ಚೆನ್ನೈಗೆ ಭೇಟಿ ನೀಡಿ ಯು.ಎಸ್-ಭಾರತದ ನಡುವಿನ ಸ್ನೇಹ ಹೆಚ್ಚಿಸಿದ ಜೆನ್ನಿಫರ್ ಆರ್ ಲಿಟಲ್‌ಜಾನ್
ಚೆನ್ನೈ ಆಗಸ್ಟ್ 27: ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ -ಸಾಗರಗಳು, ಅಂತರಾಷ್ಟ್ರೀಯ ಪರಿಸರ, ಮತ್ತು ವೈಜ್ಞಾನಿಕ ವ್ಯವಹಾರ ಜೆನ್ನಿಫರ್ ಆರ್. ಲಿಟಲ್‌ಜಾನ್ ಅವರು ಆಗಸ್ಟ್ 22 ಮತ್ತು 23 ರಂದು ಚೆನ್ನೈಗೆ ಭೇಟಿ ನೀಡಿ ರಾಯಭಾರಿಗಳ ನೀರಿನ ತಜ್ಞರ ಕಾರ್ಯಕ್ರಮದ ಅಂಗವಾಗಿ ನದಿ ಪುನರುಜ್ಜೀವನ ಸೇರಿದಂತೆ, ವಿಜ್ಞಾನ, ಹಸಿರು ತಂತ್ರಜ್ಞಾನ ಮತ್ತು ಹವಾಮಾನ ಸ್ಥಿತಿ ಸ್ಥಾಪಕತ್ವ ವಿಷಯಗಳಲ್ಲಿ ಯು.ಎಸ್-ಭಾರತದ ಸಹಕಾರದ ಕುರಿತು ನಾಗರಿಕ ನಾಯಕರು, ವಾಣಿಜ್ಯ-ವ್ಯವಹಾರಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಂವಾದ ನಡೆಸಿದರು.
"ಜೀವ ವೈವಿಧ್ಯವನ್ನು ಸಂರಕ್ಷಿಸುವುದರಿಂದ ಹಿಡಿದು ಹವಾಮಾನ ಸಂಕಷ್ಟವನ್ನು ಎದುರಿಸುವವರೆಗೆ ಯುಎಸ್-ಭಾರತ ವಿಜ್ಞಾನ ಮತ್ತುತಂತ್ರಜ್ಞಾನದಲ್ಲಿ ಸಹಕಾರವು ನಮ್ಮ ಜಗತ್ತಿನ ಅತ್ಯಂತ ದೊಡ್ಡ ಸವಾಲುಗಳನ್ನು ಪರಿಹರಿಸಲು ಪ್ರಮುಖವಾಗಿದೆ. ಇದು ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ (iCET) ಯು.ಎಸ್. ಇಂಡಿಯಾ ಉಪಕ್ರಮದ ಅಡಿಯಲ್ಲಿ ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿದೆ. ಚೆನ್ನೈ ಈ ಸಹಯೋಗದ ಶಕ್ತಿಯನ್ನು ಪ್ರದರ್ಶಿಸುತ್ತದೆ! ಸೌರ ಮತ್ತು ಹಸಿರು ತಂತ್ರಜ್ಞಾನದ ನೂತನ ಆವಿಷ್ಕಾರಗಳಿಂದ ರಾಯಭಾರಿ ನೀರಿನ ತಜ್ಞರ ಕಾರ್ಯಕ್ರಮ (AWEP) ಚೆನ್ನೈಗೆ ಅದರ ಜಲಮಾರ್ಗಗಳನ್ನು ಹಸಿರು ಮಾಡುವ ಗುರಿಯನ್ನು ಸಾಧಿಸಲು ಬೆಂಬಲ ನೀಡುತ್ತದೆ. ನಾವೆಲ್ಲಾ ಒಟ್ಟಿಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸಬಹುದು ಮತ್ತು ಸಮೃದ್ಧಿ ಸಾಧಿಸಬಹುದು," ಎಂದು ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಹೇಳಿದರು.

ಶ್ರೀಪೆರಂಬದೂರಿನಲ್ಲಿರುವ ಯು.ಎಸ್. ಸೌರ ತಂತ್ರಜ್ಞಾನ ಕಂಪನಿ ಫಸ್ಟ್ಸೋಲಾರ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಆಕ್ಟಿಂಗ್ ಅಸಿಸ್ಟೆಂಟ್ಸೆಕ್ರೆಟರಿ ಲಿಟಲ್‌ಜಾನ್ ಅವರು ಸೌರ ಶಕ್ತಿ ತಂತ್ರಜ್ಞಾನ ಮತ್ತು ಸುಸ್ಥಿರತೆಯ ಅಭ್ಯಾಸಗಳ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್ ಹಸಿರು ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳಿಗೆ ಮೀಸಲಾದ ಸ್ಥಳಗಳನ್ನು ವೀಕ್ಷಿಸಿದರು.
ಆಕ್ಟಿಂಗ್ ಅಸಿಸ್ಟೆಂಟ್ ಸೆಕ್ರೆಟರಿ ಲಿಟಲ್‌ಜಾನ್ ಅವರು ಹಸಿರು ತಂತ್ರಜ್ಞಾನ-ಚಾಲಿತ ನಾವೀನ್ಯತೆ ಮತ್ತು ಪರಿಸರ ವ್ಯವಸ್ಥೆಗಳನ್ನು ಬೆಳೆಯುವಂತೆ ಮಾಡಲು ಮತ್ತು ಉತ್ತೇಜಿಸಲು ಯುಎಸ್ಕಾನ್ಸುಲೇಟ್ ಮತ್ತು ಐಐಟಿ ಮದ್ರಾಸ್ ರಿಸರ್ಚ್ ಪಾರ್ಕ್ ನಡುವಿನ ಯೋಜಿತ ಪಾಲುದಾರಿಕೆಯ ಮುಂದೆ ಪರಿಸರ ಪರಿಹಾರಗಳಲ್ಲಿ ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ಹಸಿರು ತಂತ್ರಜ್ಞಾನದ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದರು.
ಅಣ್ಣಾ ವಿಶ್ವವಿದ್ಯಾಲಯದಲ್ಲಿ, ಆಕ್ಟಿಂಗ್ ಅಸಿಸ್ಟೆಂಟ್ ಸೆಕ್ರೆಟರಿಲಿಟಲ್‌ಜಾನ್ ಅವರು ಸ್ಥಳೀಯ ಚೇತರಿಸಿಕೊಳ್ಳುವ (ರಿಸಲಿಯನ್ಸ್) ಕಾರ್ಯತಂತ್ರಗಳನ್ನು ಬಲಪಡಿಸಲು ಹವಾಮಾನ ಮಾಡೆಲಿಂಗ್ಬಳಸಿಕೊಳ್ಳುವ ಬಗ್ಗೆ ಅಧ್ಯಾಪಕರು, ಸಂಶೋಧಕರು ಮತ್ತುವಿದ್ವಾಂಸರೊಂದಿಗೆ ಚರ್ಚಿಸಿದರು.
ಚೆನ್ನೈ ಮೇಯರ್ ಆರ್.ಪ್ರಿಯಾ ಮತ್ತು ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಕಮಿಷನರ್ ಜೆ. ಕುಮಾರಗುರುಬರನ್‌ರೊಂದಿಗಿನ ಸಭೆಯ ಸಂದರ್ಭದಲ್ಲಿ, ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕ ಕಾರ್ಯದರ್ಶಿ ಲಿಟಲ್‌ಜಾನ್ ಮತ್ತು ಚೆನ್ನೈ ಕಾನ್ಸುಲ್ಜನರಲ್ ಕ್ರಿಸ್ ಹಾಡ್ಜಸ್ ನದಿಗಳು, ಸರೋವರಗಳು ಮತ್ತು ಜೌಗುಪ್ರದೇಶಗಳು ಸೇರಿದಂತೆ ಸಿಹಿನೀರಿನ ಪರಿಸರ ವ್ಯವಸ್ಥೆಗಳ ಪ್ರಾಮುಖ್ಯತೆಯನ್ನು ಹವಾಮಾನ ಬದಲಾವಣೆ ನಿಯಂತ್ರಿಸಲು ಮತ್ತು ಹೊಂದಿಕೊಳ್ಳುವ ಕುರಿತು ಚರ್ಚಿಸಿದರು.
ನಗರ ಯೋಜನೆ ಮತ್ತು ಪರಿಸರ ಉಸ್ತುವಾರಿಯಲ್ಲಿ ಸುಸ್ಥಿರ ನೀರಿನ ನಿರ್ವಹಣೆಯ ನಿರ್ಣಾಯಕ ಪಾತ್ರವನ್ನು ಚರ್ಚೆ ಒತ್ತಿಹೇಳಿತು. ಹಂಗಾಮಿ ಸಹಾಯಕ ಕಾರ್ಯದರ್ಶಿ ಲಿಟಲ್‌ಜಾನ್ ಅವರು Ambassador's Water Experts Program ಮೂಲಕ ಚೆನ್ನೈನೊಂದಿಗೆ ಸಹಕರಿಸಲು ಯುನೈಟೆಡ್ ಸ್ಟೇಟ್ಸ್‌ನ ಬದ್ಧತೆಯನ್ನು ಒತ್ತಿಹೇಳಿದರು. ಇದು ನದಿ ಪುನರುಜ್ಜೀವನಕ್ಕಾಗಿ, ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಲ್ಲಿ ಸಿಸ್ಟರ್ ಸಿಟಿ ಮತ್ತು ಇತರ ಪಾಲುದಾರಿಕೆಗಳ ಮೂಲಕ ನಗರವನ್ನು ಬೆಂಬಲಿಸುವ ಗುರಿಯನ್ನುಹೊಂದಿದೆ.
ಅಮೇರಿಕದ ವಿದೇಶಾಂಗ ವ್ಯವಹಾರಗಳ ಹಂಗಾಮಿ ಸಹಾಯಕಕಾರ್ಯದರ್ಶಿ ಲಿಟಲ್‌ಜಾನ್ ಅವರು ಸುಸ್ಥಿರ ಅಭ್ಯಾಸಗಳನ್ನು ಮುಂದುವರಿಸುವಲ್ಲಿ ಸಹಕಾರಿ ಪ್ರಯತ್ನಗಳನ್ನು ಅನ್ವೇಷಿಸಲು ನದಿಪುನರುಜ್ಜೀವನ ಮತ್ತು ಪರಿಸರ ನಾಗರಿಕ ಸಮಾಜದ ಪ್ರತಿನಿಧಿಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ವಿನಿಮಯಕಾರ್ಯಕ್ರಮಗಳಲ್ಲಿ ಭಾಗಿಯಾದವರನ್ನು ಭೇಟಿ ಮಾಡಿದರು.












Click it and Unblock the Notifications