ಭಾರತೀಯ ಭಾಷೆ ಮಾತನಾಡುವವರ ಬಗ್ಗೆ ಅಮೆರಿಕ ಸಮೀಕ್ಷೆ

ಬೆಂಗಳೂರು, ಡಿಸೆಂಬರ್. 11 : ತಮಿಳು ಜೊತೆ ಪಂಜಾಬಿ, ತೆಲಗು, ಬೆಂಗಾಲಿ ಭಾಷೆಗಳನ್ನು ಎಷ್ಟು ಜನ ಮಾತನಾಡುತ್ತಾರೆ? ಎಂದು ಅಮೆರಿಕ ಸಮೀಕ್ಷೆ ಮಾಡುತ್ತಿದೆ. ಮುಂದೆ ಕನ್ನಡ ಮಾತನಾಡುವವರ ಬಗ್ಗೆಯೂ ಸಮೀಕ್ಷೆ ನಡೆಯಬಹುದು.

ಅಮೆರಿಕ ಐತಿಹಾಸಿಕವಾಗಿ ಇಂತಹ ಸಮೀಕ್ಷೆ ನಡೆಸುತ್ತಿದೆ. ಮೊದಲು ಎಷ್ಟು ಜನರು ತಮಿಳು ಮಾತನಾಡುತ್ತಾರೆ? ಎಂದು ಸಮೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು. ಅದರ ಜೊತೆಗೆ ಪಂಜಾಬಿ, ತೆಲಗು, ಬೆಂಗಾಲಿ ಭಾಷೆಗಳನ್ನು ಸೇರಿಸಿಕೊಳ್ಳಲಾಗಿದೆ.

us

ಅಡೋಬ್ ಸಿಒಓ ಶಂತನು ನಾರಾಯಣ್, ಮೈಕ್ರೋಸಾಫ್ಟ್ ನ ಸತ್ಯಾ ನಡೆಲ್ಲಾ ಇಬ್ಬರು ಹೈದರಾಬಾದ್

ಮೂಲದವರು. ಅವರ ಮೂಲ ಭಾಷೆ ತೆಲಗು ಆಗಿದೆ. ನಟ ಅಜೀಜ್ ಅನ್ಸಾರಿ ಅವರ ಪೋಷಕರು ತಮಿಳು ಮಾತನಾಡುತ್ತಾರೆ.

ಗೂಗಲ್ ಸಿಇಓ ಸುಂದರ್ ಪಿಚೈ ಚೆನ್ನೈನಲ್ಲಿ ಹುಟ್ಟಿ ಬೆಳೆದವರು, ಆದ್ದರಿಂದ ತಮಿಳು ಮೂಲ ಭಾಷೆಯಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಮೀಕ್ಷೆ ನಡೆಸಲಾಗುತ್ತಿದೆ.

2011ರ ಜನಗಣತಿ ಪ್ರಕಾರ ತಮಿಳು ಮತ್ತು ತೆಲಗು ದಕ್ಷಿಣ ಭಾರತದ ಎರಡು ಪ್ರಮುಖ ಭಾಷೆಗಳು. ವಿಶ್ವದಲ್ಲಿ 70ಮಿಲಿಯನ್ ಜನರು ತಮಿಳು ಮಾತನಾಡುತ್ತಾರೆ. ಅಮೆರಿಕದಲ್ಲಿ ಈ ಸಂಖ್ಯೆ 250,000.

ಅಮೆರಿಕದಲ್ಲಿ ಇಂಗ್ಲಿಷ್, ಸ್ಪ್ಯಾನಿಷ್ ಭಾಷೆಯನ್ನು ಹೆಚ್ಚು ಜನರು ಮಾತನಾಡುತ್ತಾರೆ. ಭಾರತೀಯ ಭಾಷೆಗಳ ವಿಚಾರಕ್ಕೆ ಬಂದರೆ ಹಿಂದಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+