ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಯುಎಸ್‌ ಗನ್ ಅಂಗಡಿ ಮಾಲೀಕ ಬಿಚ್ಚಿಟ್ಟ ಆತಂಕಕಾರಿ ವಿಷಯ

|
Google Oneindia Kannada News

ವಾಷಿಂಗ್ಟನ್, ಮಾರ್ಚ್ 16: ಕೊರೊನಾ ಭೀತಿ ಸದ್ಯಕ್ಕೆ ಕಡಿಮೆಯಾಗುವ ಲಕ್ಷಣವೇ ಕಾಣುತ್ತಿಲ್ಲ. ಈ ಮಾರಣಾಂತಿಕ ವೈರಸ್‌ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಸುಮಾರು 170ಕ್ಕೂ ಅಧಿಕ ದೇಶಗಳು ಕೊರೊನಾ ದಾಳಿಗೆ ಸಿಲುಕಿಕೊಂಡಿದ್ದು, ಇದರಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ.

ಈ ಮಧ್ಯೆ ಕೊರೊನಾ ವೈರಸ್ ಹುಟ್ಟಿಗೆ ಕಾರಣವಾದ ಚೀನಾ ದೇಶದಲ್ಲಿ ಮೇಲೆ ಉಳಿದ ದೇಶದ ಪ್ರಜೆಗಳು ಕೋಪದಿಂದ ನೋಡುವಂತಾಗಿದೆ. ಚೀನಾ ಜೊತೆಗೆ ಅಕ್ಕಪಕ್ಕದಲ್ಲಿರುವ ಏಷ್ಯಾ ರಾಷ್ಟ್ರಗಳ ಮೇಲೂ ಯೂರೋಪ್ ದೇಶಗಳು ಕೆಂಗಣ್ಣಿನಿಂದ ನೋಡುತ್ತಿದೆ.

ಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆಸಾವಿನ ಮನೆಯಿಂದ ಎದ್ದು ಬಂದ ಕೊರೊನಾ ಪೀಡಿತ ಭಾರತೀಯನ ರೋಚಕ ಕಥೆ

ವೈರಸ್ ಹರಡುತ್ತಿರುವುದು ಚೀನಾ ಹಾಗೂ ಏಷ್ಯಾ ಪ್ರಜೆಗಳಿಂದ, ಮೊದಲು ಅವರನ್ನು ನಿಯಂತ್ರಿಸಬೇಕು ಎಂಬ ಆಲೋಚನೆ ಮಾಡುತ್ತಿದೆ ಬೇರೆ ದೇಶಗಳು. ಈ ದೃಷ್ಟಿಯಲ್ಲಿ ನೋಡುವುದಾದರೇ ಭಾರತದಲ್ಲೂ ಚೀನಾ ಟಾರ್ಗೆಟ್ ಆಗಿದೆ. ಈ ಎಲ್ಲ ಬೆಳವಣಿಗೆಯ ಮಧ್ಯೆ ಯುಎಸ್ ಗನ್ ಅಂಗಡಿಯ ಮಾಲೀಕನೊಬ್ಬ ಆತಂಕಕಾರಿ ವಿಷಯವೊಂದನ್ನು ಬಹಿರಂಗಪಡಿಸಿದ್ದಾನೆ. ಮುಂದೆ ಓದಿ....

ಹತ್ತು ಪಟ್ಟು ಗ್ರಾಹಕರು ಹೆಚ್ಚು

ಹತ್ತು ಪಟ್ಟು ಗ್ರಾಹಕರು ಹೆಚ್ಚು

ಇತ್ತೀಚಿನ ದಿನಗಳಲ್ಲಿ ಸುಮಾರು 10 ಪಟ್ಟು ಗ್ರಾಹಕರು ಹೆಚ್ಚಾಗಿದ್ದಾರೆ ಎಂದು ಯುಎಸ್‌ ಅರ್ಕಾಡಿಯಾ ಗನ್ ಅಂಗಡಿಯ ಮಾಲೀಕ ಡೇವಿಡ್ ಲಿಯು ಹೇಳಿದ್ದಾರೆ. ಇದಕ್ಕೆ ಕಾರಣ ಕೊಟ್ಟಿರುವ ಅವರು, ಇದು ಕೊರೊನಾ ವೈರಸ್ ಭೀತಿಯಿಂದ ಆಗಿರುವ ಬದಲಾವಣೆ ಎಂದು ಆತಂಕಕಾರಿ ವಿಷಯ ಬಿಚ್ಚಿಟ್ಟಿದ್ದಾರೆ.

50ಕ್ಕೂ ಹೆಚ್ಚು ಗನ್ ಖರೀದಿ

50ಕ್ಕೂ ಹೆಚ್ಚು ಗನ್ ಖರೀದಿ

'ಮಾರ್ಚ್ 3 ಮತ್ತು 4 ರಂದು ಎರಡೇ ದಿನಕ್ಕೆ 50ಕ್ಕೂ ಹೆಚ್ಚು ಜನರು ನಮ್ಮ ಅಂಗಡಿಯಲ್ಲಿ ಗನ್ ಖರೀದಿಸಿದ್ದಾರೆ. ಅದರಲ್ಲಿ ಅನೇಕರ ಬಂದೂಕಗಳ ಗನ್ ಸುರಕ್ಷಿತಾ ಪರೀಕ್ಷೆ ಕೂಡ ಮಾಡಿಸಿದ್ದಾರೆ. ನನ್ನದು ಚಿಕ್ಕ ಅಂಗಡಿ, ಆದರೂ ಈ ಮಟ್ಟದ ಮಾರಾಟ ನಾನು ಈ ಹಿಂದೆ ನೋಡಿರಲಿಲ್ಲ' ಎಂದು ಡೇವಿಡ್ ಲಿಯು ನ್ಯೂಸ್‌ವೀಕ್ ವೆಬ್ ಸೈಟ್ ಗೆ ತಿಳಿಸಿದ್ದಾರೆ.

ಕೊರೊನಾ ವೈರಸ್‌ನ ಯಾವ ಹಂತ ಭಾರತಕ್ಕೆ ಎಷ್ಟು ಅಪಾಯಕಾರಿ?ಕೊರೊನಾ ವೈರಸ್‌ನ ಯಾವ ಹಂತ ಭಾರತಕ್ಕೆ ಎಷ್ಟು ಅಪಾಯಕಾರಿ?

ಏಷ್ಯಾ ಜನರು ಟಾರ್ಗೆಟ್ ಆದರಾ?

ಏಷ್ಯಾ ಜನರು ಟಾರ್ಗೆಟ್ ಆದರಾ?

''ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಕಾರಣ, ಅದಕ್ಕೆ ಏಷ್ಯಾ ಜನರು ಕಾರಣ ಎಂದು ಬಿಂಬಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೀಡಿಯಾಗಗಳು ಕೂಡ ಏಷ್ಯಾ ಜನರು ಟಾರ್ಗೆಟ್ ಮತ್ತು ಚೀನಾ ಜನರು ಟಾರ್ಗೆಟ್ ಎಂದು ಸುದ್ದಿಗಳು ಬಿತ್ತರಿಸಿವೆ. ಇದರಿಂದ ಭಯ ಪಟ್ಟಿರುವ ಏಷ್ಯಾ ಜನರು, ತಮ್ಮ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರಗಳ ಮೊರೆ ಹೋಗುತ್ತಿದ್ದಾರೆ'' ಎಂದು ಹೇಳಿದ್ದಾರೆ.

ಮಹಿಳೆ ಮೇಲೆ ಹಲ್ಲೆಯಾಗಿತ್ತು

ಮಹಿಳೆ ಮೇಲೆ ಹಲ್ಲೆಯಾಗಿತ್ತು

ಫೆಬ್ರವರಿ ತಿಂಗಳಲ್ಲಿ ಯುಎಸ್‌ನ ಸಬ್‌ ವೇ ರೈಲ್ವೇ ಸ್ಟೇಷನ್ ಬಳಿ ಏಷ್ಯಾ ಮೂಲದ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆದಿತ್ತು. ಕೊರೊನಾ ಭೀತಿಯಿಂದ ಆ ಮಹಿಳೆ ಮಾಸ್ಕ್‌ ಧರಿಸಿದ್ದ ಕಾರಣ ಆಕೆಯ ಮೇಲೆ ಹಲ್ಲೆಯಾಗಿತ್ತು ಎಂಬ ಸುದ್ದಿಯೂ ವರದಿಯಾಗಿದೆ. ಇಂತಹ ಘಟನೆಗಳು ಸಹಜವಾಗಿ, ಬೇರೆ ದೇಶಗಳಲ್ಲಿರುವ ಚೀನಾ ಜನರನ್ನು ಆತಂಕಕ್ಕೆ ಗುರಿ ಮಾಡಿದೆ. ಕೊರೊನಾ ಸೋಂಕಿಗೆ ಕಾರಣ ಎಂದು ಕೊಂದರು ಕೊಲ್ಲಬಹುದು ಎಂಬ ಭಯ ಹುಟ್ಟಿಕೊಂಡಿದೆ. ಈ ಭಯದಿಂದ ತಪ್ಪಿಸಿಕೊಳ್ಳಲು ಆಯುಧಗಳನ್ನು ಜೊತೆಯಲ್ಲಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.

ಇಟಲಿಯಲ್ಲಿ ಒಂದೇ ದಿನ ಕೊರನಾದಿಂದ 368 ಮಂದಿ ಸಾವುಇಟಲಿಯಲ್ಲಿ ಒಂದೇ ದಿನ ಕೊರನಾದಿಂದ 368 ಮಂದಿ ಸಾವು

ಯುಎಸ್‌ ಕೊರೊನಾ ವರದಿ

ಯುಎಸ್‌ ಕೊರೊನಾ ವರದಿ

ಯುಎಸ್‌ನಲ್ಲಿ ಇದುವರೆಗೂ 3802 ಕೊರೊನಾ ಕೇಸ್‌ಗಳು ಪತ್ತೆಯಾಗಿದೆ. ಅದರಲ್ಲಿ 69 ಜನರು ಬಲಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಜಗತ್ತಿನಾದ್ಯಂತ ಮಾರಣಹೋಮ ನಡೆಸುತ್ತಿರುವ ಕೊರೊನಾ ವೈರಸ್‌ನಿಂದ ಇದುವರೆಗೂ 6500ಕ್ಕೂ ಹೆಚ್ಚು ಜನರ ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲೂ ಇಬ್ಬರು ಮೃತಪಟ್ಟಿದ್ದಾರೆ.

English summary
US gun store owner said that asian customers are buying weapons to protect themselves from racist attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X