ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.21: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್

By Mahesh
|
Google Oneindia Kannada News

ಬೆಂಗಳೂರು, ಸೆ.21: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

13.15: ಭಾರತದೊಳಗೆ ನುಗ್ಗಲು ಉಗ್ರ ಸಂಘಟನೆ ಅಲ್ ಖೈದಾದಿಂದ ಹೊಸ ಮಾರ್ಗ ಕಂಡುಕೊಂಡಿದೆ. ದಸರಾ ಸಂದರ್ಭದಲ್ಲಿ ಅಸ್ಸಾಂನ ಗಡಿಭಾಗದಿಂದ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ ಎಂದು ಅಸ್ಸಾಂನ ಮುಖ್ಯಮಂತ್ರಿ ತರುಣ್ ಗೋಗಾಯ್ ಎಚ್ಚರಿಸಿದ್ದಾರೆ.
12.45: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಅವರ ಪತ್ನಿ ನಳಿನಿ ಅವರನ್ನು ಸಿಬಿಐ ವಿಚಾರಣೆಗೊಳಪಡಿಲಾಗಿದೆ ಎಂದು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.

Terrorists

10.20: ಆಗುಂತಕನೊಬ್ಬ ಶ್ವೇತಭವನಕ್ಕೆ ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಶ್ವೇತಭವನದಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.
10.15: ಶಸ್ತ್ರಗಳೊಂದಿಗೆ ಅಮೆರಿಕದ ಶ್ವೇತ ಭವನಕ್ಕೆ ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು 42 ವರ್ಷ ವಯಸ್ಸಿನ ಉಮರ್ ಗೊನ್ಜಾಲೆಜ್ ಎಂದು ಗುರುತಿಸಲಾಗಿದೆ.

Barack Obama

10.00: ದೆಹಲಿ ಪೊಲೀಸ್ ಠಾಣೆ ಬಳಿ ಅಕಸ್ಮಾತ್ ಆಗಿ ಗುಂಡು ಹಾರಿದ ಘಟನೆ ನಡೆದಿದ್ದು, ಒಬ್ಬ ಸಬ್ ಇನ್ಸ್ ಪೆಕ್ಟರ್ ಗೆ ಗಾಯಗಳಾಗಿವೆ.
9.45: ಟೀಮ್ಸ್ ನಿಯತಕಾಲಿಕೆಯಲ್ಲಿ ಬೆಂಗಳೂರಿನ ಆರ್ಕಿಟೆಕ್ಟ್ ಅಲೋಕ್ ಶೆಟ್ಟಿ ಅವರು ಸ್ಥಾನ ಪಡೆದಿದ್ದಾರೆ. ಭವಿಷ್ಯದ ಯುವ ನಾಯಕ ಎಂದು ಗುರುತಿಸಲಾಗಿದೆ.
9.30: ಏಷ್ಯನ್ ಗೇಮ್ಸ್ ನಿಂದ ಹಿಂದೆ ಸರಿದ ಸಾನಿಯಾ ಮಿರ್ಜಾ ಅವರು ಡಬ್ಲ್ಯೂಟಿಎ ಪ್ಯಾನ್ ಫೆಸಿಫಿಕ್ ಓಪನ್ ಡಬಲ್ಸ್ ಗೆದ್ದಿದ್ದಾರೆ. ಟೋಕಿಯೋದಲ್ಲಿ ಜಿಂಬಾಬ್ವೆಯ ಕಾರಾ ಬ್ಲಾಕ್ ಹಾಗೂ ಸಾನಿಯಾ ಜಯಭೇರಿ ಬಾರಿಸಿದ್ದಾರೆ.
9.15: ಮಹಾರಾಷ್ಟ್ರದಲ್ಲಿ ಬಿಜೆಪಿ ನೀಡಿದ ಸೀಟು ಹಂಚಿಕೆ ಆಫರ್ ಮತ್ತೊಮ್ಮೆ ರಿಜೆಕ್ಟ್ ಮಾಡಿದ ಶಿವಸೇನಾ
9.00: ಎನ್ ಸಿಪಿ ಹಾಗೂ ಕಾಂಗ್ರೆಸ್ ನಡುವೆ ಕೂಡಾ ಸೀಟು ಹಂಚಿಕೆ ವಿವಾದ ಮುಂದುವರೆದಿದ್ದು, ಒಮ್ಮತ ಮೂಡಿಲ್ಲ.
8.45:ಏಷ್ಯನ್ ಗೇಮ್ಸ್ 2014: ನಿನ್ನೆ ಚಿನ್ನ ಗೆದ್ದಿದ್ದ ಜೀತೂ ರೈ ಅವರು 10 ಮೀ ಪಿಸ್ತೂಲ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಐದನೇ ಸ್ಥಾನ ಗಳಿಸಿದ್ದಾರೆ.
8.30: ಏಷ್ಯನ್ ಗೇಮ್ಸ್ 2014: 10 ಮೀ ಪಿಸ್ತೂಲ್ ಶೂಟಿಂಗ್ ಟೀಂ ಸ್ಪರ್ಧೆಯಲ್ಲಿ ಭಾರತ ತಂಡ ಕಂಚಿನ ಪದಕ ಗೆದ್ದಿದೆ. [ವರದಿ ಇಲ್ಲಿ ಓದಿ]
English summary
Top news in brief for the day: The man arrested in Texas on Friday for intruding into the White House was armed with a knife, the US Attorney's Office said on Saturday, the Reuters reported. The intruder climbed the fence and made it into the mansion after President Barack Obama had left. and many more news from across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X