Iran President: ಇರಾನ್ ಅಧ್ಯಕ್ಷರಿಗೆ ಭಾರತದ ಉಪರಾಷ್ಟ್ರಪತಿ ಅಂತಿಮ ನಮನ

ಜಗತ್ತಿನಾದ್ಯಂತ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದ್ದು, ಇರಾನ್ ಅಧ್ಯಕ್ಷರ ಸಾವು ಈಗ ಭಾರಿ ಗೊಂದಲ ಸೃಷ್ಟಿ ಮಾಡಿದೆ. ಹಾಗೇ ಇರಾನ್ & ಇಸ್ರೇಲ್ ನಡುವೆ ಯುದ್ಧ ಆರಂಭವಾಗುತ್ತಾ? ಎಂಬ ಅನುಮಾನ ಕೂಡ ಸೃಷ್ಟಿ ಆಗಿದ್ದು. ಇಷ್ಟೆಲ್ಲದರ ನಡುವೆ ಇರಾನ್ ಅಧ್ಯಕ್ಷರ ಸಾವು, ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ. ಆದರೆ ಭಾರತ ಮಾತ್ರ ಈ ವಿಚಾರದಲ್ಲಿ ಮತ್ತೊಮ್ಮೆ ಅತ್ಯಂತ ಜಾಣ ನಡೆ ಇಟ್ಟಿದೆ.

ಹೌದು, ಪಾಶ್ಚಿಮಾತ್ಯ ದೇಶಗಳು & ಇರಾನ್ ನಡುವೆ ಭೀಕರ ತಿಕ್ಕಾಟ ನಡೆಯುತ್ತಿದೆ. ಇಲ್ಲಿ ನೇರವಾಗಿ ಯುದ್ಧ ನಡೆಯುತ್ತಿಲ್ಲ, ಆದರೂ ಇರಾನ್ ವಿರುದ್ಧ ಪಾಶ್ಚಿಮಾತ್ಯ ದೇಶಗಳಿಂದ ಪರೋಕ್ಷ ಯುದ್ಧ ನಡೆಯುತ್ತಿದೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ಇತ್ತೀಚಿಗೆ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷರಾದ ಇಬ್ರಾಹಿಂ ರೈಸಿ ಭೀಕರವಾಗಿ ಮೃತಪಟ್ಟಿದ್ದರು. ಆದರೆ ಇದು ಇಸ್ರೇಲ್ ಮಾಡಿರುವ ಕೃತ್ಯ ಎಂದು ಇರಾನ್ ಆರೋಪ ಮಾಡುತ್ತಿದೆ. ಇಷ್ಟೆಲ್ಲದರ ಮಧ್ಯೆ ಜಗತ್ತಿನಾದ್ಯಂತ ಈಗ ಮತ್ತೊಂದು ಮಹಾಯುದ್ಧದ ಕಾರ್ಮೋಡ ಆವರಿಸಿದ್ದು, ಭಾರತವು ಈ ವಿಚಾರದಲ್ಲಿ ಮತ್ತೊಂದು ಚಾಣಾಕ್ಷ ನಡೆ ಇಟ್ಟಿದೆ!

Vice President Jagdeep Dhankhar Is Attended The Iran President Funeral

ಇರಾನ್ ದೇಶದಲ್ಲಿ ಉಪರಾಷ್ಟ್ರಪತಿ

ಅಂದಹಾಗೆ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆ ವೇಳೆ, ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು ಹಾಜರಿದ್ದರು. ಈ ಮೂಲಕ ಭಾರತವು ಇರಾನ್ ಜೊತೆಗಿನ ಸಂಬಂಧ ಗಟ್ಟಿಗೊಳಿಸುತ್ತಿದೆ. ಹಾಗೇ ಇರಾನ್ ವಿರುದ್ಧ ಅಮೆರಿಕ ಇದ್ದರೂ ಭಾರತ ಈ ವಿಚಾರದಲ್ಲಿ ಮತ್ತೊಂದು ಚಾಣಾಕ್ಷ ನಡೆ ಇಟ್ಟಿದೆ ಎಂಬುದು ತಜ್ಞರ ಅಭಿಪ್ರಾಯ ಆಗಿದೆ.

ಇಂದು ಇರಾನ್‌ಗೆ ತೆರಳಿದ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರು, ರೈಸಿ ಅವರ ಜೊತೆ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರ್ ಅಬ್ದುಲ್ಲಾಹಿಯಾನ್ & ಅಧಿಕಾರಿಗಳಿಗೆ ಅಂತಿಮ ನಮನ ಸಲ್ಲಿಸಿ ಇರಾನ್ ಪ್ರಮುಖರನ್ನು ಭೇಟಿ ಮಾಡಿದರು. ಅಲ್ಲದೆ ಈ ವೇಳೆ ಮಹತ್ವದ ಚರ್ಚೆ ಕೂಡ ನಡೆದಿದ್ದು, ಜಗತ್ತಿನ ಗಮನ ಈಗ ಮತ್ತೊಮ್ಮೆ ಭಾರತ & ಇರಾನ್ ಸಂಬಂಧದ ಕಡೆಗೆ ಬಿದ್ದಿದೆ.

ಅಮೆರಿಕ ಎಚ್ಚರಿಕೆ ನೀಡಿದ್ದು ಯಾರಿಗೆ?

ಒಟ್ನಲ್ಲಿ ಭಾರತ ಇದೀಗ ಇರಾನ್ ವಿಚಾರದಲ್ಲಿ ಇಡುತ್ತಿರುವ ಹೆಜ್ಜೆ ಕುತೂಹಲ ಕೆರಳಿಸಿದೆ. ಕೆಲವು ದಿನಗಳ ಹಿಂದೆ ಕೂಡ ಭಾರತ & ಇರಾನ್ ನಡುವಿನ ವ್ಯಾಪಾರ ಮಾತುಕತೆ ಕುರಿತು ಅಮೆರಿಕ ಎಚ್ಚರಿಕೆ ಮಾತು ಹೇಳಿತ್ತು. ಇದ್ಯಾವುದಕ್ಕೂ ಭಾರತ ಕೇರ್ ಮಾಡದೆ, ಇರಾನ್‌ಗೆ ಒತ್ತು ನೀಡಿದೆ. ಹಾಗೇ ಇರಾನ್ ಜೊತೆಗಿನ ಬಾಂಧ್ಯವ್ಯ ವೃದ್ಧಿಸಲು ಮುಂದಾಗಿದೆ. ಹೀಗಾಗಿ ಭಾರತದ ನಡೆ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಕಣ್ಣಿಟ್ಟಿವೆ ಎಂಬ ಮಾತು ಕೂಡ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+