ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ಹಿಮಪಾತ: 31 ಸಾವು- ಕತ್ತಲಲ್ಲಿ ಕಾಲ ಕಳೆದ 2 ಲಕ್ಷ ಜನ

|
Google Oneindia Kannada News

ನ್ಯೂಯಾರ್ಕ್, ಯುಎಸ್ ಡಿಸೆಂಬರ್ 26: ತೀವ್ರ ಚಳಿ ಹಾಗೂ ಹಿಮಪಾತದಿಂದಾಗಿ ಅಮೆರಿಕಾದಲ್ಲಿ 31 ಜನ ಸಾವನ್ನಪ್ಪಿದ್ದು 2 ಲಕ್ಷ ಜನರು ವಿದ್ಯುತ್ ಇಲ್ಲದೆ ಕಾಲ ಕಳೆಯುವಂತಾಗಿದೆ. ಕ್ರಿಸ್‌ಮಸ್ ದಿನದಿಂದ ಪೂರ್ವ ಯುನೈಟೆಡ್ ಸ್ಟೇಟ್ಸ್‌ನ ಕೆಲವು ಭಾಗಗಳಲ್ಲಿ ತೀವ್ರ ಹಿಮಪಾತವಾಗುತ್ತಿದ್ದು ಲಕ್ಷಾಂತರ ಅಮೇರಿಕನ್ನರಿಗೆ ಭೀತಿಯನ್ನುಂಟು ಮಾಡಿದೆ.

Bengaluru Rains : ಬಂಗಾಳಕೊಲ್ಲಿಯ ವಾಯುಭಾರ ಕುಸಿತ: ಬೆಂಗಳೂರಲ್ಲಿ 2 ದಿನ ಮಳೆ ನಂತರ ಚಳಿ ವಾತಾವರಣ ಸೃಷ್ಟಿBengaluru Rains : ಬಂಗಾಳಕೊಲ್ಲಿಯ ವಾಯುಭಾರ ಕುಸಿತ: ಬೆಂಗಳೂರಲ್ಲಿ 2 ದಿನ ಮಳೆ ನಂತರ ಚಳಿ ವಾತಾವರಣ ಸೃಷ್ಟಿ

ಪಶ್ಚಿಮ ನ್ಯೂಯಾರ್ಕ್‌ನ ಬಫಲೋದಲ್ಲಿ ಅಧಿಕ ಹಿಮಪಾತದಿಂದಾಗಿ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗುತ್ತಿದೆ. ಇಲ್ಲಿ ಹಿಮದ ಬಿರುಗಾಳಿ ನಗರವನ್ನು ಸಂಪೂರ್ಣ ಮುಳುಗಿಸಿದೆ. ಕಣ್ಣಾಯಿಸಿದಲೆಲ್ಲ ಬಿಳೆ ಹಾಳೆಯಂತೆ ಹಿಪ ಪದರ ಗೋಷರಿಸುತ್ತಿದೆ. ಮರಗಳು ಮನೆಗಳು ರಸ್ತೆಗಳು ಹಿಮಪಾತದಿಂದ ಕಣ್ಮರೆಯಾಗಿವೆ. ಮಾತ್ರವಲ್ಲದೆ ತುರ್ತು ಸೇವೆಗಳನ್ನು ಒದಗಿಸಲು, ಜನರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ವಿದ್ಯುತ್ ಇಲ್ಲದೆ ಕಾಲ ಕಳೆದ 2 ಲಕ್ಷ ಜನ

ವಿದ್ಯುತ್ ಇಲ್ಲದೆ ಕಾಲ ಕಳೆದ 2 ಲಕ್ಷ ಜನ

ರಸ್ತೆಯಲ್ಲಿ ಚಲಿಸುವ ವಾಹನಗಳು ಹಿಮದಿಂದ ಆವೃತಗೊಂಡಿವೆ. ಕುದಿಯುವ ನೀರು ಕೆಲವೇ ನಿಮಿಷಗಳಲ್ಲಿ ಮಂಜಾಗುವಷ್ಟು ತಂಪಾದ ವಾತಾವರಣ ನಿರ್ಮಾಣವಾಗಿದೆ. ಬಫಲೋದ ಸ್ಥಳೀಯರು ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. ಇಲ್ಲಿನ ನಿವಾಸಿಗಳು ಇನ್ನೂ ಅತ್ಯಂತ ಅಪಾಯಕಾರಿ ಜೀವ-ಬೆದರಿಕೆಯ ಪರಿಸ್ಥಿತಿಯಲ್ಲಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿರುವವರಿಗೆ ಮನೆಯೊಳಗೆ ಇರುವಂತೆ ಎಚ್ಚರಿಕೆ ನೀಡಲಾಗಿದೆ.

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಹಲವಾರು ಪೂರ್ವ ರಾಜ್ಯಗಳಾದ್ಯಂತ 2,00,000 ಕ್ಕೂ ಹೆಚ್ಚು ಜನರು ಕ್ರಿಸ್ಮಸ್ ದಿನ ವಿದ್ಯುತ್ ಇಲ್ಲದೆ ಕಾಲ ಕಳೆದಿದ್ದಾರೆ. ಇದರಿಂದಾಗಿ ಅನೇಕರು ತಮ್ಮ ರಜೆಯ ಪ್ರಯಾಣದ ಯೋಜನೆಗಳನ್ನು ಹೆಚ್ಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಿಮಪಾತದ ಪರಿಸ್ಥಿತಿಗಳು ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆಗಳು ಇವೆ. ಅಧಿಕ ಹಿಮಪಾತಕ್ಕೆ ಸಾವಿರಾರು ವಿಮಾನಗಳು ರದ್ದಾಗಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಒಂಬತ್ತು ರಾಜ್ಯಗಳಲ್ಲಿ ಮೂವತ್ತೊಂದು ಹವಾಮಾನ ಸಂಬಂಧಿತ ಸಾವುಗಳು ದೃಢೀಕರಿಸಲ್ಪಟ್ಟಿವೆ. ಕೊಲೊರಾಡೋದಲ್ಲಿ ಮೂರು ಜನ ತೀವ್ರ ಚಳಿಗೆ ಸಾವನ್ನಪ್ಪಿದ್ದಾರೆ ಮತ್ತು ನ್ಯೂಯಾರ್ಕ್ ರಾಜ್ಯದಲ್ಲಿ ಕನಿಷ್ಠ 12 ಮಂದಿ ಸೇರಿದಂತೆ ಹಲವೆಡೆ ಸಾವುಗಳು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಪ್ರಯಾಣಿಕರು

ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಪ್ರಯಾಣಿಕರು

"ಇಂದು ರಾತ್ರಿಯವರೆಗೆ 2 ರಿಂದ 3 ಅಡಿಗಳಷ್ಟು ಹೆಚ್ಚುವರಿ ಹಿಮ ಸಂಗ್ರಹವಾಗುತ್ತದೆ'' ಎಂದು ರಾಷ್ಟ್ರೀಯ ಹವಾಮಾನ ಸೇವೆ ಎಚ್ಚರಿಸಿದೆ. ಟ್ರ್ಯಾಕಿಂಗ್ ವೆಬ್‌ಸೈಟ್ Flightaware.com ಪ್ರಕಾರ, ದಶಕಗಳಲ್ಲಿ ಅತ್ಯಂತ ಭೀಕರವಾದ ಚಂಡಮಾರುತದಿಂದಾಗಿ ಭಾನುವಾರದಂದು 2,400 ಕ್ಕೂ ಹೆಚ್ಚು ಯುಎಸ್‌ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಶನಿವಾರ 3,500 ವಿಮಾನಗಳು ಮತ್ತು ಸುಮಾರು 6,000 ವಿಮಾನಗಳನ್ನು ಶುಕ್ರವಾರ ರದ್ದುಗೊಳಿಸಲಾಗಿದೆ. ಅಟ್ಲಾಂಟಾ, ಚಿಕಾಗೋ, ಡೆನ್ವರ್, ಡೆಟ್ರಾಯಿಟ್ ಮತ್ತು ನ್ಯೂಯಾರ್ಕ್ ಸೇರಿದಂತೆ ಕ್ರಿಸ್‌ಮಸ್ ದಿನದಾದ್ಯಂತ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡರು.

 53 ಜನ ಆಸ್ಪತ್ರೆಗೆ ದಾಖಲು

53 ಜನ ಆಸ್ಪತ್ರೆಗೆ ದಾಖಲು

ಟ್ರ್ಯಾಕರ್ poweroutage.us ಪ್ರಕಾರ, ಶನಿವಾರದಂದು ಒಂದು ಹಂತದಲ್ಲಿ ಸುಮಾರು 1.7 ಮಿಲಿಯನ್ ಗ್ರಾಹಕರು ಕೊರೆಯುವ ಚಳಿಯಲ್ಲಿ ವಿದ್ಯುತ್ ಇಲ್ಲದೆ ದಿನ ದೂಡಿದ್ದಾರೆ. ಪೂರ್ವ ರಾಜ್ಯಗಳಲ್ಲಿ 70,000 ಕ್ಕೂ ಹೆಚ್ಚು ಗ್ರಾಹಕರಿಗೆ ಇನ್ನೂ ವಿದ್ಯುತ್ ಕೊರತೆಯಿದ್ದರೂ, ಭಾನುವಾರ ಸಂಜೆಯ ಹೊತ್ತಿಗೆ ಅಂಕಿ ಅಂಶ ಗಣನೀಯವಾಗಿ ಕುಸಿಯಿತು.

ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ, ಮಂಜುಗಡ್ಡೆಯಿಂದ ಅಪಘಾತ ಸಂಭವಿಸಿ ನಾಲ್ಕು ಜನರು ಸಾವನ್ನಪ್ಪಿದರು. 53 ಜನರನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ಈ ಮಧ್ಯೆ ಒಂಟಾರಿಯೊ ಮತ್ತು ಕ್ವಿಬೆಕ್‌ನಲ್ಲಿ ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಉಳಿದುಕೊಂಡರು. ಪ್ರಮುಖ ನಗರಗಳಲ್ಲಿ ಅನೇಕ ವಿಮಾನಗಳನ್ನು ರದ್ದುಗೊಳಿಸಲಾಯಿತು. ಟೊರೊಂಟೊ ಮತ್ತು ಒಟ್ಟಾವಾ ನಡುವಿನ ರೈಲು ಪ್ರಯಾಣಿಕರ ಸೇವೆಯನ್ನು ಸ್ಥಗಿತಗೊಳಿಸಲಾಯಿತು.

English summary
31 people have died due to extreme cold and snowfall in America and 2 lakh people are spending time without electricity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X