Donald Trump: ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಅಮೆರಿಕ ವಾರ್ನಿಂಗ್, ಮಧ್ಯಪ್ರಾಚ್ಯ ಮತ್ತೆ ಧಗಧಗ?
ಅಮೆರಿಕ ಈಗ ಇರಾನ್ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿ, ಎಚ್ಚರಿಕೆಯ ಸಂದೇಶ ಕೂಡ ರವಾನಿಸಿದೆ. ಇರಾನ್ ಪರಮಾಣು ಕಾರ್ಯಕ್ರಮ ಕೈಗೊಂಡು, ಕ್ಷಿಪಣಿಗಳೂ ಸೇರಿದಂತೆ ಇದಕ್ಕೆಲ್ಲಾ ಬೇಕಾಗಿರುವ ಪೂರ್ವ ತಯಾರಿಯನ್ನು ಇರಾನ್ ಮಾಡುತ್ತಿದೆ ಎಂಬ ವರದಿ ಹರಿದಾಡಿತ್ತು. ಇದೇ ವಿಚಾರವಾಗಿ ಇಸ್ರೇಲ್ ಕೂಡ ಮತ್ತೊಮ್ಮೆ ಗುಡುಗಿತ್ತು. ಇಸ್ರೇಲ್ & ಇರಾನ್ ನಡುವೆ ಕೆಲ ದಿನಗಳ ಹಿಂದಷ್ಟೇ ಘೋರ ಯುದ್ಧ ನಡೆದಿತ್ತು. ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇರವಾಗಿ ಅಖಾಡ ಪ್ರವೇಶ ಮಾಡಿ, ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವೆ ಚರ್ಚೆ ನಡೆದಿದೆ. ಈ ಚರ್ಚೆ ಸಮಯದಲ್ಲಿ ಇರಾನ್ ಪರಮಾಣು ಕಾರ್ಯಕ್ರಮದ ಬಗ್ಗೆ ಪ್ರಸ್ತಾಪವಾಗಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಇದರಿಂದ ದೊಡ್ಡ ಆತಂಕ ಇದೆ ಎಂದು ಪಾಶ್ಚಿಮಾತ್ಯ ದೇಶಗಳು ಚರ್ಚೆ ಮಾಡುತ್ತಿವೆ. ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ, ಪ್ರಮುಖವಾಗಿ ಈ ರೀತಿಯ ಪ್ರಯತ್ನಗಳನ್ನು ಇರಾನ್ ಮಾಡಿದರೆ ಸರಿ ಇರೋದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಕೂಡ ಇದೀಗ ರವಾನಿಸಿದ್ದಾರೆ ಟ್ರಂಪ್.

ಎಚ್ಚರಿಕೆ ಸಂದೇಶ ನೀಡಿದ ಟ್ರಂಪ್!
ಇದೇ ರೀತಿಯಾಗಿ ಇರಾನ್ ಪರಮಾಣು ಬಾಂಬ್ ಸಂಬಂಧಿತ ಯೋಜನೆಗಳು ಹಾಗೂ ಮಿಲಿಟರಿ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರೆ ಸರಿ ಇರೋದಿಲ್ಲ. ಅಮೆರಿಕ ಆ ತಕ್ಷಣವೇ ದಾಳಿ ಮಾಡಲು ಸಿದ್ಧವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಕೊಟ್ಟು ಸೈಲೆಂಟ್ ಆಗಿ ಇರಲು ಇರಾನ್‌ಗೆ ಹೇಳಿದ್ದಾರೆ. ಫ್ಲೋರಿಡಾದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಡೊನಾಲ್ಡ್ ಟ್ರಂಪ್ ಅವರ ನಡುವೆ ಮಹತ್ವದ ಮಾತುಕತೆ ನಡೆಯಿತು. ಈ ಸಮಯದಲ್ಲೇ ಇರಾನ್ ವಿಚಾರ ಕೂಡ ಪ್ರಸ್ತಾಪವಾಗಿ, ಖಡಕ್ ಸಂದೇಶ ಕೊಟ್ಟಿದ್ದಾರೆ ಟ್ರಂಪ್.
ಇರಾನ್ ಮೇಲೆ ಕಣ್ಣಿಟ್ಟಿರುವ ಅಮೆರಿಕ!
ಈಗಾಗಲೇ ಒಂದು ಬಾರಿ ಇರಾನ್ ಮತ್ತು ಇಸ್ರೇಲ್ ನಡುವೆ ಘೋರವಾದ ಯುದ್ಧ ನಡೆದಿದ್ದು, ಈ ಯುದ್ಧ ಇಡೀ ಜಗತ್ತಿನಲ್ಲಿ ಮತ್ತೊಂದು ಪರಮಾಣು ಯುದ್ಧದ ಭಯ ಹುಟ್ಟಿಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಈ ಯುದ್ಧದಲ್ಲಿ ಮಧ್ಯಪ್ರವೇಶ ಮಾಡಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದರು. ಕೊನೆಗೂ ನಾನೇ ಯುದ್ಧ ನಿಲ್ಲಿಸಿದ್ದು ಎಂದು ಟ್ರಂಪ್ ಹೇಳಿದ್ದರು. ಆದರೆ ಹೀಗೆ ಒಂದು ಬಾರಿ ಯುದ್ಧ ಮುಗಿದ ನಂತರ ಇರಾನ್ ಮತ್ತೆ ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ನಂಬಿದ್ದೇನೆ ಅಂತಾ ಟ್ರಂಪ್ ಹೇಳಿದ್ದಾರೆ.
ಅಲ್ಲದೆ ಇರಾನ್ ನಡೆಸುತ್ತಿರುವ ಪರೀಕ್ಷೆಗಳು, ಕೈಗೊಂಡಿರುವ ಯೋಜನೆಗಳ ಮೇಲೆಯೂ ಸದಾ ಕಣ್ಣಿಟ್ಟಿದ್ದೇವೆ ಎಂಬ ಸಂದೇಶವನ್ನು ಕೂಡ ಇದೀಗ ಟ್ರಂಪ್ ರವಾನಿಸಿದ್ದಾರೆ. ಹೀಗೆಲ್ಲಾ ಇಬ್ಬರ ನಡುವಿನ ತಿಕ್ಕಾಟ ಮತ್ತೊಮ್ಮೆ ಮಧ್ಯಪ್ರಾಚ್ಯದ ಮೇಲೆ ಪ್ರಭಾವ ಬೀರಲಿದೆಯಾ? ಎಂಬ ಪ್ರಶ್ನೆಯು ಕೂಡ ಮೂಡುವಂತೆ ಮಾಡಿದೆ. ಇರಾನ್ ಮತ್ತೆ ನಿರ್ಮಿಸಲು ಪ್ರಯತ್ನಿಸುತ್ತಿದೆ ಎಂದು ಈಗ ನಾನು ಕೇಳಿದ್ದೇನೆ, ಹಾಗಿದ್ದರೆ ನಾವು ಕೆಡವಬೇಕಾಗುತ್ತದೆ... ಎಂದು ಪರಮಾಣು ಸ್ಥಾವರಗಳ ವಿಚಾರ ಪ್ರಸ್ತಾಪ ಮಾಡಿದ್ದಾರೆ ಟ್ರಂಪ್.












Click it and Unblock the Notifications