ಯುಎಸ್ ನಲ್ಲಿ ಭಾರತೀಯ ವಿಜ್ಞಾನಿಗೆ ವಿಶಿಷ್ಟ ಗೌರವ
ವಾಷಿಂಗ್ಟನ್, ಜು.1: ಪ್ರಾಣಿ ಸಂಕುಲದ ಸಮಗ್ರ ಮಾಹಿತಿ ಸಂಶೋಧನೆಯಲ್ಲಿ ಅದ್ವಿತೀಯ ಸಾಧನೆ ಮಾಡಿ, ಜೈವಿಕ ಪ್ರವರ್ತಕರೆನಿಸಿರುವ ಭಾರತೀಯ ಮೂಲದ ವಿಜ್ಞಾನಿ ಅಖೌರಿ ಸಿನ್ಹಾ ಅವರ ಗೌರವಾರ್ಥ ಅಂಟಾರ್ಕ್ಟಿಕಾದಲ್ಲಿರುವ ಸುಂದರ ಪರ್ವತವೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಅಂಟಾರ್ಕ್ಟಿಕಾ ಈ ಪರ್ವತವನ್ನು ಜೈವಿಕ ವಿಜ್ಞಾನಿ ಅಖೌರಿ ಸಿನ್ಹಾ ಅವರ ಹೆಸರಿನಲ್ಲಿ ಕರೆಯಲಾಗುತ್ತದೆ ಎಂದು ಯುಎಸ್ ಸರ್ಕಾರದ ಮೂಲಗಳು ಪ್ರಕಟಿಸಿದೆ. ಮಿನ್ನೆಸೊಟ ವಿಶ್ವವಿದ್ಯಾನಿಲಯದಲ್ಲಿ ಅನುವಂಶಿವಾಹಿ (ತಳಿ), ಜೀವಕಣ-ಜೀವಶಾಸ್ತ್ರ ಮತ್ತು ಅಭಿವೃದ್ಧಿ ವಿಭಾಗದ ಪ್ರೊಫೆಸರ್ ಆಗಿದ್ದ ಸಿನ್ಹಾ ಅವರು 1971-72ರಲ್ಲಿ ಕೈಗೊಂಡ ಸಾಧನೆಯನ್ನು ಅಮೆರಿಕದ ಭೂ ವೈಜ್ಞಾನಿಕ ಸರ್ವೆ ಇಲಾಖೆ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಅಂಟಾಕ್ಟಿಕಾದ ಪರ್ವತಕ್ಕೆ 'ಮೌಂಟೇನ್ ಸಿನ್ಹಾ' ಎಂದು ನಾಮಕರಣ ಮಾಡಲಾಗಿದೆ.
ಸಿನ್ಹಾ ಅವರು 1972-74ರಲ್ಲಿ ಇಲ್ಲಿನ ಬೆಲಿಂಗ್‌ಶೌಸೇನ್(Bellingshausen) ಮತ್ತು ಆಮುಂಡ್‌ಸೇನ್(Amundsen) ಸಾಗರ ಪ್ರದೇಶಗಳಲ್ಲಿ ಸೀಲ್ ಪ್ರಾಣಿ, ತಿಮಿಂಗಿಲಗಳು ಹಾಗೂ ಹಲವು ಬಗೆಯ ಪಕ್ಷಿಗಳ ವಿಭಾಗೀಯ ಗಣತಿ ನಡೆಸಿದ ತಂಡದಲ್ಲಿ ಸಿನ್ಹಾ ಪ್ರಮುಖ ಪಾತ್ರ ವಹಿಸಿದ್ದರು.

ಮೌಂಟೈನ್ ಸಿನ್ಹಾ ಎಂಬ ಹೆಸರನ್ನು ಸಲಹಾ ಸಮಿತಿ(Advisory Committee on Antarctic Names (US-ACAN) ) ಶಿಫಾರಸು ಮಾಡಿತ್ತು. 990 ಮೀಟರ್ ಎತ್ತರದ ಈ ಸುಂದರ ಪರ್ವತವು ಮೆಕ್‌ಡೊನಾಲ್ಡ್ ಪರ್ವತಶ್ರೇಣಿಯ ದಕ್ಷಿಣ ಭಾಗದಲ್ಲಿದ್ದು, ಉತ್ತರಕ್ಕೆ ಮೇರೀ ಬೈರ್ಡ್‌ಲ್ಯಾಂಡ್‌ಗೆ ಹೊಂದಿಕೊಂಡಿದೆ.
ಸಿನ್ಹಾ ಪರ್ವತವನ್ನು ಗೂಗಲ್ ಕಾಮ್ ಅಥವಾ ಬಿಂಗ್ ಕಾಂನಲ್ಲಿ ಯಾರಾದರೂ ವೀಕ್ಷಿಸಬಹುದಾಗಿದೆ. ಸುದ್ದಿ ಸಂಸ್ಥೆ ನಡೆಸಿದ ಸಂದರ್ಶನದಲ್ಲಿ ಕೂಡ ಸಿನ್ಹಾ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ಅಮೆರಿಕಕ್ಕೆ ಬರುವ ಮೊದಲು ಭಾರತದ ಜಾರ್ಖಂಡ್ ನ ರಾಂಚಿಯಲ್ಲಿ 1956 ರಿಂದ 1961 ರ ತನಕ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿದ್ದ ಸಿನ್ಹಾ ಅವರು 22 ವಾರಗಳ ಕಾಲ ಅಂಟಾರ್ಕಿಕಾದಲ್ಲಿ ತಮ್ಮ ಸಂಶೋಧನೆ ನಡೆಸಿದರು. ಈಗಲೂ ಭಾರತಕ್ಕೆ ಬಂದಾಗ ತಮ್ಮ ಪೂರ್ವಿಕ ಮನೆ ಇರುವ ಚುರಮ್ ಪುರ್ ಗೆ ಭೇಟಿ ನೀಡುತ್ತೇನೆ ಎಂದು ಸಿನ್ಹಾ ಹೇಳಿದ್ದಾರೆ. [ಪ್ರೊ.ಸಿನ್ಹಾ ಬಗ್ಗೆ ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ]
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications