• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಕರಿನೆರಳು: ಸೋಂಕಿತರ ಸಂಖ್ಯೆಯಲ್ಲಿ ಚೀನಾ ಮೀರಿಸಿದ ಅಮೇರಿಕಾ!

|

ಮಾರಣಾಂತಿಕ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು ವುಹಾನ್ ನಗರದಲ್ಲಿ. ಡೆಡ್ಲಿ ಕೊರೊನಾ ವೈರಸ್ ನಿಂದ ಮೊದಲು ಜರ್ಜರಿತವಾದ ರಾಷ್ಟ್ರ ಚೀನಾ. ಆದ್ರೀಗ, ಇದೇ ಕೊರೊನಾ ವೈರಸ್ ನಿಂದ ಇಟಲಿ ಮತ್ತು ಯು.ಎಸ್.ಎ ಹೆಣಗಾಡುತ್ತಿದೆ. ಯಾಕಂದ್ರೆ, ಕೋವಿಡ್-19 ನಿಂದಾಗಿ ಚೀನಾಗಿಂತ ಇಟಲಿಯಲ್ಲಿ ಸಾವಿನ ಪ್ರಮಾಣ ಜಾಸ್ತಿಯಿದ್ದರೆ, ಚೀನಾಗಿಂತ ಯು.ಎಸ್.ಎ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.

ಕೊರೊನಾ ವೈರಸ್ ಬಗ್ಗೆ ಆರಂಭಿಕ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ, ಯು.ಎಸ್.ಎ ನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತು ಮರಣ ಪ್ರಮಾಣ ಏರುಗತಿಯಲ್ಲಿ ಸಾಗುತ್ತಿದೆ.

ಕೊರೊನಾ ಜಾಗೃತಿ: ದಾರಿ ತೋರಿಸು ಎಂದವನಿಗೆ ಬೈದು ಬುದ್ದಿ ಹೇಳಿದ 'ಸಿರಿ'

ಇಲ್ಲಿಯವರೆಗೆ ಚೀನಾದಲ್ಲಿ 81,340 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಚೀನಾಗಿಂತ ಯು.ಎಸ್.ಎ ನಲ್ಲಿ ಸೋಂಕು ವ್ಯಾಪಕವಾಗಿದ್ದು, 85,435 ಮಂದಿ ಕೋವಿಡ್-19 ನಿಂದ ಬಳಲುತ್ತಿದ್ದಾರೆ. ಆ ಮೂಲಕ ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಚೀನಾ ದೇಶವನ್ನು ಹಿಂದಕ್ಕೆ ತಳ್ಳಿ ಯು.ಎಸ್.ಎ ಮೊದಲ ಸ್ಥಾನಕ್ಕೇರಿದೆ.

ಯು.ಎಸ್.ಎ ಅಂಕಿ-ಅಂಶ

ಯು.ಎಸ್.ಎ ಅಂಕಿ-ಅಂಶ

ಯು.ಎಸ್.ಎ ನಲ್ಲಿ ಇಲ್ಲಿಯವರೆಗೂ 85,435 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅದರಲ್ಲಿ ಈಗಾಗಲೇ 1295 ಮಂದಿ ಮೃತಪಟ್ಟಿದ್ದಾರೆ. 1868 ಮಂದಿ ಗುಣಮುಖರಾಗಿದ್ದು, 2,122 ಮಂದಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

81,000 ಮಂದಿ ಸಾವನ್ನಪ್ಪಬಹುದು.?

81,000 ಮಂದಿ ಸಾವನ್ನಪ್ಪಬಹುದು.?

ಅಧ್ಯಯನವೊಂದರ ಪ್ರಕಾರ, ಕೊರೊನಾ ವೈರಸ್ ಸೋಂಕಿನಿಂದ ಯು.ಎಸ್.ಎ ನಲ್ಲಿ ಇನ್ನು ನಾಲ್ಕು ತಿಂಗಳಲ್ಲಿ 81,000 ಕ್ಕೂ ಅಧಿಕ ಮಂದಿ ಸಾವನ್ನಪ್ಪಬಹುದು. ಯೂನಿವರ್ಸಿಟಿ ಆಫ್ ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್ ಕೈಗೊಂಡ ಡೇಟಾ ಅನಾಲಿಸಿಸ್ ಪ್ರಕಾರ, ಏಪ್ರಿಲ್ ಎರಡನೇ ವಾರದ ಹೊತ್ತಿಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಲಿದ್ದು, ಜೂನ್ ಮತ್ತು ಜುಲೈ ವೇಳೆಯಲ್ಲಿ ಹೆಚ್ಚು ಸಾವು ಸಂಭವಿಸಲಿದೆ.

ವಿಜ್ಞಾನಿಗಳಿಂದ ವಾರ್ನಿಂಗ್: ಮೇ ವೇಳೆಗೆ ಭಾರತದಲ್ಲಿ 13 ಲಕ್ಷ ಕೊರೊನಾ ಸೋಂಕಿತರು!

ನಿರುದ್ಯೋಗಿ ಭತ್ಯೆ ಪಡೆಯಲು ಮುಂದಾದ 3.3 ಮಿಲಿಯನ್ ಮಂದಿ

ನಿರುದ್ಯೋಗಿ ಭತ್ಯೆ ಪಡೆಯಲು ಮುಂದಾದ 3.3 ಮಿಲಿಯನ್ ಮಂದಿ

ಕೊರೊನಾ ವೈರಸ್ ನಿಂದಾಗಿ ಅಮೇರಿಕಾದ ಆರ್ಥಿಕತೆ ಮೇಲೂ ಹೊಡೆತ ಬಿದ್ದಿದೆ. ಅಮೇರಿಕಾದಲ್ಲಿ ಸುಮಾರು 3.3 ಮಿಲಿಯನ್ ಮಂದಿ ನಿರುದ್ಯೋಗಿ ಭತ್ಯೆ ಪಡೆಯಲು ಮುಂದಾಗಿದ್ದಾರೆ.

ವಿಶ್ವದ ಅಂಕಿ-ಅಂಶ

ವಿಶ್ವದ ಅಂಕಿ-ಅಂಶ

ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 531,864

ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 24,073

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 383,849

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 19,357

ಸೋಂಕು ಪೀಡಿತ ಮೊದಲ ಐದು ದೇಶಗಳ ಅಂಕಿ-ಅಂಶ

ಸೋಂಕು ಪೀಡಿತ ಮೊದಲ ಐದು ದೇಶಗಳ ಅಂಕಿ-ಅಂಶ

ಯು.ಎಸ್.ಎ

ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 85,435

ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 1295

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 1868

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 2122

ಚೀನಾ

ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 81,340

ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 3292

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 74588

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 1034

ಇಟಲಿ

ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 80,589

ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 8215

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 10,361

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 3612

ಸ್ಪೇನ್

ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 57,786

ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 4365

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 7015

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 3166

ಜರ್ಮನಿ

ಇಲ್ಲಿಯವರೆಗಿನ ಒಟ್ಟು ಕೊರೊನಾ ಸೋಂಕು ಪೀಡಿತರು: 43,938

ಇಲ್ಲಿಯವರೆಗೂ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದವರು: 267

ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾದವರು: 5673

ಚಿಂತಾಜನಕ ಪರಿಸ್ಥಿತಿಯಲ್ಲಿ ಇರುವವರು: 23

English summary
USA Tops the world in Covid 19 Cases, Overtaking China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X