತೆಗೆದು ಇಡುವಂತಾ ಪರಿಸ್ಥಿತಿಯಿದೆ. ನಾವು ಪ್ರತಿನಿತ್ಯ ಅವರಿಗೆ ಮಾಮೂಲಿ ಅನ್ನು ನೀಡುವವರೆಗೂ ಅವರು, ನಮ್ಮನ್ನು ಯಾವುದೇ ರೀತಿ ಶಿಕ್ಷೆಗೆ ಗುರಿಪಡಿಸುವುದಿಲ್ಲ," ಎಂದು ಎನ್ಗಾನ್ ಹೇಳಿದ್ದಾರೆ.

ಆರು ತಿಂಗಳಿನಲ್ಲಿ ಪೊಲೀಸರು ಪಡೆಯುವ ಮಾಮೂಲಿ ಎಷ್ಟು?
ವಿಯೆಟ್ನಾಂನಲ್ಲಿ ಆರು ತಿಂಗಳಿನಲ್ಲಿ ಒಮ್ಮೆ 260 ಡಾಲರ್ (VND 6 ದಶಲಕ್ಷ) ಹಣವನ್ನು ಪೊಲೀಸರಿಗೆ ನಮ್ಮ ನೆರೆಯ ಅಂಗಡಿ ವ್ಯಾಪಾರಿಯು ನೀಡುತ್ತಾರೆ. ಅಲ್ಲದೇ, ವಿಶೇಷ ದಿನಗಳಲ್ಲಿ ಅವರು ಪೊಲೀಸರಿಗೆ ಅಕ್ಕಪಕ್ಕದ ಅಂಗಡಿಗಳಿಂಗ ಹಣವನ್ನೂ ವಸೂಲಿ ಮಾಡುವುದಕ್ಕೆ ಸಹಾಯ ಮಾಡುತ್ತಾರೆ. ಪೊಲೀಸರು ಎಂದಿಗೂ ತಮಗೆ ಎಷ್ಟು ಹಣ ಬೇಕು ಎಂದು ನೇರವಾಗಿ ಕೇಳುವುದಿಲ್ಲ. ಯಾವಾಗಲೂ ನಾನು ಒಂದು ಮೊತ್ತವನ್ನು ಹೇಳುತ್ತೇನೆ. ಅದರ ಬಗ್ಗೆ ಅತೃಪ್ತಿ ಇದ್ದರೆ ಅವರು ಚೌಕಾಶಿ ಮಾಡುತ್ತಾರೆ, "ಎಂದು 10 ವರ್ಷಕ್ಕೂ ಹೆಚ್ಚು ಕಾಲ ಅದೇ ಸ್ಥಳದಲ್ಲಿ ಕಾಫಿ ಮಾರಾಟ ಮಾಡುತ್ತಿರುವ ಎನ್ಗಾನ್ ಹೇಳಿದರು.

ವ್ಯಾಪಾರದ ವೆಚ್ಚಗಳಲ್ಲಿ ಪೊಲೀಸರಿಗೆ ನೀಡುವ ಹಣವೂ ಸೇರ್ಪಡೆ
ಒಂದು ವ್ಯಾಪಾರವನ್ನು ಮಾಡಬೇಕಾದರೆ ಅದಕ್ಕಾಗಿ ಹೂಡಿಕೆ ಮಾಡಬೇಕಾಗುತ್ತದೆ, ವ್ಯಾಪಾರಕ್ಕಾಗಿ ಇಂತಿಷ್ಟು ಹಣವನ್ನು ಖರ್ಚು ಮಾಡಲಾಗುತ್ತದೆ. ಪೊಲೀಸರಿಗೆ ನೀಡುವ ಕಮೀಷನ್ ಹಣವನ್ನೂ ವ್ಯಾಪಾರದಲ್ಲಿ ಆಗುವ ಖರ್ಚಿನ ಒಂದಿ ವಿಭಾಗ ಎಂದು ಪರಿಗಣಿಸಬೇಕಾಗುತ್ತದೆ. ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನಿಂದ ಕಳೆದ ವರ್ಷದ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ವಿಯೆಟ್ನಾಂ 180 ದೇಶಗಳಲ್ಲಿ 104ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಜಾಗತಿಕ ಭ್ರಷ್ಟಾಚಾರವನ್ನು ಎದುರಿಸುವ ಬರ್ಲಿನ್ 100ರಲ್ಲಿ 36 ಅಂಕಗಳನ್ನು ಪಡೆದುಕೊಂಡಿದೆ, ಇಲ್ಲಿ 100 ಅನ್ನು ಅತ್ಯಂತ ಶುದ್ಧ ಎಂದು ಪರಿಗಣಿಸಲಾಗುತ್ತದೆ. ದೇಶದ ಅತ್ಯಂತ ಭ್ರಷ್ಟ ವಲಯಗಳಲ್ಲಿ ಪೊಲೀಸರನ್ನು ಸಹ ಸೇರಿಸಲಾಗಿದೆ.
ಸೆಕ್ರೆಟರಿ ಜನರಲ್ ಗುಯೆನ್ ಫು ಟ್ರೋಂಗ್ ಅವರು 2018ರಲ್ಲಿ ಭ್ರಷ್ಟಾಚಾರ-ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದಾಗ, 11,700ಕ್ಕೂ ಹೆಚ್ಚು ಆರ್ಥಿಕ ಅಪರಾಧಗಳ ವಿಚಾರಣೆಗೆ ಕಾರಣವಾಯಿತು. ಆಡಳಿತ ಕಮ್ಯುನಿಸ್ಟ್ ಪಕ್ಷವು ಮೇಲ್ಮಟ್ಟದ ಜೊತೆಗೆ ಪೊಲೀಸ್ ಮತ್ತು ಮಿಲಿಟರಿ ಪ್ರಮುಖ ಗುರಿಗಳಾಗಿದ್ದವು. ಅದಾಗ್ಯೂ, ಅಭಿಯಾನವು ಭ್ರಷ್ಟಾಚಾರವನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಲಿಲ್ಲ. ರಾಜ್ಯ ಮತ್ತು ಇತರೆ ಸಂಸ್ಥೆಗಳಲ್ಲಿ ಸಾರ್ವಜನಿಕ ಅಧಿಕಾರಿಗಳು ಮತ್ತು ವ್ಯವಸ್ಥಾಪಕರು ಲಂಚವನ್ನು ತೆಗೆದುಕೊಳ್ಳುವುದು 2018ರ ಭ್ರಷ್ಟಾಚಾರ-ವಿರೋಧಿ ಕಾನೂನಿನಡಿಯಲ್ಲಿ ಅಪರಾಧವಾಗುತ್ತದೆ. ಆದರೂ, ಪೊಲೀಸರು ಮತ್ತು ಇತರೆ ಕೆಳಮಟ್ಟದ ನಾಗರಿಕ ಸೇವಕರಿಗೆ ನೀಡುವ ಹಣವನ್ನು ಸಾಮಾನ್ಯವಾಗಿ "ರಕ್ಷಣಾ ಶುಲ್ಕಗಳು" ಎಂದು ಅರ್ಥೈಸಲಾಗುತ್ತದೆ.

ಅಧಿಕಾರಿಗಳಿಗೆ ಸಮಸ್ಯೆ ನಿಭಾಯಿಸುವುದೇ ಸಮಸ್ಯೆ
ರಾಷ್ಟ್ರೀಯ ಮಟ್ಟದಲ್ಲಿ ಭ್ರಷ್ಟಾಚಾರ-ವಿರೋಧಿ ಕ್ರಮಗಳನ್ನು ಕೈಗೊಳ್ಳಲಾಗಿದ್ದರೂ, ಪೊಲೀಸ್ ಭ್ರಷ್ಟಾಚಾರವನ್ನು ವರದಿ ಮಾಡಲು ಹಾಟ್‌ಲೈನ್ ಸ್ಥಾಪನೆ ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಪ್ರಾಂತೀಯ ಮತ್ತು ರಾಷ್ಟ್ರೀಯ ಅಧಿಕಾರಿಗಳು ಸಮಸ್ಯೆ ನಿಭಾಯಿಸುವುದರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇತರ ಕ್ರಮಗಳಲ್ಲಿ ಪ್ರಗತಿ ಕಂಡು ಬಂದಿದೆ. 2019 ರಲ್ಲಿ, 63 ಪ್ರಾಂತ್ಯಗಳು ಮತ್ತು ನಗರಗಳಲ್ಲಿ 14,138 ನಾಗರಿಕರನ್ನು ಸಂದರ್ಶಿಸಿದಾಗ ಪ್ರಾಂತೀಯ ಆಡಳಿತ ಮತ್ತು ಸಾರ್ವಜನಿಕ ಆಡಳಿತದ ಕಾರ್ಯಕ್ಷಮತೆ ಸೂಚ್ಯಂಕವು 2011 ರಿಂದ ಭ್ರಷ್ಟಾಚಾರದಲ್ಲಿ ಅತಿದೊಡ್ಡ ಕುಸಿತವನ್ನು ವರದಿ ಮಾಡಿದೆ. ಭ್ರಷ್ಟಾಚಾರದಲ್ಲಿ ಇಳಿಕೆಯನ್ನು ವರದಿ ಮಾಡಿದ ಪ್ರತಿಸ್ಪಂದಕರ ಪ್ರಮಾಣವು 2018 ಕ್ಕಿಂತ ಐದು ಶೇಕಡಾ ಪಾಯಿಂಟ್‌ಗಳು ಹೆಚ್ಚಾಗಿದೆ.
ಪೊಲೀಸರಿಗೆ ನೀಡುವ ಉಡುಗೊರೆ ಮತ್ತು ಪಾವತಿಗಳು ಕಿರುಕುಳದ ವಿರುದ್ಧ ನಾನು ನೀಡುವ ವಿಮೆ ಆಗಿರುತ್ದೆ ಎಂದು ಹೋವಾ ಬಿನ್ಹ್ ನಗರದಲ್ಲಿನ ಸಣ್ಣ ಹಾಟ್‌ಪಾಟ್ ರೆಸ್ಟೋರೆಂಟ್‌ನ ಮಾಲೀಕ ತುಗೆ ಹೇಳಿದ್ದಾರೆ. "ರೆಸ್ಟೋರೆಂಟ್ ಎಂದ ಮೇಲೆ ಶಬ್ದವು ಅನಿವಾರ್ಯವಾಗಿದೆ. ಯಾವುದೇ ಸಮಯದಲ್ಲಿ ನೆರೆಹೊರೆಯಲ್ಲಿ ಶಾಂತಿ ಕದಡಿದರೆ ನಮಗೆ ದಂಡ ವಿಧಿಸಬಹುದು," ಎಂದು ಅವರು ಹೇಳಿದರು.
"ನನಗೆ ಹೆಚ್ಚು ಶಿಕ್ಷಣವಿಲ್ಲ. ಅವರ ಅವಶ್ಯಕತೆಗಳನ್ನು ಹೇಗೆ ಪೂರೈಸಬೇಕೆಂದು ನನಗೆ ತಿಳಿದಿಲ್ಲ, "ಎಂದು ಹೇಳಿದರು. "ಆ ಅವಶ್ಯಕತೆಗಳು ಎಂದಿಗೂ ಪಾರದರ್ಶಕವಾಗಿರುವುದಿಲ್ಲ. ಅವರ ಹುಚ್ಚಾಟಿಕೆಯು ಆಗಾಗ ಬದಲಾಗಬಹುದು. ನನ್ನ ವ್ಯವಹಾರವು ಇಂದು ಕಾನೂನುಬದ್ಧವಾಗಿರಬಹುದು ಮತ್ತು ಮರುದಿನ ಕಾನೂನುಬಾಹಿರವಾಗಿರಬಹುದು." ಎಂದಿದ್ದಾರೆ.

ಹೊಂದಾಣಿಕೆ ಮಾಡಿಕೊಂಡು ಲಂಚ ಪಡೆಯಲು ಅಧಿಕಾರಿಗಳು ಮುಂದು
ಪೋಲೀಸರೊಂದಿಗಿನ ಉತ್ತಮ ಸಂಬಂಧವು ಲಂಚದ ವಿಷಯಕ್ಕೆ ಬಂದಾಗ ಮಾತ್ರ ಅಧಿಕಾರಿಗಳು ಹೊಂದಿಕೊಳ್ಳುವಂತೆ ಪ್ರೋತ್ಸಾಹಿಸಬಹುದು. ಸೆಪ್ಟೆಂಬರ್‌ನಲ್ಲಿ ತೆಗೆದುಹಾಕಲಾದ ಎರಡು ತಿಂಗಳ ಲಾಕ್‌ಡೌನ್ ಸಮಯದಲ್ಲಿ, ನಿರ್ಬಂಧಗಳು ಅವರ ಕುಟುಂಬದ ಆದಾಯವನ್ನು ವಂಚಿತಗೊಳಿಸಿದ್ದರಿಂದ ಎನ್ಗಾನ್ ಅವರ ಪೊಲೀಸ್ ಅಧಿಕಾರಿಯ "ಶುಲ್ಕ" ವನ್ನು ಮನ್ನಾ ಮಾಡಲಾಗಿತ್ತು. ಈ ತಿಂಗಳ ಆರಂಭದಲ್ಲಿ ಎನ್ಗಾನ್ ಅಂಗಡಿಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಯು ಲಂಚಕ್ಕಾಗಿ ಬೇಡಿಕೆಯಿಟ್ಟರು. ಇತ್ತೀಚಿನ ದಿನಗಳಲ್ಲಿ ಕೊವಿಡ್-19 ಕಾರಣದಿಂದಾಗಿ ವ್ಯಾಪಾರ ಉತ್ತಮವಾಗಿಲ್ಲ. ಆದ್ದರಿಂದ ಪೊಲೀಸರಿಗೆ ನೀಡುವ ಹಣದಲ್ಲಿ ಕೊಂಚ ವಿನಾಯಿತಿ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಪೊಲೀಸ್ ಅಧಿಕಾರಿಯೂ ಒಪ್ಪಿಕೊಂಡಿದ್ದರು. ಆದರೆ, ವ್ಯಾಪಾರವು ಮೊದಲಿನಂತೆ ಮತ್ತೆ ಸುಧಾರಿಸಿದ ಸಂದರ್ಭದಲ್ಲಿ ಈಗ ಬಾಕಿ ಉಳಿಸಿದ ಹಣವನ್ನು ನೀಡಬೇಕು ಎಂದು ಪೊಲೀಸರು ಷರತ್ತು ವಿಧಿಸಿದ್ದಾರೆ," ಎಂದು ಎನ್ಗಾನ್ ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರತಿ ತಿಂಗಳು ಕಮೀಷನ್
ಸ್ಥಳೀಯ ಪೊಲೀಸರು ಲಂಚಕ್ಕಾಗಿ ಸಣ್ಣ ವ್ಯಾಪಾರಿಗಳನ್ನು ಅವಲಂಬಿಸಿದ್ದಾರೆ, ಏಕೆಂದರೆ ದೊಡ್ಡ ವ್ಯಾಪಾರಿಗಳು ಹಿರಿಯ ಅಧಿಕಾರಿಗಳ ಜೊತೆ ಸಂಪರ್ಕವನ್ನು ಹೊಂದಿರುತ್ತಾರೆ. ಪೊಲೀಸರು ಸಂಗ್ರಹಿಸಿದ ಲಂಚದ ಒಂದು ಸಣ್ಣ ಭಾಗವನ್ನು ಇಟ್ಟುಕೊಳ್ಳಲು ಮಾತ್ರ ಅನುಮತಿ ನೀಡಲಾಗಿರುತ್ತದೆ. ಉಳಿದಂತೆ ಹೆಚ್ಚಿನ ಹಣವನ್ನು "ತನ್ನ ಮೇಲಿನ ಅಧಿಕಾರಿಗಳಿಗೆ ನೀಡಲಾಗುತ್ತದೆ," ಎಂದು ಹನೋಯಿ ನಿವೃತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ನನ್ನ ಬಾಸ್ ಪ್ರತಿ ತಿಂಗಳು ಅವರಿಗೆ ನಿರ್ದಿಷ್ಟ ಮೊತ್ತವನ್ನು ಪಾವತಿಸುವಂತೆ ನಮಗೆ ಸೂಚನೆ ನೀಡಿದ್ದಾರೆ. ನಾವು ಹಾಗೆ ಹಣವನ್ನು ಪಾವತಿ ಮಾಡದಿದ್ದರೆ, ತೊಂದರೆಯನ್ನು ಎದುರಿಸಬೇಕಾಗುತ್ತದೆ," ಎಂದು ಕಳೆದ ವರ್ಷ ಪೊಲೀಸ್ ಇಲಾಖೆಯನ್ನು ತೊರೆದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಿತ್ರಕೃಪೆ

ಭ್ರಷ್ಟಾಚಾರಕ್ಕೆ ಕೆಳವರ್ಗದ ಅಧಿಕಾರಿಗಳನ್ನು ದೂಷಿಸುವುದು ಸರಿಯಲ್ಲ
ಹನೋಯಿ ಜಿಲ್ಲೆಯಲ್ಲಿ ಕಾಫಿ ಶಾಪ್ ಇಟ್ಟುಕೊಂಡಿರುವ ಹಂಗ್ ಎಂಬ ವ್ಯಾಪಾರಿಯು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಭ್ರಷ್ಟಾಚಾರದ ಸಂಸ್ಕೃತಿಗೆ ಕೇವಲ ಕೆಳವರ್ಗದ ಪೊಲೀಸ್ ಅಧಿಕಾರಿಗಳನ್ನು ದೂಷಿಸುವುದು ಸರಿಯಲ್ಲ. ಒಬ್ಬರ ಅದೃಷ್ಟವನ್ನು ಹಂಚಿಕೊಳ್ಳುವುದು ಸರಿ, ಆದರೆ, ಕೆಟ್ಟ ಕರ್ಮವನ್ನು ತಪ್ಪಿಸುವುದು ಅವಶ್ಯಕವಾಗಿರುತ್ತದೆ. "ವ್ಯಾಪಾರ ಜಗತ್ತಿನಲ್ಲಿ ಬದುಕಲು, ಸ್ಥಳೀಯ ಅಧಿಕಾರಿಗಳಿಗೆ ಹೇಗೆ ಗೌರವ ಸಲ್ಲಿಸಬೇಕು ಎಂದು ನೀವು ತಿಳಿದುಕೊಳ್ಳಬೇಕು," ಎಂದು ಹಂಗ್ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿಯೆಟ್ನಾಂ ರಾಷ್ಟ್ರದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಬೇಕಾದರೆ ಪರಸ್ಪರ ಹೊಂದಾಣಿಕೆಯಿಂದ ಮಾತ್ರ ಸಾಧ್ಯವಾಗುತ್ತದೆ ಎಂಬುದು ಕಮೀಷನ್ ವ್ಯವಸ್ಥೆಯಿಂದ ತಿಳಿದು ಬರುತ್ತಿದೆ. ಇಲ್ಲಿ ಕೆಳವರ್ಗದ ಅಧಿಕಾರಿಗಳನ್ನು ದೂರುವುದೋ ಅಥವಾ ವ್ಯವಸ್ಥೆಯನ್ನು ದೂರುವುದೋ ಎಂಬುದು ಇಂದಿಗೂ ಗೊಂದಲ ಹುಟ್ಟಿಸುವಂತಿದೆ.
ಚಿತ್ರಕೃಪೆ
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications