US: ವಿಮಾನದೊಳಗೆ ತುರ್ತು ಬಾಗಿಲು ತೆರೆದು, ಸಿಬ್ಬಂದಿ ಮೇಲೆ ದಾಳಿ ಮಾಡಿದ ಪ್ರಯಾಣಿಕ
ವಿಮಾನದೊಳಗೆ ತುರ್ತು ಬಾಗಿಲು ತೆರೆದು, ಸಿಬ್ಬಂದಿ ಮೇಲೆ ದಾಳಿ ಮಾಡಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅಮೆರಿಕದಲ್ಲಿ 33 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ವ್ಯಕ್ತಿ ಯುನೈಟೆಡ್ ಏರ್‌ಲೈನ್ಸ್ ವಿಮಾನದ ತುರ್ತು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಜೊತೆಗೆ ಗಗನಸಖಿಯ ಗಂಟಲಿಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ. ಲಾಸ್ ಏಂಜಲೀಸ್ ಮತ್ತು ಬೋಸ್ಟನ್ ನಡುವಿನ ವಿಮಾನದಲ್ಲಿ ಈ ಘಟನೆ ನಡೆದಿದೆ.
ಲಿಯೋಮಿನ್‌ಸ್ಟರ್‌ನ ವ್ಯಕ್ತಿಯೊಬ್ಬನನ್ನು ವಿಮಾನದೊಳಗೆ ತುರ್ತು ಬಾಗಿಲು ತೆರೆದು ಗಗನಸಖಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು US ನ್ಯಾಯಾಂಗ ಇಲಾಖೆ ಮಾಹಿತಿ ನೀಡಿದೆ.

ಆರೋಪಿಯ ಹೆಸರು ಫ್ರಾನ್ಸಿಸ್ಕೊ ಸೆವೆರೊ ಟೊರೆಸ್. ಹಾರಾಟಕ್ಕೆ ಅಡ್ಡಿಪಡಿಸಿದ ಮತ್ತು ವಿಮಾನ ಸಿಬ್ಬಂದಿ ಮತ್ತು ಪರಿಚಾರಕರ ವಿರುದ್ಧ ಅಪಾಯಕಾರಿ ಆಯುಧವನ್ನು ಬಳಸಿದ ಆರೋಪವನ್ನು ಈತ ಹೊಂದಿದ್ದಾರೆ. ಭಾನುವಾರ ಸಂಜೆ ಬೋಸ್ಟನ್ ಲೋಗನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೊರೆಸ್ ಅವರನ್ನು ಬಂಧಿಸಲಾಯಿತು. ಮಾರ್ಚ್ 9 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಟೊರೆಸ್ ಲಾಸ್ ಏಂಜಲೀಸ್ ನಿಂದ ಬೋಸ್ಟನ್ ಗೆ ತೆರಳಲು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಲ್ಯಾಂಡಿಂಗ್‌ಗೆ ಸುಮಾರು 45 ನಿಮಿಷಗಳ ಮೊದಲು ವಿಮಾನ ಸಿಬ್ಬಂದಿ, ಕಾಕ್‌ಪಿಟ್‌ನಲ್ಲಿ ಮೊದಲ ದರ್ಜೆ ಮತ್ತು ಕೋಚ್ ವಿಭಾಗಗಳ ನಡುವಿನ ಸ್ಟಾರ್‌ಬೋರ್ಡ್ ಬದಿಯ ಬಾಗಿಲು ಅನ್‌ಲಾಕ್ ಆಗಿದೆ ಎಂಬ ಎಚ್ಚರಿಕೆಯನ್ನು ಸ್ವೀಕರಿಸಿದರು. ತನಿಖೆಯ ಸಮಯದಲ್ಲಿ, ಫ್ಲೈಟ್ ಪ್ರಯಾಣಿಕನೊಬ್ಬ ಬಾಗಿಲಿನ ಲಾಕ್ ಹ್ಯಾಂಡಲ್ ಅನ್ನು ತೆಗೆದುಹಾಕಿರುವುದನ್ನು ಗಮನಿಸಿದರು. ಈ ಬಗ್ಗೆ ಗಗನಸಖಿ ವಿಮಾನ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಟೊರೆಸ್ ಎಂಬ ಪ್ರಯಾಣಿಕರು ಬಾಗಿಲಿನ ಬಳಿಯೇ ಇದ್ದು ಅದನ್ನು ತೆರೆಯಲು ಪ್ರಯತ್ನಿಸಿದ್ದಾರೆ ಎಂದು ಗಗನಸಖಿ ತಿಳಿಸಿದ್ದಾರೆ.

ಇದಾದ ನಂತರ ಫ್ಲೈಟ್ ಸಿಬ್ಬಂದಿ ಟೊರೆಸ್ ಗೆ ಈ ಬಗ್ಗೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಟೊರೆಸ್ ಮುರಿದ ಚಮಚದಿಂದ ಗಗನಸಖಿಯ ಗಂಟಲಿಗೆ ಹೊಡೆದಿದ್ದಾರೆ. ಇದಾದ ಬಳಿಕ ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರು ಪರಿಸ್ಥಿತಿಯನ್ನು ನಿಭಾಯಿಸಿದರು. ವಿಮಾನವನ್ನು ಬೋಸ್ಟನ್‌ನಲ್ಲಿ ಇಳಿಸಿದ ನಂತರ ಟೊರೆಸ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ತುರ್ತು ಬಾಗಿಲಿನ ಹ್ಯಾಂಡಲ್ ಬಗ್ಗೆ ಟೊರೆಸ್ ಸಹ-ಪ್ರಯಾಣಿಕನನ್ನು ಕೇಳಿದರು ಎಂದು ವಿಮಾನದಲ್ಲಿದ್ದ ಪ್ರಯಾಣಿಕರು ಆರೋಪಿಸಿದ್ದಾರೆ.
ಫ್ಲೈಟ್‌ನ ಸಿಬ್ಬಂದಿಗಳು ವಿಮಾನದೊಳಗೆ ಅಗತ್ಯ ಸೂಚನೆಗಳನ್ನು ನೀಡುತ್ತಿದ್ದಾಗ, ಅವರು ತುರ್ತು ಬಾಗಿಲಿನ ಬಗ್ಗೆ ಕೇಳಿದರು. ಈ ಪ್ರಕರಣದಲ್ಲಿ, ಟೊರೆಸ್‌ಗೆ 5 ವರ್ಷಗಳ ಶಿಕ್ಷೆ ಮತ್ತು $ 2.5 ಮಿಲಿಯನ್ ದಂಡ ವಿಧಿಸಬಹುದು. ಈ ಬಗ್ಗೆ ಮಾತನಾಡಿದ ಗಗನಸಖಿ, 'ವಿಮಾನದಲ್ಲಿ ಅಪಾಯವನ್ನು ಅನುಭವಿಸಿದೆ. ಇದರಿಂದ ಕ್ಯಾಪ್ಟನ್ ವಿಮಾನವನ್ನು ಆದಷ್ಟು ಬೇಗ ಇಳಿಸಬೇಕಾಯಿತು' ಎಂದು ಗಗನಸಖಿ ನ್ಯಾಯಾಲಯಕ್ಕೆ ತಿಳಿಸಿದರು. ಘಟನೆಯ ದೃಶ್ಯ ವಿಮಾನದಲ್ಲಿದ್ದ ಕ್ಯಾಮಾರದಲ್ಲಿ ಸೆರೆಯಾಗಿದೆ.
ಭಾರತದಲ್ಲೂ ವಿಮಾನದಲ್ಲಿ ಹಲ್ಲೆ ಪ್ರಕರಣಗಳು ದಾಖಲು
ವಿಮಾನದಲ್ಲಿ ಹಲ್ಲೆ ಪ್ರಕರಣಗಳು ಭಾರತದಲ್ಲೂ ಹೆಚ್ಚಾಗಿ ಕಂಡುಬಂದಿವೆ. ಮಾತ್ರವಲ್ಲದೆ ಮಹಿಳಾ ಪ್ರಯಾಣಿಕರ ಮೇಲೆ ಸಹಪ್ರಯಾಣಿಕರು ಮೂತ್ರ ವಿಸರ್ಜನೆ ಮಾಡಿದ ಘಟನೆಗಳು ವರದಿಯಾಗಿವೆ.












Click it and Unblock the Notifications