ಶಾಂತಿ ಮಾತುಕತೆ ಯಶಸ್ಸು ಕಂಡರೆ ಇರಾನ್ ಬಳಿ ಇರುವ ಅಮೆರಿಕ ಸೇನೆ ವಾಪಸ್ ಸಾಧ್ಯತೆ | USA And Iran
ಅಮೆರಿಕ ಮತ್ತು ಇರಾನ್ ಇದೀಗ ಶಾಂತಿ ಒಪ್ಪಂದಕ್ಕೆ ಕೂತಿದ್ದು, ಹೇಗಾದರೂ ಮಾಡಿ ಈಗ ಒಂದು ಹಂತಕ್ಕೆ ಬಂದು ನಿಲ್ಲಬೇಕು ಎಂದು ಒದ್ದಾಡುತ್ತಿದ್ದಾರೆ. ಒಂದು ಕಡೆ ಇರಾನ್ ದೇಶದ ವಿದೇಶಾಂಗ ಸಚಿವ ಹಾಗೂ ಅಮೆರಿಕ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸಚಿವರು ಬಂದು ಮಾತುಕತೆಗೆ ಕೂತಿದ್ದಾರೆ. ಕೆಲವೇ ಗಂಟೆಗಳಲ್ಲಿ ಮಾತುಕತೆ ಪೂರ್ಣಗೊಂಡು, ಅಮೆರಿಕ ಮತ್ತು ಇರಾನ್ ಪರಮಾಣು ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಎಲ್ಲಾ ಲಕ್ಷಣ ಈಗ ಗೋಚರಿಸುತ್ತಿದೆ. ಶಾಂತಿ ಮಾತುಕತೆ ಯಶಸ್ಸು ಕಂಡರೆ ಇರಾನ್ ಬಳಿ ಇರುವ ಅಮೆರಿಕ ಸೇನೆ ವಾಪಸ್ ಹೋಗುವ ಸಾಧ್ಯತೆ ಕೂಡ ದಟ್ಟವಾಗಿದೆ.
ಅಮೆರಿಕ ಬೃಹತ್ ಮಟ್ಟದಲ್ಲಿ ಇರಾನ್ ಬಳಿ ಸೇನೆ ನಿಯೋಜನೆ ಮಾಡಿದ್ದು, ಪ್ರಮುಖವಾಗಿ ಅಮೆರಿಕ ದೇಶದ ದೊಡ್ಡ ಶಕ್ತಿ ಆಗಿರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಯುದ್ಧ ನೌಕೆ ಇರಾನ್ ಸಮೀಪ ಓಡಾಡುತ್ತಿದೆ. ಹಾಗೇ ಫೋರ್ಡ್ ಎಂಬ ಮತ್ತೊಂದು ನೌಕೆ ಕೂಡ ಸಾಥ್ ನೀಡಿದ್ದು ಈ ಮೂಲಕ ಪ್ರಸ್ತುತ ವಾತಾವರಣ ಹಾಗೇ ಈ ಪ್ರದೇಶದಲ್ಲಿ ಇರುವ ಒಟ್ಟು 8 ವಾಯುನೆಲೆ ಬೆಂಬಲ ಮೂಲಕ, ಅಮೆರಿಕ ಸೇನೆ ಪ್ರತಿ ದಿನಕ್ಕೆ ಸುಮಾರು 800 ಯುದ್ಧ ವಿಮಾನಗಳ ಹಾರಾಟ ನಡೆಸುವ ಶಕ್ತಿ ಪಡೆದಿದೆ. ಇದರ ಜೊತೆಗೇ, ದೊಡ್ಡ ದೊಡ್ಡ ಯುದ್ಧ ವಿಮಾನಗಳು ಈಗಾಗಲೇ ಇರಾನ್ ಬಳಿಗೆ ಬಂದಿವೆ. ಈ ಎಲ್ಲಾ ಒತ್ತಡಗಳ ನಡುವೆ ಇರಾನ್ ಮತ್ತು ಅಮೆರಿಕ ಚರ್ಚೆ ಶುರು ಮಾಡಿದ್ದು, ಶಾಂತಿ ಒಪ್ಫಂದ ನಡೆದು ಅಮೆರಿಕದ ಸೇನೆ ವಾಪಸ್ ಹೋಗುವ ನಿರೀಕ್ಷೆ ಮಧ್ಯಪ್ರಾಚ್ಯ ಜನರಲ್ಲಿ ಮೂಡಿದೆ.

ಬೃಹತ್ ಸೇನೆ ಸಿದ್ಧಗೊಳಿಸಿದೆ ಅಮೆರಿಕ
ಅಮೆರಿಕ ಸೇನೆಯ ಕುರಿತು ಇರಾನ್‌ಗೆ ಭಯ ಮೂಡಲು ಮತ್ತೊಂದು ಪ್ರಮುಖ ಕಾರಣ ಸೇನಾ ಶಕ್ತಿ. ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ ಸೇನೆಯ ಸುಮಾರು 40,000 ಸೈನಿಕರು ನೆಲೆಸಿದ್ದಾರೆ. ಗಲ್ಫ್ ಪ್ರದೇಶವು ಅಮೆರಿಕ ಸೆಂಟ್ರಲ್ ಕಮಾಂಡ್ ವ್ಯಾಪ್ತಿಗೆ ಬರುತ್ತೆ. ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್, ಓಮನ್, ಖತಾರ್ ಸೇರಿ ಹಲವು ದೇಶಗಳಲ್ಲಿ ಅಮೆರಿಕ ತನ್ನ ಸೇನಾ ನೆಲೆ ಹೊಂದಿದೆ. ಇಲ್ಲಿ ಎಲ್ಲಾ ಲೆಕ್ಕ ಹಾಕಿದರೆ ಸುಮಾರು 40,000 ಅಮೆರಿಕ ಸೈನಿಕರು ಇದ್ದಾರೆ. ಈ ಕಾರಣದಿಂದ, ಇರಾನ್ ವಿರುದ್ಧ ಯುದ್ಧ ಆರಂಭವಾದ್ರೆ ತಕ್ಷಣ ಅಷ್ಟೂ ಸೈನಿಕರನ್ನು ಯುದ್ಧಕ್ಕೆ ಬಳಸಿಕೊಳ್ಳಲು ಕೂಡ ಅಮೆರಿಕ ಪ್ಲಾನ್ ಮಾಡಿದೆ ಎನ್ನಲಾಗಿದೆ. ಈ ಎಲ್ಲಾ ವಿಚಾರಗಳನ್ನು ಲೆಕ್ಕಹಾಕಿ ನೋಡುವುದಾದರೆ ಶಾಂತಿ ಮಾತುಕತೆ ಮಾತ್ರವೇ ಪರಿಸ್ಥಿತಿ ತಣ್ಣಗೆ ಮಾಡಲು ಸಾಧ್ಯ.












Click it and Unblock the Notifications