• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಡಿಯೋ: ಗಣೇಶ ಮೂರ್ತಿ ಒಡೆದು ಹಾಕಿದ ಮಹಿಳೆ ಬಂಧನ

|
Google Oneindia Kannada News

ಮನಾಮ, ಆಗಸ್ಟ್.17: ಹಿಂದೂ ಜನರ ಭಾವನೆಗೆ ಧಕ್ಕು ಉಂಟು ಮಾಡಿರುವಂತಾ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಧ್ಯಪ್ರಾಚ್ಯ ದೇಶವಾಗಿರುವ ಬಹ್ರೇನ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ವಿಡಿಯೋದಲ್ಲಿ ಬುರ್ಖಾ ಧರಿಸಿರುವ ಇಬ್ಬರು ಮಹಿಳೆಯರು ಗಣೇಶ ಮೂರ್ತಿಗಳನ್ನು ಸೂಪರ್ ಮಾರ್ಕೇಟ್ ನಲ್ಲಿ ಇರಿಸಿದ್ದಕ್ಕೆ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಸಿಟ್ಟಿಗೆದ್ದ ಮಹಿಳೆಯರು ಸೂಪರ್ ಮಾರ್ಕೇಟ್ ನಲ್ಲಿ ಇರಿಸಿದ್ದ ಗಣೇಶ ಮೂರ್ತಿಗಳನ್ನೆಲ್ಲ ಒಡೆದು ಹಾಕಿರುವ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

ಗಣೇಶ ಚತುರ್ಥಿ ಆಚರಣೆ; ಕರ್ನಾಟಕ ಸರ್ಕಾರದ ಮಾರ್ಗಸೂಚಿ ಗಣೇಶ ಚತುರ್ಥಿ ಆಚರಣೆ; ಕರ್ನಾಟಕ ಸರ್ಕಾರದ ಮಾರ್ಗಸೂಚಿ

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಹಿನ್ನೆಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಕೆಲವು ಗಂಟೆಗಳಲ್ಲೇ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. 54 ವರ್ಷದ ಮಹಿಳೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.


ಗಣೇಶ ಚತುರ್ಥಿ ಆಚರಣೆಗಾಗಿ ಮೂರ್ತಿ ಮಾರಾಟ:

ಬಹ್ರೇನ್ ರಾಜಧಾನಿ ಮನಾಮದ ಪಕ್ಕದಲ್ಲೇ ಇರುವ ಜುಫೈರ್ ನಲ್ಲಿ ಈ ಘಟನೆ ನಡೆದಿದೆ. ಗಣೇಶ ಚತುರ್ಥಿ ಹಬ್ಬ ಸನ್ನಿಹಿತದಲ್ಲಿರುವ ಹಿನ್ನೆಲೆ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಸೂಪರ್ ಮಾರ್ಕೇಟ್ ನಲ್ಲೂ ಗಣೇಶ ಮೂರ್ತಿಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು. ಈ ವೇಳೆ ಸೂಪರ್ ಮಾರ್ಕೇಟ್ ಗೆ ತೆರಳಿದ್ದ ಇಬ್ಬರು ಮಹಿಳೆಯರು ಗಣೇಶ ಮೂರ್ತಿಗಳನ್ನು ಅಲ್ಲಿ ಇರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರದಲ್ಲಿ ಇಬ್ಬರು ಮಹಿಳೆಯರ ಪೈಕಿ ಒಬ್ಬರು ಗಣೇಶ ಮೂರ್ತಿಗಳನ್ನು ಕೆಳಗೆ ಎಸೆದು ಒಡೆದು ಹಾಕಿದ್ದಾರೆ. ಮತ್ತೊಬ್ಬ ಮಹಿಳೆಯು ಈ ಘಟನೆಯ ವಿಡಿಯೋ ಮಾಡಿಕೊಂಡಿದ್ದಾರೆ.

English summary
Video Of Smashed Ganesh Idols At Bahrain Super Market Goes Viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X