ಇರಾನ್ ವಿರುದ್ಧ ಯಾವುದೇ ಕ್ಷಣದಲ್ಲಿ ಅಮೆರಿಕ ಸೇನೆಯಿಂದ ದಿಢೀರ್ ದಾಳಿ ಸಾಧ್ಯತೆ | US Military

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಡಕ್ ನಿರ್ಧಾರ ಕೈಗೊಂಡು, ತಮ್ಮ ಶತ್ರು ವಿರುದ್ಧ ಘೋರ ಕಾರ್ಯಾಚರಣೆಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಹೇಗಾದರೂ ಮಾಡಿ ಇರಾನ್ ದಾರಿಗೆ ಬಂದು ಅಮೆರಿಕ ಜೊತೆಗೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕು ಎಂಬುದು ಡೊನಾಲ್ಡ್ ಟ್ರಂಪ್ ಅವರ ಪ್ಲಾನ್. ಆದರೆ ಪರಮಾಣು ಒಪ್ಪಂದಕ್ಕೆ ಇರಾನ್ ಒಪ್ಪಿಕೊಳ್ಳದೆ ಕಿರಿಕ್ ಮಾಡುತ್ತಿದೆ ಎಂಬ ಕಾರಣಕ್ಕೆ ಇದೀಗ ಮತ್ತಷ್ಟು ಫೈಟಿಂಗ್ ಶುರುವಾಗಿದ್ದು, ಅಮೆರಿಕ ಹಾಗೂ ಇರಾನ್ ನಡುವೆ ಯುದ್ಧ ಬಹುತೇಕ ಫಿಕ್ಸ್ ಆಗುತ್ತಿದೆ. ಇಂತಹ ಸಮಯದಲ್ಲೇ ಇರಾನ್ ಬಳಿ ಈಗಾಗಲೇ ತಲುಪಿರುವ ಯುದ್ಧ ನೌಕೆಗಳು & ಯುದ್ಧ ವಿಮಾನಗಳು ಟ್ರಂಪ್ ಅವರ ಆದೇಶಕ್ಕೆ ಕಾಯುತ್ತಿವೆ.

ಅಮೆರಿಕದ ಬೃಹತ್ ಯುದ್ಧ ನೌಕೆ ಹಾಗೂ ಯುದ್ಧ ವಿಮಾನ ಹೊತ್ತೊಯ್ಯುವ ಸಾಮರ್ಥ್ಯ ಇರುವ ಯುಎಸ್‌ಎಸ್ ಅಬ್ರಹಾಂ ಲಿಂಕನ್ ಕಳೆದ ಹಲವು ದಿನಗಳಿಂದ ಇರಾನ್ ಗಡಿಯಲ್ಲಿ ಬೀಡು ಬಿಟ್ಟಿದೆ. ವಾಷಿಂಗ್ಟನ್ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟು ಇರಾನ್‌ಗೆ ವಾರ್ನಿಂಗ್ ಕೊಡಲು ಸಜ್ಜಾಗಿದೆ. ಈ ಪೈಕಿ ಅಮೆರಿಕ ಸೇನೆಯ ಬಳಿ ಇರುವ ಜಗತ್ತಿನ ಅತಿದೊಡ್ಡ ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್. ಫೋರ್ಡ್ ಕೂಡ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಈ ನೌಕೆ, ಯುಎಸ್‌ಎಸ್ ಅಬ್ರಹಾಂ ಲಿಂಕನ್ ರೀತಿಯಲ್ಲೇ ಅತ್ಯಂತ ಪ್ರಬಲ ಹಾಗೂ ಹಲವು ಆಧುನಿಕ ತಂತ್ರಜ್ಞಾನ ಒಳಗೊಂಡಿದೆ. ಜೆರಾಲ್ಡ್ ಆರ್. ಫೋರ್ಡ್ ಇನ್ನೇನು ಕೆಲವೇ ಗಂಟೆಗಳಲ್ಲಿ ಇರಾನ್ ಬಳಿ ಬರುವ ನಿರೀಕ್ಷೆ ಇದ್ದು, ಯುದ್ಧ ಜೋರಾಗುವ ಭೀತಿ ಮಧ್ಯಪ್ರಾಚ್ಯ ಭಾಗದಲ್ಲಿ ಆವರಿಸಿದೆ.

US Military

ಇರಾನ್ ಕಡೆಯಿಂದಲೂ ಪ್ರತಿದಾಳಿ ಸಾಧ್ಯತೆ

ಈಗಾಗಲೇ ಹಲವು ಬಾರಿ ಇರಾನ್ ನೀಡಿರುವ ಎಚ್ಚರಿಕೆ ಪ್ರಕಾರ, ಅಕಸ್ಮಾತ್ ಅಮೆರಿಕ ದಾಳಿ ಮಾಡಿದರೆ ಆ ತಕ್ಷಣ ತಾನು ಕೂಡ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ. ಮತ್ತೊಂದು ಕಡೆ, ಹೀಗೆಲ್ಲಾ ಎರಡೂ ದೇಶಗಳ ನಡುವೆ ವೈರತ್ವ ಬೆಳೆದಿರುವುದು ಜಾಗತಿಕವಾಗಿ ಕೂಡ ಭಯ ಹುಟ್ಟುಹಾಕಿದೆ. ಇಬ್ಬರ ಮಧ್ಯೆ ಯುದ್ಧ ಜೋರಾಗಿ ವಿನಾಶಕಾರಿ ಅಸ್ತ್ರಗಳನ್ನು ಬಳಸಿದರೆ ಅದರ ಪರಿಣಾಮ ಏನು? ಎಂಬ ಚಿಂತೆಯು ಕೂಡ ಶುರುವಾಗಿದ್ದು, ಮಧ್ಯಪ್ರಾಚ್ಯ ಭಾಗದ ದೇಶಗಳು ಈಗಾಗಲೇ ಶಾಂತಿ ಒಪ್ಪಂದಕ್ಕೆ ಬೇಕಾಗಿರುವ ಎಲ್ಲಾ ಪ್ರಯತ್ನ ಮಾಡಿವೆ. ಆದರೂ ಅದು ಫಲಕಾರಿಯಾಗದೆ ಮತ್ತೊಮ್ಮೆ ಯುದ್ಧ ನಡೆಯುವ ಭೀತಿ ಇದೀಗ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+