ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಅಧ್ಯಕ್ಷಗಿರಿಯ ವರ್ಷಾಚರಣೆಯಂದೇ ಅಮೆರಿಕಾ ಸರ್ಕಾರ ಸ್ಥಗಿತ

By ದೀಪಿಕಾ
|
Google Oneindia Kannada News

ವಾಷಿಂಗ್ಟನ್, ಜನವರಿ 20: ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕಾ ಸರಕಾರ ಸ್ಥಗಿತಗೊಂಡಿದೆ. ಸಂಸತ್ತು ಸಣ್ಣ ಅವಧಿಯ ಖರ್ಚುಗಳ ಮಸೂದೆಯನ್ನು ತಿರಸ್ಕರಿಸಿರುವ ಕಾರಣ ಸರಕಾರ ಕಾರ್ಯ ಸ್ಥಗಿತಗೊಳಿಸಿದೆ. ಇದರಿಂದ ಅಮೆರಿಕಾ ಅಧ್ಯಕ್ಷರಾಗಿ ಮೊದಲ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಡೊನಾಲ್ಡ್ ಟ್ರಂಪ್ ಮುಖಭಂಗ ಅನುಭವಿಸುವಂತಾಗಿದೆ.

ಮೆರಿಕಾದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದ ಸರಕಾರ ತನ್ನ ಕಾರ್ಯ ಸ್ಥಗಿತಗೊಳಸಿದೆ. ಟ್ರಂಪ್ ಪಕ್ಷ ರಿಪಬ್ಲಿಕನ್ ನ ಕೆಲವು ಸಂಸದರು ಡೆಮಾಕ್ರಾಟಿಕ್ ಪಕ್ಷದ ಸಂಸದರ ಜತೆ ಸೇರಿಕೊಂಡು ಮಸೂದೆ ಅಂಗೀಕಾರ ಪಡೆದುಕೊಳ್ಳದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರಿಂದ ದೇಶದಲ್ಲಿ ಈ ಬಿಕ್ಕಟ್ಟು ಸೃಷ್ಟಿಯಾಗಿದೆ.

US government shuts down as bill to extend funding is blocked

ಮಸೂದೆ ಪಾಸಾಗಲು 60 ಮತಗಳ ಅಗತ್ಯವಿತ್ತು. ಆದರೆ 48 ಜನರು ವಿರುದ್ಧ ಮತದಾನ ಮಾಡಿದ್ದರಿಂದ ಅಗತ್ಯ ಮತಗಳನ್ನು ಪಡೆದುಕೊಳ್ಳುವಲ್ಲಿ ಮಸೂದೆ ವಿಫಲಗೊಂಡಿದ್ದು ಅಂಗೀಕಾರ ಪಡೆದುಕೊಂಡಿಲ್ಲ. ಐವರು ಡೆಮಾಕ್ರಾಟಿಕ್ ಸದಸ್ಯರು ಮಾತ್ರ ಮಸೂದೆಯನ್ನು ಬೆಂಬಲಿಸಿದರೆ ಸ್ವಪಕ್ಷ ರಿಪಬ್ಲಿಕನ್ನರೇ ಟ್ರಂಪ್ ಗೆ ಕೈಕೊಟ್ಟರು. ಇದರಿಂದ ಮಸೂದೆ ಅಂಗೀಕಾರ ಪಡೆದುಕೊಳ್ಳದೆ ಉಳಿಯಿತು.

ಏನಾಗುತ್ತದೆ?

ಮಸೂದೆ ಅಂಗೀಕಾರ ಪಡೆದುಕೊಳ್ಳದ ಹಿನ್ನಲೆಯಲ್ಲಿ ಅತೀ ಅಗತ್ಯವಿಲ್ಲದ ಸರಕಾರಿ ಸೇವೆಗಳ ನೌಕರರನ್ನು ಸಂಬಳ ರಹಿತ ರಜೆಯಲ್ಲಿ ಕಳುಹಿಸಲಾಗುತ್ತದೆ. ಅತ್ಯಗತ್ಯ ಸೇವಗಳಾದ ಸಾರ್ವಜನಿಕ ರಕ್ಷಣೆ ಮತ್ತು ಸೇನಾ ಇಲಾಖೆಗಳು ಮಾತ್ರ ಕೆಲಸ ಮಾಡುತ್ತವೆ.

ಆದರೆ ಇಂದು ಶನಿವಾರವಾದ ಹಿನ್ನಲೆಯಲ್ಲಿ ಮತ್ತು ನಾಳೆ ಭಾನುವಾರವಾಗಿರುವುದರಿಂದ ಸರಕಾರ ಸ್ಥಗಿತಗೊಂಡಿರುವ ಪರಿಣಾಮ ಅಷ್ಟಾಗಿ ಜನರಿಗೆ ತಟ್ಟಿಲ್ಲ. ಆದರೆ ನಿಜವಾದ ಬಿಸಿ ಸೋಮವಾರದಿಂದ ತಟ್ಟಲಿದೆ.

ಒಟ್ಟು 8,00,000 ಸರಕಾರಿ ನೌಕರರು ಸೋಮವಾರದಿಂದ ಮನೆಯಲ್ಲೇ ಉಳಿಯಲಿದ್ದಾರೆ. ಮಾಹಿತಿಗಳ ಪ್ರಕಾರ 1976ರಿಂದ ಇಲ್ಲಿಯವರೆಗೆ ಒಟ್ಟು 18 ಬಾರಿ ಅಮೆರಿಕಾ ಸರಕಾರ ಸ್ಥಗಿತಗೊಂಡಿದೆ. ಕೊನೆಯ ಬಾರಿಗೆ ಅಕ್ಟೋಬರ್ 2013ರಲ್ಲಿ ಅಮೆರಿಕಾ ಸರಕಾರ ತನ್ನ ಕಾರ್ಯ ನಿರ್ವಹಣೆ ನಿಲ್ಲಿಸಿತ್ತು.

ಮಸೂದೆ ಅಂಗೀಕಾರ ಪಡೆದುಕೊಳ್ಳದ ಹಿನ್ನಲೆಯಲ್ಲಿ ಕ್ರುದ್ಧರಾಗಿರುವ ಟ್ರಂಪ್, ಡೆಮಾಕ್ರಾಟಿಕ್ ಪಕ್ಷದ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The US government officially shutdown today for the first time in five years after the Senate rejected a short-term spending bill to keep the federal government running, marking a chaotic end to Donald Trump's first year as president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X