ಅಮೆರಿಕಾ ಮಿಲಿಟರಿ ವಿಮಾನ ಪತನ, 16 ಜನ ಸಾವು
ಅಮೆರಿಕಾ, ಜುಲೈ 11: ಅಮೆರಿಕಾದ ನೌಕಾ ಸೇನೆಗೆ ಸೇರಿದ ವಿಮಾನ ಇಲ್ಲಿನ ಮಿಸಿಸಿಪ್ಪಿ ರಾಜ್ಯದಲ್ಲಿ ಪತನವಾಗಿದೆ. ಈ ದುರಂತದಲ್ಲಿ 16 ಜನ ಅಸುನೀಗಿದ್ದಾರೆ.
'ವಿಮಾನದಲ್ಲಿ 16 ಜನರಿದ್ದರು. ಇವರಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಎಲ್ಲಾ 16 ಜನರೂ ಸಾವನ್ನಪ್ಪಿದ್ದಾರೆ,' ಎಂದು ನೌಕಾ ಸೇನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಸಿ-130 ಸಂಖ್ಯೆಯ ವಿಮಾನ ಮಿಸಿಸಿಪ್ಪಿಯ ಹೊರ ಭಾಗದಲ್ಲಿ ಸೋಮವಾರ ಸಂಜೆ ಪತನವಾಗಿದೆ. ಬೆನ್ನಿಗೆ ಬೆಂಕಿ ಹತ್ತಿಕೊಂಡಿದ್ದು ವಿಮಾನ ಸ್ಪೋಟಗೊಂಡಿದೆ.
ಆಕಾಶದಲ್ಲಿ ಇಂಧನ ತುಂಬಿಸಲು ಈ ವಿಮಾನವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.












Click it and Unblock the Notifications