US Election 2024: ಎಲೋನ್ ಮಸ್ಕ್ 'ಹೊಸ ನಕ್ಷತ್ರ' ಎಂದು ಕರೆದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್ ನವೆಂಬರ್ 6: ಇಂದು ಅಮೆರಿಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬಹುಮತದಿಂದ ಗೆಲುವು ಸಾಧಿಸಿದ್ದು ಫಲಿತಾಂಶ ಘೋಷಣೆಯಾಗುವುದೊಂದೇ ಬಾಕಿ ಇದೆ. ಇದರಿಂದಾಗಿ ಟ್ರಂಪ್ ಬೆಂಬಲಿಗರ ಸಂಭ್ರಮ ಹಾಗೂ ಸಡಗರ ಮುಗಿಲು ಮುಟ್ಟಿದೆ. ಇದೇ ಖುಷಿಯಲ್ಲಿ ಅಮೆರಿಕನ್ನರನ್ನು ಉದ್ದೇಶಿಸಿ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾತನಾಡಿದ ಟ್ರಂಪ್ ತಮ್ಮ ಬೆಂಬಲಿಗರು, ಆಪ್ತರು ಹಾಗೂ ಕುಟುಂಬಸ್ಥರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಎಲೋನ್ ಮಸ್ಕ್ ಅವರನ್ನೂ ಹಾಡಿ ಹೊಗಳಿದ್ದಾರೆ.
ಡೊನಾಲ್ಡ್ ಟ್ರಂಪ್ ಭಾಷಣ:
ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾತನಾಡಿದ ಟ್ರಂಪ್, 'ನಾನು ಪ್ರತಿ ದಿನವೂ ನಿಮಗಾಗಿ ಹೋರಾಡುತ್ತೇನೆ. ಅಮೆರಿಕದ ಸುವರ್ಣಯುಗ'ಕ್ಕೆ ನಾಂದಿ ಹಾಡುವುದಾಗಿ ಹೇಳಿದರು. ಸೆನೆಟ್‌ನಲ್ಲಿ ಪಕ್ಷದ ಗೆಲುವನ್ನು ಉಲ್ಲೇಖಿಸಿದ ಅವರು, 'ಅಮೆರಿಕ ನಮಗೆ ಅಭೂತಪೂರ್ವ ಮತ್ತು ಶಕ್ತಿಯುತ ಜನಾದೇಶವನ್ನು ನೀಡಿದೆ. ಇದರಿಂದಾಗಿ ನಾನು ಕುಟುಂಬ ಸದಸ್ಯರು, ಪತ್ನಿ ಮೆಲಾನಿಯಾ ಟ್ರಂಪ್, ಬೆಂಬಲಿಗರು ಹಾಗೂ ಜನಸಾಮಾನ್ಯರಿಗೆ ಧನ್ಯವಾದವನ್ನು ತಿಳಿಸುತ್ತೇನೆ ಎಂದರು.

ಅಮೇರಿಕನ್ ಜನರಿಗೆ ಉತ್ತಮ ಗೆಲುವು - ಡೊನಾಲ್ಡ್ ಟ್ರಂಪ್
ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ನಿರ್ಣಾಯಕ ಮುನ್ನಡೆ ಸಾಧಿಸಿದ ನಂತರ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪತ್ನಿಯೊಂದಿಗೆ ಸೆನೆಟ್ ವೇದಿಕೆಗೆ ಆಗಮಿಸಿದರು. ಜನರಿಗೆ ಧನ್ಯವಾದ ಹೇಳುತ್ತಾ, ನಮ್ಮ ದೇಶ ಚೇತರಿಸಿಕೊಳ್ಳಲು ನಾವು ಸಹಾಯ ಮಾಡಲಿದ್ದೇವೆ ಎಂದು ಹೇಳಿದರು. 'ಇದು ಅಮೆರಿಕದ ಜನತೆಗೆ ಸಂದ ಜಯವಾಗಿದ್ದು, ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠವಾಗಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ' ಎಂದು ಅವರು ಹೇಳಿದರು.
ಅಮೆರಿಕವು ಗಾಯಗೊಂಡಿದೆ. ಇದನ್ನು ಸರಿಪಡಿಸಲು ನಾನು ಹಗಲಿರುಳು ಶ್ರಮಿಸುತ್ತೇನೆ. ನಾನು ನಿಮಗಾಗಿ ದುಡಿಯುತ್ತೇನೆ. ಅಗತ್ಯಬಿದ್ದರೆ ಹೋರಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಎರಡನೇ ಬಾರಿ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾದ ನಂತರ ಅವರು ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಟ್ರಂಪ್‌ಗೆ ಬಹುಮತ
ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಬಹುಮತದ ಗಡಿ ದಾಟಿದ್ದಾರೆ. ಅಮೇರಿಕನ್ ಬ್ರಾಡ್‌ಕಾಸ್ಟರ್ ಫಾಕ್ಸ್ ನ್ಯೂಸ್, ಅದರ ಪ್ರೊಜೆಕ್ಷನ್‌ನಲ್ಲಿ ಟ್ರಂಪ್ 270 ಕ್ಕೂ ಹೆಚ್ಚು ಚುನಾವಣಾ ಮತಗಳನ್ನು ಪಡೆದಿದ್ದಾರೆ ಎಂದು ತೋರಿಸಿದೆ. ಫಾಕ್ಸ್ ನ್ಯೂಸ್‌ನ ಪ್ರೊಜೆಕ್ಷನ್ ಪ್ರಕಾರ, ಡೊನಾಲ್ಡ್ ಟ್ರಂಪ್ 277 ಚುನಾವಣಾ ಮತಗಳನ್ನು ಪಡೆದಿದ್ದಾರೆ. ಕಮಲಾ ಹ್ಯಾರಿಸ್ ಕೇವಲ 226 ಮತಗಳನ್ನು ಪಡೆದಿದ್ದಾರೆ. ಟ್ರಂಪ್ ಉತ್ತರ ಕೆರೊಲಿನಾ, ಜಾರ್ಜಿಯಾದಲ್ಲಿ ಗೆಲುವು ಸಾಧಿಸಿದ್ದಾರೆ. ಅಧ್ಯಕೀಯ ಹುದ್ದೆಗೇರಲು ಬೇಕಾದ ಮ್ಯಾಜಿಕ್ ನಂಬರ್ 270.

'ಇಂದು ಫಲಿತಾಂಶ ಬರುವುದಿಲ್ಲ' ಎಂದ ಬರಾಕ್ ಒಬಾಮಾ
ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದ್ದು, ಫಲಿತಾಂಶ ಇಂದೇ ಹೊರಬೀಳಬಹುದು ಎನ್ನಲಾಗುತ್ತಿದೆ. ಆದರೆ 'ಇಂದು ಫಲಿತಾಂಶ ಬರುವುದಿಲ್ಲ' ಎಂದು ಬರಾಕ್ ಒಬಾಮಾ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. 2024ರ ಯುಎಸ್ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬೀಳುವವರೆಗೂ ಕಾರ್ಯಕರ್ತರು ತಾಳ್ಮೆಯಿಂದ ಇರಬೇಕೆಂದು ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮಂಗಳವಾರ ಒತ್ತಾಯಿಸಿದ್ದಾರೆ.
ಫಲಿತಾಂಶ ಪಡೆಯುವುದು ಕೆಲವು ರಾಜ್ಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಹೀಗಾಗಿ ಇಂದು ಸಂಜೆಯವರೆಗೂ ಫಲಿತಾಂಶ ಲಭ್ಯವಾಗುವುದಿಲ್ಲ ಎಂದು ಹೇಳಲಾಗಿತ್ತು.'' 2020 ರಲ್ಲಿ ಪ್ರತಿ ಮತಪತ್ರವನ್ನು ಎಣಿಸಲು ಕೆಲ ದಿನಗಳನ್ನು ತೆಗೆದುಕೊಳ್ಳಲಾಗಿದೆ. ಹೀಗಾಗಿ ಇಂದು ರಾತ್ರಿಯೂ ಫಲಿತಾಂಶಗಳನ್ನು ನಾವು ತಿಳಿಯುವುದನ್ನು ನಿರೀಕ್ಷಿಸಲು ಆಗುವುದಿಲ್ಲ" ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.












Click it and Unblock the Notifications