ಇರಾನ್ ಮತ್ತು ಅಮೆರಿಕ ಪರಮಾಣು ಶಾಂತಿ ಒಪ್ಪಂದ ಹಿನ್ನೆಲೆ ಮಹತ್ವದ ಸಭೆ ಆರಂಭ | USA And Iran
ಇರಾನ್ ಬದುಕಬೇಕು ಅಂದ್ರೆ ತಕ್ಷಣಕ್ಕೆ ಅಮೆರಿಕ ಜೊತೆಗೆ ಒಪ್ಪಂದ ಮಾಡಿಕೊಳ್ಳಬೇಕು, ಇಲ್ಲವಾದರೆ ಯಾವಾಗ ಯುದ್ಧ ನಡೆದು ಹೋಗುತ್ತೋ ಅನ್ನೋದು ಕಾಡುತ್ತಿದೆ. ಹೀಗಿದ್ದಾಗ ಕೂಡಲೇ ಪರಮಾಣು ಶಾಂತಿ ಮಾತುಕತೆ ನಡೆಸಬೇಕು ಅಂತಾ ಒಮಾನ್ ದೇಶ ಮುಂದೆ ಬಂದಿದ್ದು, ದಿಢೀರ್ 3ನೇ ಸುತ್ತಿನಲ್ಲಿ ಸ್ವಿಝರ್ಲ್ಯಾಂಡ್‌ನ ಜಿನೇವಾದಲ್ಲಿ ಅಮೆರಿಕ & ಇರಾನ್ ನಡುವೆ ಇದೀಗ ಶಾಂತಿ ಮಾತುಕತೆ ಆರಂಭ ಆಗಿದೆ. ಈ ಬಾರಿ ಹೇಗಾದರೂ ಮಾಡಿ ಒಪ್ಫಂದ ಅಂತಿಮ ರೂಪಕ್ಕೆ ತಂದು, ಶಾಂತಿ ಮಾತುಕತೆಯ ಪೂರ್ಣಗೊಳಿಸಬೇಕು ಎಂದು ಒಮಾನ್ ಒದ್ದಾಡುತ್ತಿದೆ. ಈಗಿನ ಪರಿಸ್ಥಿತಿ ನೋಡಿದರೆ ಅದು ಸಕ್ಸಸ್ ಆಗುವ ಲಕ್ಷಣ ಕಾಣಿಸುತ್ತಿದೆ ಕೂಡ.
ಜಗಳ ಶುರು ಆಗಿದ್ದೇ ಇರಾನ್ ಪರಮಾಣು ಸ್ಥಾವರಗಳ ಕಾರಣಕ್ಕೆ, ಒಂದು ಕಡೆ ಇರಾನ್ ತನ್ನ ಬಳಿ ಪರಮಾಣು ಅಸ್ತ್ರಗಳು ಇಲ್ಲ ಮತ್ತು ತಾನು ಪರಮಾಣು ಅಸ್ತ್ರಗಳನ್ನು ತಯಾರಿಸುತ್ತಿಲ್ಲ ಎಂಬ ವಾದ ಮಾಡುತ್ತಿದೆ. ಆದರೆ ಅಮೆರಿಕ ಹಾಗೂ ಇಸ್ರೇಲ್ ಮಾಡುತ್ತಿರುವ ವಾದದ ಪ್ರಕಾರ ಇರಾನ್ ಅಣ್ವಸ್ತ್ರ ತಯಾರಿಸಲು ಮುಂದಾಗಿದ್ದು, ಇದಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆಯಂತೆ. ಹೀಗಾಗಿ ಕಳೆದ ಕೆಲವು ತಿಂಗಳಿಂದ ಅಮೆರಿಕ ಮತ್ತು ಇರಾನ್ ನಡುವೆ ತಿಕ್ಕಾಟ ತುಂಬಾನೇ ಜೋರಾಗಿತ್ತು. ಈ ಹಿನ್ನೆಲೆ, ಬಂದು ನಮ್ಮ ಜೊತೆ ಒಪ್ಪಂದ ಮಾಡಿಕೊಳ್ಳಿ ಎಂದು ಅಮೆರಿಕ ವಾರ್ನಿಂಗ್ ಕೂಡ ಕೊಟ್ಟು ತನ್ನ ಸೇನೆಯನ್ನ ಇರಾನ್ ಬಳಿ ಕೂಡ ಕಳಿಸಿಕೊಟ್ಟಿದೆ. ಇಂತಹ ಸ್ಥಿತಿಯಲ್ಲಿ ಇರಾನ್ & ಅಮೆರಿಕದ ನಡುವೆ ಶಾಂತಿ ಮಾತುಕತೆ ನಡೆಯುತ್ತಿದ್ದು, ಒಪ್ಪಂದದ ನಿರೀಕ್ಷೆ ಮೂಡಿದೆ.

ಮಧ್ಯಪ್ರಾಚ್ಯ ಭಾಗದಲ್ಲಿ ನೆಮ್ಮದಿ ನೆಲೆಸುತ್ತಾ?
ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಲು ಜಿನೇವಾದಲ್ಲಿ ಮಾತುಕತೆಯು ನಡೆಯುತ್ತಿದೆ. ಒಂದೆಡೆ ಚರ್ಚೆ ನಡೆಯುತ್ತಿದ್ದರೆ ಇನ್ನೊಂದೆಡೆ ಇರಾನ್ ಯುದ್ಧ ಸಿದ್ಧತೆ ಕೂಡ ಮಾಡಿಕೊಳ್ಳುತ್ತಿದೆ. ಯಾವುದೇ ರೀತಿಯ ಸೇನಾ ದಾಳಿಗೆ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳುತ್ತಿದೆ ಇರಾನ್. ಇಷ್ಟೆಲ್ಲಾ ಒತ್ತಡಗಳ ನಡುವೆ ಹಾಗೂ ಪ್ರತಿಷ್ಠೆಯ ತಿಕ್ಕಾಟದಲ್ಲಿ ಇರಾನ್ & ಅಮೆರಿಕ ನಡುವಿನ ಅಣ್ವಸ್ತ್ರ ಶಾಂತಿ ಚರ್ಚೆ, ಅಂತಿಮ ಹಂತಕ್ಕೆ ಬಂದು ನಿಂತಿದೆ. ಇದು ಯಶಸ್ಸು ಕಂಡರೆ ಮಧ್ಯಪ್ರಾಚ್ಯ ಭಾಗದಲ್ಲಿ ನೆಮ್ಮದಿಯು ನೆಲೆಸುವ ನಿರೀಕ್ಷೆ ಕೂಡ ಮೂಡಿದೆ. ಅಲ್ಲದೆ ಇದರಿಂದ ಇರಾನ್‌ಗೆ ಕೂಡ ದೊಡ್ಡ ಲಾಭವೇ ಆಗಲಿದೆ ಎಂಬುದು ತಜ್ಞರ ವಾದ.
ಇರಾನ್‌ಗೆ ಭರ್ಜರಿ ಲಾಭ ನಿರೀಕ್ಷೆ
ಈಗಾಗಲೇ ಅಮೆರಿಕ ಹೇರಿಕೆ ಮಾಡಿರುವ ಹಲವು ನಿಷೇಧಾಜ್ಞೆ ಪರಿಣಾಮ ಇರಾನ್ ಆರ್ಥಿಕವಾಗಿ ಈ ಸಮಯದಲ್ಲಿ ನರಳಾಡಿ ಹೋಗಿದೆ. ತನ್ನ ಬಳಿ ಇರುವ ತೈಲವನ್ನು ಮುಕ್ತ ಮಾರುಕಟ್ಟೆಗೆ ಸಾಗಿಸುವ ಶಕ್ತಿ ಕೂಡ ಇರಾನ್ ಬಳಿ ಇಲ್ಲ. ಹೀಗಿದ್ದಾಗ ಅಮೆರಿಕ ಜೊತೆಗೆ ಪರಮಾಣು ಒಪ್ಪಂದ ಮಾಡಿದರೆ, ಆ ಮೂಲಕ ಆರ್ಥಿಕವಾಗಿ ಸ್ವಾತಂತ್ರ್ಯ ಸಿಗುವ ನಿರೀಕ್ಷೆಯಲ್ಲಿ ಇರಾನ್ ಇದೆ. ಹೀಗಾಗಿ ಇದು ಅಮೆರಿಕ & ಇರಾನ್ ಎರಡೂ ದೇಶಗಳಿಗೂ ನೆಮ್ಮದಿ ತರುವ ನಿರೀಕ್ಷೆ ಇದೆ.












Click it and Unblock the Notifications